ಶಾದಿ ಮಹಲ್ ಕಟ್ಟಡಕ್ಕೆ ಭೂಮಿ ಪೂಜೆ ಕಾರ್ಯ..

Get real time updates directly on you device, subscribe now.

ಭಾಗ್ಯನಗರ : ಭಾಗ್ಯನಗರ ಪಟ್ಟಣದ ಮುಸ್ಲಿಂ ಸಮಾಜದ ಶಾಧಿ ಮಹಲ್ ಕಟ್ಟಡಕ್ಕೆ ಇಂದು ಭೂಮಿ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಒಂದು ಕೋಟಿ ರೂಪಾಯಿ ಅನುದಾನದ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶಾದಿ ಮಹಲ್ ಕಟ್ಟಡಕ್ಕೆ ಅಡಿಗಲ್ಲು ಸಮಾರಂಭ ಹಾಗೂ ಭೂಮಿ ಪೂಜೆ ಕಾರ್ಯಕ್ರಮ ಇಂದು ಭಾಗ್ಯನಗರದ ಈದಗಾ ಮೈದಾನದ ಪಕ್ಕದಲ್ಲಿರುವ ಜಾಗದಲ್ಲಿ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ವಕೀಲರು ಹಾಗೂ ಸಮಾಜದ ಮುಖಂಡರಾದ ಎಸ್ ಅಸೀಫ ಅಲಿ, ಭಾಗ್ಯನಗರದ ಜಾಮಿಯಾ ಮಜೀದ್ ಕಮಿಟಿಯ ಅಧ್ಯಕ್ಷರಾದ ಇಬ್ರಾಹಿಂಸಾಬ್ ಬಿಸರಳ್ಳಿ, ಉಪಾಧ್ಯಕ್ಷರಾದ ಮೌಲಾಹುಸೇನ್ ಹಣಗಿ ಪಟ್ಟಣ ಪಂಚಾಯತ್ ಸದಸ್ಯರಾದ ಹೊನ್ನೂರ ಬೈರಾಪುರ, ರೋಷನ್ , ಕೆ ಎಮ್ ಸೈಯದ್ ಕಾಟನ್ ಪಾಷಾ ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಮಹಬೂಬ್ ಬಳಿಗಾರ್, ಮುಖಂಡರಾದ ಕೃಷ್ಣ ಇಟ್ಟಂಗಿ, ಉದ್ಯಮಿಗಳು ಹಾಗೂ ಸಮಾಜ ಸೇವಕರಾದ ಶ್ರೀನಿವಾಸ್ ಗುಪ್ತ, ಯಮನಪ್ಪ ಕಬ್ಬೇರ್ , ದಾನಪ್ಪ ಜಿಕೆ , ಕಬೀರ್ ಸಾಬ್, ಬಾಬಾ ಪಟೇಲ್ , ಎಫ್ ಎ ನೂರಪಾಶ, ಮರ್ದಾನ ಸಾಬ್ ಹಿರೇ ಮಸೂತಿ, ಹಾಜಿ ಕುತ್ಬುದ್ದೀನ್ ಸಾಬ್ , ನೌಜನ್ ಕಮಿಟಿ ಶಾಖೆ ಬಾಬು ಸಾಬ್ ಮಾಲ್ದಾರ್  , ಮೌಲಾಹುಸೇನ, ಮರ್ದಾನಸಾಬ ಹಿರೇಮಸೂತಿ ಮೌಲಾ ಮೇಸ್ತ್ರಿ ರಾಜು ಕೊಟ್ಟೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!