ಇನ್ನುಂದೆ ಪ್ರತಿ ವರ್ಷವೂ ಆನೆಗೊಂದಿ ಉತ್ಸವ : ಜಿ.ಜನಾರ್ಧನ ರೆಡ್ಡಿ

Get real time updates directly on you device, subscribe now.

ಕನ್ನಡನೆಟ್ 24×7 News ಹಂಪಿ ಉತ್ಸವದಂತೆ ಇನ್ಮುಂದೆ ಪ್ರತಿವರ್ಷವೂ ಆನೆಗೊಂದಿ ಉತ್ಸವ ಆಚರಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ಗಂಗಾವತಿ ಶಾಸಕರಾದ ಜಿ.ಜನಾರ್ಧನ ರೆಡ್ಡಿ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಇವರ ಸಹಯೋಗದಲ್ಲಿ ಆನೆಗೊಂದಿಯ ತಳವಾರಘಟ್ಟ ರಸ್ತೆಯ ಶ್ರೀರಂಗದೇವರಾಯಲು ವೇದಿಕೆಯಲ್ಲಿ ಮಾರ್ಚ್ 12ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಆನೆಗೊಂದಿ ಉತ್ಸವವನ್ನು 2024ರ ಜನವರಿಯಲ್ಲಿ ಆಚರಿಸಬೇಕು ಎಂದು ಯೋಜಿಸಲಾಗಿತ್ತು. ಆದರೆ, ರಾಜ್ಯಾದ್ಯಂತ ಆವರಿಸಿದ್ದ ಬರ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈಬಿಡಲಾಯಿತು. ಮೈಸೂರು ದಸರಾ ಹಾಗೂ ಹಂಪಿ ಉತ್ಸವದಷ್ಟೇ ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗೊಂದಿ ಉತ್ಸವಕ್ಕು ಕೂಡ ಅಷ್ಟೇ ಮಹತ್ವ ಇದೆ ಎಂದು ಅರಿತು ನಾವು ಉತ್ಸವ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಆನೆಗೊಂದಿ ಉತ್ಸವ ಮಾಡಲೇಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಸಲಹೆ ಮಾಡಿದರು. ಅದರಂತೆ ಕನಕಗಿರಿ ಉತ್ಸವ ಮುಗಿದ ಕೂಡಲೇ ಆನೆಗೊಂದಿ ಉತ್ಸವದ ದಿನಾಂಕ ನಿಗದಿಪಡಿಸಲಾಯಿತು. ಸಮಯದ ಅವಕಾಶ ಕಡಿಮೆ ಇದ್ದರು ಸಹ ಅಚ್ಚುಕಟ್ಟಾಗಿ ಉತ್ಸವಕ್ಕೆ ಏರ್ಪಾಡು ಮಾಡುವಲ್ಲಿ ಶ್ರಮವಹಿಸಿದ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ ಅವರಿಗೆ ಮತ್ತ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಅಭಿನಂದನೆ ತಿಳಿಸುವೆ ಎಂದರು.
ಆನೆಗೊಂದಿ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ. ಕೆಲವು ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆಸಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಧರ್ಮಪತ್ನಿ ಲಕ್ಷಿö್ಮ ಅರುಣಾ ಪ್ರೇರಣೆ : ತಾವು ಕೈಗೊಳ್ಳುವ ಪ್ರತಿಯೊಂದು ಕಾರ್ಯಕ್ಕು ತಮ್ಮ ಧರ್ಮಪತ್ನಿ ಲಕ್ಷಿö್ಮ ಅರುಣಾ ಅವರು ಒತ್ತಾಸೆಯಾಗಿದ್ದು, ಸದಾಕಾಲ ತಮ್ಮ ಜೊತೆಗಿದ್ದು ಪ್ರೋತ್ಸಾಹಿಸುತ್ತಾರೆ. ತಮ್ಮ ಧರ್ಮಪತ್ನಿ ಲಕ್ಷಿö್ಮ ಅರುಣಾ ತಮ್ಮ ಬೆನ್ನುಲುಬಿನಂತಿದ್ದಾರೆ ಎಂದು ಶಾಸಕರು ಇದೆ ವೇಳೆ ತಮ್ಮ ಪತ್ನಿಯ ಸಹಕಾರವನ್ನು ಸ್ಮರಿಸಿದರು.
ಸಮಾರಂಭದಲ್ಲಿ ರಾಜವಂಶಸ್ಥರಾದ ಲಲಿತಾ ರಾಣಿ ಶ್ರೀ ರಂಗದೇವರಾಯಲು, ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ ಅವರ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜವಂಶಸ್ಥರಾದ ರಾಣಿ ಚಂದ್ರಕಾAತ ದೇವಿ ರಾಜ ಶ್ರೀ ಅಚ್ಯುತ್ ದೇವರಾಯ, ರಾಜ ಶ್ರೀರಾಮ ದೇವರಾಯ ಎಂ ತಿರುಮಲದೇವರಾಯ, ಶ್ರೀ ವೀರ ರಾಘವ ರಾಜು ತಂ ಎನ್ ಕೆ ರಾಮರಾಜು, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಸ್ವಾಗತ ಕೋರಿದರು. ಸಮಾರಂಭದಲ್ಲಿ ಕೊಪ್ಪಳ ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಕೆ.ಮಹಾದೇವಿ, ಉಪಾಧ್ಯಕ್ಷರಾದ ಪೂರ್ಣೀಮಾ, ಶಾಸಕರಾದ ಜನಾರ್ಧನ ರೆಡ್ಡಿ ಅವರ ಧರ್ಮಪತ್ನಿ ಲಕ್ಷಿö್ಮÃ ಅರುಣಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!