ಕನ್ನಡ ಚಲಚಿತ್ರ ಖ್ಯಾತ ನಟ ಕೆ.ಶಿವರಾಮ ನಿಧನ ಸಂತಾಪ ಸಭೆ
ಕೊಪ್ಪಳ: ಕನ್ನಡದ ಖ್ಯಾತ ಚಲನಚಿತ್ರ ನಟ ಹಾಗೂ ಕೊಪ್ಪಳಕ್ಕೆ ಮೊದಲ ಜಿಲ್ಲಾಧಿಕಾರಿಯಾಗಿ ಆಡಳಿತ ನಡೆಸಿದ ಕೆ.ಶಿವರಾಮ ಅವರ ನಿಧನ ಕರ್ನಾಟಕ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ಕೊಪ್ಪಳದ ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರು ಹೇಳಿದರು. ಅವರು ಕೊಪ್ಪಳದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಸಂತಾಪ ಸಭೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಶೀವರಾಮ ಅವರು ಕೊಪ್ಪಳದ ಜನರ ಜತೆ ಅವಿನಾವ ಸಂಬಂಧ ಹೊಂದಿದ್ದರು ಎಂದು ಸ್ಮರಿಸಿದರು ಜೊತೆಗೆ ಅವರೊಂದಿಗೆ ಸಿನಿಮಾ ಮಾಡಿದ ನೆನಪುಗಳನ್ನು ಸ್ಮರಿಸಿಕೊಂಡರು.
ಡಾ.ಬಿ.ಜ್ಞಾನಸುಂದರ ಹಿರಿಯ ದಲಿತ ಮುಖಂಡರು ಮಾತನಾಡುತ್ತಾ, ದೇಶದಲ್ಲಿ ಪ್ರಥಮ ಬಾರಿಗೆ ಕನ್ನಡದಲ್ಲಿ IಂS ಪಾಸಾದ ಕೀರ್ತಿ ಇವರಿಗೆ ಸಲ್ಲುತ್ತದೆ. ಶಿವರಾಮ ಅವರ ಮತ್ತು ನಮ್ಮ ನಡುವೆ ಒಳ್ಳೆಯ ಗೆಳೆತನವಿತ್ತು. ಆಗ ಅವರು ಆಡಳಿತದಲ್ಲಿ ದಲಿತರಗಾಗಿ ಹಲವಾರು ಒಳ್ಳೆಯ ಕೆಲಸಗಳನ್ನು ಮಾಡುವುದರ ಜೊತೆಗೆ ಇಡೀ ಜಿಲ್ಲೆಗೆ ಹೆಸರುವಾಸಿಯಾಗಿದ್ದರು.
ಅದೇ ರೀತಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಸಾಹೇಬ ಡಾ.ಎನ್.ಮೂರ್ತಿ ಬಣ) ಸಂಘಟನೆಯ ಹಿರಿಯ ಮುಖಂಡರಾದ ರಾಮಣ್ಣ ಕಂದಾರಿ ಅವರು ಮಾತನಾಡುತ್ತಾ, ಶಿವರಾಮ ಅವರು ಚಲನಚಿತ್ರದ ಜೊತೆಗೆ ಆಡಳಿತದಲ್ಲಿ ಚುರುಕಾಗಿದ್ದರು. ಅವರ ಒಂದು ಆಡಳಿತ ಅವಧಿಯಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಇಡೀ ನವೆಂಬರ್ ತಿಂಗಳ ಪೂರ್ತಿ ಕೊಪ್ಪಳದ ತಾಲೂಕ ಕ್ರೀಡಾಂಗಣದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳ ಮಾಡುವುದರ ಮೂಲಕ ಕನ್ನಡದ ಹಿರಿಮೆಯನ್ನು ಹೆಚ್ಚಿಸಿದರು. ಜೊತೆಗೆ ಕೊಪ್ಪಳ ಜಿಲ್ಲೆಯನ್ನು ಇಡೀ ಕರ್ನಾಟಕಕ್ಕೆ ಹೆಸರುವಾಸಿಯನ್ನಾಗಿ ಮಾಡಿದರು ಎಂದು ಸ್ಮರಿಸಿದರು.
ಅದೇ ರೀತಿ ಚಲನಚಿತ್ರ ನಟ ಹಾಗೂ ನಿರ್ದೇಶಕ ಬಸವರಾಜ ಕೊಪ್ಪಳ ರವರು ಶಿವರಾಮ ಅವರ ಆಡಳಿತ ಮತ್ತು ಚಲನಚಿತ್ರ ಕುರಿತು ನುಡಿ ನಮನ ಮಾಡಿದರು.
ಅದೇ ರೀತಿ ಇನ್ನೊಬ್ಬ ಅತಿಥಿ ಕರ್ನಾಟಕ ಪಂಚಾಯತ್ ರಾಜ ನೌಕರರ ಸಂಘದ ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹಲಗೇರಿ ಅವರು ಶಿವರಾಮ ಕುರಿತು ಭಾವುಕರಾಗಿ ಮಾತನಾಡಿ, ಸಂತಾಪ ಸಲ್ಲಿಸಿದರು.
ವೇದಿಕೆ ಮೇಲೆ ಕಲಾವಿದ ವಿರೇಶ ಬಡಗೇರಿ, ಕಾಶಪ್ಪ ಅಳ್ಳಳ್ಳಿ, ಶಿವಣ್ಣ, ರಮೇಶ ಹಾಗೂ ಇನ್ನಿತರ ಮುಖಂಡರು ಸಭೆ ಉಪಸ್ಥಿತರಿದ್ದು, ಸಂತಾಪ ಸೂಚಿಸಿದರು.
Comments are closed.