ಆನೆಗೊಂದಿ ಉತ್ಸವ ಜನೋತ್ಸವವಾಗಿದೆ: ನಲಿನ್ ಅತುಲ್
Kannadanet 24×7 News ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಆನೆಗೊಂದಿ ಉತ್ಸವವು ಜನೋತ್ಸವವಾಗಿ ಯಶ ಕಂಡಿದೆ ಎಂದು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಇವರ ಸಹಯೋಗದಲ್ಲಿ ಆನೆಗೊಂದಿಯ ತಳವಾರಘಟ್ಟ ರಸ್ತೆಯ ಶ್ರೀರಂಗದೇವರಾಯಲು ವೇದಿಕೆಯಲ್ಲಿ ಮಾರ್ಚ್ 12ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಆನೆಗೊಂದಿ ಉತ್ಸವಕ್ಕೆ ಮಾರ್ಚ 11ರಂದು ಚಾಲನೆ ನೀಡಲಾಯಿತು. ಆದರೆ, ಉತ್ಸವದ ಹಿನ್ನೆಲೆಯಲ್ಲಿ ಕ್ರೀಡಾ ಇಲಾಖೆಯಿಂದ ಕ್ರೀಡಾಕೂಟಗಳು, ರಂಗೋಲಿ ಸೇರಿದಂತೆ ಬೇರೆ ಬೇರೆ ಸ್ಪರ್ಧೆಗಳು ಮಾರ್ಚ 8ರಿಂದಲೇ ನಡೆದಿವೆ. ಉದ್ಘಾಟನಾ ಸಮಾರಂಭವು ಅದ್ಧೂರಿಯಾಗಿ ನಡೆದಿದೆ. ಎರಡು ವೇದಿಕೆಯಲ್ಲಿ ಬೇರೆ ಬೇರೆ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ. ಹೀಗಾಗಿ ಐತಿಹಾಸಿಕ ಆನೆಗೊಂದಿ ಉತ್ಸವವು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿದೆ ಎಂದು ಹೇಳಲು ಸಂತಸ ಅನಿಸುತ್ತದೆ ಎಂದು ತಿಳಿಸಿದರು.
ಉತ್ಸವಕ್ಕೆ ನಿಗದಿಯಾದ ದಿನದಿಂದಲು ನಾವು ಆನೆಗೊಂದಿ ಮತ್ತು ಅಂಜನಾದ್ರಿಯ ಬಗ್ಗೆ ಮಾತನಾಡುತ್ತಿದ್ದೇವೆ. ಈ ಪ್ರದೇಶದ ಇತಿಹಾಸ ಎಲ್ಲರಿಗೂ ತಿಳಿದಿದೆ. ಇಲ್ಲಿನ ವಿಶೇಷ ಇತಿಹಾಸದ ಮಾಹಿತಿಯನ್ನು ವಿದ್ಯಾರ್ಥಿ ಯುವಜನರಿಗೆ ಮತ್ತೆ ಮತ್ತೆ ತಿಳಿಸಬೇಕು. ನಾಡು ನುಡಿ ಇತಿಹಾಸದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯೋಜಿಸಿ ರೂಪಿಸಿದ ಕಾರ್ಯಕ್ರಮ ಈ ಉತ್ಸವ ಆಗಿದೆ ಎಂದರು.
ಈ ಉತ್ಸÀವಕ್ಕೆ ದಿನಾಂಕ ನಿಗದಿಯಾದಾಗ ಸಿದ್ಧತೆ ಮಾಡಲು ಸಮಯದ ಅವಕಾಶ ಕಡಿಮೆ ಇತ್ತು. ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಜನಾರ್ಧನ ರೆಡ್ಡಿ ಅವರು ಅಧಿಕಾರಿಗಳ ಸಭೆ ನಡೆಸಿ ಚಾಲನೆ ನೀಡಿದರು. ಬಳಿಕ ಸಮಿತಿಗಳನ್ನು ರಚಿಸಿ ನಾನಾ ಕಾರ್ಯ ಮಾಡಿದ್ದರಿಂದ ಉತ್ಸವ ನಡೆಯಿತು. ಹೀಗಾಗಿ ಸಚಿವರು ಮತ್ತು ಶಾಸಕರಿಗೆ ಅಭಿನಂದನೆ ತಿಳಿಸುವೆ ಎಂದರು.
ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಬಯಸುವಂತೆ ಅಂಜನಾದ್ರಿಯ ಸಮಗ್ರ ಅಭಿವೃದ್ಧಿಯ ಕಾರ್ಯಗಳು ನಿರಂತರವಾಗಿ ನಡೆಸಲು ಪ್ರವಾಸೋದ್ಯಮ ಇಲಾಖೆಯೊಂದಿಗೆ ಜಿಲ್ಲಾಡಳಿತವು ನಿರಂತರ ಕಾರ್ಯ ಮಾಡುತ್ತಿದೆ. ಅಂಜನಾದ್ರಿಯ ಸಮಗ್ರ ಅಭಿವೃದ್ಧಿಗಾಗಿ ಈಗಾಗಲೇ ರಾಜ್ಯ ಸರ್ಕಾರದಿಂದ 100 ಕೋಟಿ ರೂ.ಗಳ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ ಯೋಜನೆಯಡಿ ಕಾಮಗಾರಿಗಳನ್ನು 100 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ನಿಗಮ ಬೆಂಗಳೂರ ಇವರ ಮೂಲಕ ಅನುಷ್ಠಾನಗೊಳಿಸಲು ಸರ್ಕಾರವು 2022ರಲ್ಲಿ ಅನುಮೋದನೆ ನೀಡಿದೆ. ಕೆಟಿಐಎಲ್ ಸಂಸ್ಥೆಯಿAದ ಟೆಂಡರ್ ಕರೆದು ಗುತ್ತಿಗೆದಾರರಿಗೆ ಕಾಮಗಾರಿಗಳ ವಹಿಸಲಾಗಿದೆ. ಇದರಡಿ 9.98 ಕೋಟಿ ರೂ. ವೆಚ್ಚದಲ್ಲಿ ಪ್ರವಾಸಿ ಮಂದಿರ ನಿರ್ಮಾಣ ಕಾಮಗಾರಿ, 4.32 ಕೋಟಿ ರೂ. ವೆಚ್ಚದಲ್ಲಿ ಪ್ರದಕ್ಷಣ ಪಥ ನೆಲಹಾಸು ನಿರ್ಮಾಣ ಕಾಮಗಾರಿ, 7.24 ಕೋಟಿ ರೂ. ವೆಚ್ಚದಲ್ಲಿ ಶ್ಯಾಪಿಂಗ್ ಕಾಂಪ್ಲೆಕ್ಸ್ ಮತ್ತು ಶೌಚಾಲಯ ನಿರ್ಮಾಣ ಕಾಮಗಾರಿ ಸೇರಿ ಅಂದಾಜು 21.57 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಕೇAದ್ರ ಪ್ರವಾಸೋದ್ಯಮ ಮಂತ್ರಾಲಯದ ಸ್ವದೇಶ್ ದರ್ಶನ್ 2.0 ಯೋಜನೆಯಡಿ ಅನುಮೋದನೆಗೊಂಡಿರುವ ಹಂಪಿ ಯೋಜನೆಯ ಕಾಮಗಾಯಡಿ ಅಂಜನಾದ್ರಿ ಬೆಟ್ಟದ ಪಾರ್ಕಿಂಗ್ ಪ್ರದೇಶದಲ್ಲಿ ಸಹ ವಿವಿಧೆಡೆ ನಾನಾ ಕಾಮಗಾರಿಗಳನ್ನು 1.06 ಕೋಟಿ ರೂ.ಗಳ ವೆಚ್ಚದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಅದೇ ರೀತಿ ಆನೆಗೊಂದಿಯ ಗಗನ್ ಮಹಲ್ ಹತ್ತಿರದಲ್ಲಿ ಸಹ ವಿವಿಧ ಕಾಮಗಾರಿಗಳನ್ನು 46 ಲಕ್ಷ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಇತ್ತೀಚೆಗೆ ನಾವು ಬ್ರಾö್ಯಂಡ್ ಕೊಪ್ಪಳ ಲೋಗೊ ಅನಾವರಣ ಮಾಡಿದ್ದೇವೆ. ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡಬೇಕು ಎಂಬುದು ನಮ್ಮ ಆಶಯವಾಗಿದೆ. ಈ ಭಾಗದಲ್ಲಿ ಅನೇಕ ಪ್ರಾಚೀನ ಸ್ಥಳಗಳಿವೆ. ಕೊಪ್ಪಳ ಜಿಲ್ಲೆಯಲ್ಲಿ ಇಂತಹ ಪ್ರದೇಶಗಳಿವೆ ಬಂದು ನೋಡಿರಿ ಎನ್ನುವ ಸಂದೇಶವನ್ನು ಜಾಗತಿಕವಾಗಿ ರವಾನೆ ಮಾಡಲು ಯೋಜಿಸಿ ಈ ಬ್ರಾö್ಯಂಡ್ ಕೊಪ್ಪಳ ಲೋಗೊವನ್ನು ಅನಾವರಣಗೊಳಿಸಿದ್ದೇವೆ ಎಂದು ತಿಳಿಸಿದರು.
ಕೊಪ್ಪಳ ಜಿಲ್ಲೆಯು ಟೂರಿಸಂ ಹಬ್ ಆಗಿದೆ. ನಾವು ವಿಶೇಷವಾಗಿ ಆನೆಗೊಂದಿ ಭಾಗದಲ್ಲಿ ಇರುವ ಐತಿಹಾಸಿಕ ಸ್ಥಳಗಳ ಮಾಹಿತಿಯ ಒಂದು ವಿಡಿಯೋ ನಿರ್ಮಾಣ ಮಾಡಿದ್ದೇವೆ. ಈ ವಿಡಿಯೋ ವೀಕ್ಷಣೆ ಮಾಡಿದಲ್ಲಿ ಈ ಭಾಗದ ಎಲ್ಲ ಪ್ರವಾಸಿ ಸ್ಥಳಗಳ ಮಾಹಿತಿಯು ಗೊತ್ತಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ವಿಶೇಷ ಆಸಕ್ತಿ ವಹಿಸಿ ಈ ಆನೆಗೊಂದಿ ಉತ್ಸವದಲ್ಲಿ ಐತಿಹಾಸಿಕ ವಿಡಿಯೋ ಚಿತ್ರೀಕರಣವನ್ನು ಬಿಡುಗಡೆ ಮಾಡಿದೆ ಎಂದರು.
ಇದು ಹೊಸ ಹೊಸ ಟೆಕ್ನಾಲಜಿಯ ಯುಗ. ಸೋಷಿಯಲ್ ಮೀಡಿಯಾ ವೇಗವಾಗಿ ಬೆಳೆಯುತ್ತಿದೆ. ಫೇಸ್‌ಬುಕ್, ಇನಸ್ಟಾಗ್ರಾಮಂ, ಎಕ್ಸ್ ಟ್ವೀಟರ್ ಖಾತೆ ಬಳಕೆ ಮಾಡುವವರ ಸಂಖ್ಯೆ ದೊಡ್ಡದಿದೆ. ಐತಿಹಾಸಿಕ ಸ್ಥಳಗಳನ್ನು ಹೊಂದಿದ ಕೊಪ್ಪಳ ಜಿಲ್ಲೆಯನ್ನು ಟೂರಿಸಂ ಬ್ರಾö್ಯಂಡ್ ಮಾಡಬೇಕು ಎಂಬುದು ನಮ್ಮ ವಿಶಿಷ್ಟ ಯೋಜನೆಯಾಗಿದೆ. ಕನಕಗಿರಿ ಉತ್ಸವದಲ್ಲಿ ಬಿಡುಗಡೆ ಮಾಡಿದ ಕೊಪ್ಪಳ ಬ್ರಾö್ಯಂಡ್ ಮತ್ತು ಆನೆಗೊಂದಿ ಉತ್ಸವದಲ್ಲಿ ಬಿಡುಗಡೆ ಮಾಡಿದ ವಿಡಿಯೋವನ್ನು ಜಿಲ್ಲೆಯ ಪ್ರತಿಯೊಬ್ಬರು ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಬೇಕು. ವಿಡಿಯೋ ಲಿಂಕ್‌ನ್ನು ಶೇರ್ ಮಾಡಬೇಕು ಎಂದು ಕೋರುತ್ತೇನೆ. ಇಂತಹ ಹೊಸ ಹೊಸ ಪ್ರಯೋಗ ಮತ್ತು ಪ್ರಯತ್ನಗಳಿಂದ ಮಾತ್ರ ನಾವು ನಮ್ಮ ಜಿಲ್ಲೆಯ ವಿಶೇಷತೆಯನ್ನು ಬೇರೆಯವರಿಗೆ ಹೇಳಲು ಮತ್ತು ನಮ್ಮ ಜಿಲ್ಲೆಯ ವಿಶೇಷತೆಯನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂಬುದು ನಮ್ಮ ತಿಳಿವಳಿಕೆಯಾಗಿದೆ ಎಂದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ನಡೆದ ಈ ಉತ್ಸವದ ಯಶಸ್ಸಿಗೆ 18 ಸಮಿತಿಗಳಲ್ಲಿನ ಅಧಿಕಾರಿಗಳು ಶ್ರಮಿಸಿದ್ದಾರೆ. ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ನೋಡಲ್ ಅಧಿಕಾರಿಯಾಗಿ, ಗಂಗಾವತಿಯ ತಹಸೀಲ್ದಾರ ನಾಗರಾಜ, ತಾಲೂಕು ಪಂಚಾಯತ್ ಇಓ ಲಕ್ಷಿö್ಮದೇವಿ ಅವರು ಉತ್ಸವದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಕಂದಾಯ, ಕೃಷಿ, ತೋಟಗಾರಿಕೆ, ಆಹಾರ ಇಲಾಖೆ, ಕ್ರೀಡಾ ಇಲಾಖೆ, ವಾರ್ತಾ ಇಲಾಖೆ, ಆರೋಗ್ಯ ಇಲಾಖೆ, ಉದ್ಯೋಗ ಇಲಾಖೆ, ಕಾರ್ಮಿಕ ಇಲಾಖೆ ಸೇರಿದಂತೆ ಇನ್ನೂ ಅನೇಕ ಇಲಾಖೆಯ ಅಧಿಕಾರಿಗಳು ಶ್ರಮಿಸಿದ್ಧಾರೆ ಎಲ್ಲರಿಗೂ ಅಭಿನಂದನೆ ತಿಳಿಸುವೆ ಎಂದರು.
ಜಿಲ್ಲಾಡಳಿತ ಪ್ರೀತಿಯ ಆಹ್ವಾನದಂತೆ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮ ನೀಡಿದ ಎಲ್ಲ ಕಲಾವಿದರಿಗೆ, ಕವಿಗಳು, ಸಾಹಿತಿಗಳು, ವಾರಕ್ಕೂ ಹೆಚ್ಚು ಕಾಲ ನಿರಂತರ ಸುದ್ದಿ ಮಾಡಿ ಲೇಖನ ಬರೆದು ಪ್ರಚಾರ ನೀಡಿದ ಮಾಧ್ಯಮ ಪ್ರತಿನಿಧಿಗಳಿಗೆ ವಿಶೇಷವಾದ ಅಭಿನಂದನೆ ತಿಳಿಸುವೆ ಎಂದರು.
ಕಾರ್ಯಕ್ರಮಕ್ಕೆ ಸೂಕ್ತ ಭದ್ರತೆ ನೀಡಿದ ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿ ಶ್ರಮವು ಶ್ಲಾಘನೀಯವಾಗಿದೆ. ಎರಡು ದಿನಗಳ ಕಾಲ ಹೆಚ್ಚಿನ ಸಂಖ್ಯೆಯಲ್ಲಿ ಉತ್ಸವದ ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಿದ ಜಿಲ್ಲೆಯ ಜನತೆಗೆ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಅಭಿನಂದನೆ ತಿಳಿಸುವೆ ಎಂದು ತಿಳಿಸಿದರು.
Comments are closed.