AIDYO ಸಂಘಟನೆ ನೇತೃತ್ವದಲ್ಲಿ ಕ್ರಾಂತಿಕಾರಿಗಳ ಪುಸ್ತಕಗಳ ಮಾರಾಟ…

Get real time updates directly on you device, subscribe now.

ಇಂದು AIDYO ( ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಶನ್ ) ನ 58ನೇ ಸಂಸ್ಥಾಪನ ದಿನ. ಇದರ ಪ್ರಯುಕ್ತ ಕ್ರಾಂತಿಕಾರಿಗಳ ಪುಸ್ತಕ ಮಾರಾಟ ಕಾರ್ಯಕ್ರಮವನ್ನು ಕೊಪ್ಪಳ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಕೊಪ್ಪಳ ಜಿಲ್ಲಾ ಸಮಿತಿಯಿಂದ ಆಯೋಜಿಸಲಾಗಿತ್ತು.
ಇಡೀ ದೇಶವ್ಯಾಪಿ ಉನ್ನತವಾದ ನೀತಿ ನೈತಿಕತೆಯ ಮೌಲ್ಯಗಳು ಮತ್ತು ರಾಜರಹಿತ ಹೋರಾಟವನ್ನು ಕಟ್ಟುತ್ತಿರುವ ಸಂಘಟನೆಯಾಗಿದೆ. ಇದರ ಭಾಗವಾಗಿ ಮಹಾನ್ ಕ್ರಾಂತಿಕಾರಿಗಳ ಪುಸ್ತಕ ಮಾರಾಟ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯು ಪ್ರಕಟಿಸಿರುವ ಧೀರ ಹುತಾತ್ಮ ಭಗತ್ ಸಿಂಗ್, ಸ್ವಾತಂತ್ರ್ಯ ಸಂಗ್ರಾಮದ ಅಗ್ನಿ ಯುಗದ ಹರಿಕಾರ ಖುದಿರಾಮ್ ಬೋಸ್, ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಚಿತ್ತಗಾಂಗ್ ಬಂಡಾಯದ ನೇತಾರ ಮಾಸ್ಟರ್ ದಾ ಸೂರ್ಯಸೇನ್ ಮತ್ತು ಸ್ವಾತಂತ್ರ್ಯ ಸಂಗ್ರಾಮದ ಸಮರ ಶೀಲ ನೇತಾರ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದವು.
ಎ ಐ ಡಿ ವೈ ಓ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ರಮೇಶ್ ವಂಕಲಕುಂಟಿ, ಜಿಲ್ಲಾ ಕಾರ್ಯದರ್ಶಿಗಳಾದ ಶರಣ ಬಸವ ಪಾಟೀಲ್ , ದೇವರಾಜ ಹೊಸ್ಮನಿ, ಇನ್ನಿತರ ಸದಸ್ಯರಾದ ಶ್ರೀಧರ , ಪರಶುರಾಮ ಇನ್ನಿತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: