ಹಜರತ್ ಮರ್ದಾನೆ ಗೈಬ್ ಉರುಸ್ : ಸಿದ್ಧತೆಗಳು ಸಂಪೂರ್ಣ -ಕಾಟನ್ ಪಾಷಾ
ಕೊಪ್ಪಳ : ಕೊಪ್ಪಳ ಜಿಲ್ಲೆಯ ಸೌಹಾರ್ದತೆ ತಾಣ, ಸರ್ವರ ಭಕ್ತಿಯ ಕೇಂದ್ರ ಎಂದೆ ಖ್ಯಾತಿಯಾಗಿರುವ ಹಜರತ್ ಮರ್ದಾನೆ ಗೈಬ್ ಉರುಸ್ ದಿ. 29ರಿಂದ ಆರಂಭವಾಗಲಿದೆ. ಗಂಧ ಕಾರ್ಯಕ್ರಮ. ದಿ. ೨೯-೨-೨೦೨೪ ರಂದು ಹಾಗೂ ಉರುಸ್ ಕಾರ್ಯಕ್ರಮ ಶುಕ್ರವಾರ ೧-೩-೨೦೨೪ ಹಾಗೂ ಜಿಯರತ್ ೨-೩೦೨೦೨೪ ಶನಿವಾರ ದಿನ ನಡೆಯಲಿದೆ. ಈ ಮೂರು ದಿನದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಕಾರ್ಯಕ್ರಮ ಸೇರಿದಂತೆ ಇತರ ಕಾರ್ಯಕ್ರಮಗಳು ನಡೆಯಲಿವೆ. ಗೌರಿ ಅಂಗಳದಲ್ಲಿರುವ ಸೈಯದ್ ಮಿನಜ್ ಶರೀಫ್ ಇವರ ಮನೆಯಿಂದ ಗಂಧವು ಸಾಯಂಕಾಲ 6 ಗಂಟೆಗೆ ಗಡಿಯಾರ ಕಂಬದ ಮಾರ್ಗವಾಗಿ ಜವಾಹರ್ ರಸ್ತೆಯಿಂದ ಸರ್ದಾರ್ ಓಣಿ ಕುರುಬರ ಓಣಿ ಮಾರ್ಗವಾಗಿ ಜವಹರ ರಸ್ತೆಯ ಮೂಲಕ ಹೊರಟು ದರ್ಗಾ ಕೆ ರಾತ್ರಿ 9:30 ಕ್ಕೆ ತಲುಪಲಿದೆ ನಂತರ ಗಂಧದ ಕಾರ್ಯಕ್ರಮ ನಡೆಯಲಿದೆ. ಸರ್ವ ಹಿಂದೂ ಮುಸ್ಲಿಂ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತರಾಗಬೇಕು ಎಂದು ದರ್ಗಾ ಕಮಿಟಿಯ ಅಧ್ಯಕ್ಷರಾದ ಕಾಟನ್ ಪಾಷಾ ಇವರು ವಿನಂತಿಸಿಕೊಂಡಿದ್ದಾರೆ.
ಇಂದು ಉರೂಸ್ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ನಡೆಯುತ್ತಿದ್ದ ಕಾಮಗಾರಿಗಳ ಸಿದ್ಧತೆಗಳನ್ನು ದರ್ಗಾ ಕಮಿಟಿಯ ಸದಸ್ಯರು ನಗರಸಭೆಯ ಕಮಿಷನರ್ ಪರಿಶೀಲನೆ ನಡೆಸಿದರು.
ಆಗಮಿಸುವ ಭಕ್ತರಿಗೆ ಮೂರು ದಿನ ಅನ್ನ ಸಂತರ್ಪಣೆ ನಡೆಯಲಿದೆ. ಶುಕ್ರವಾರ ರಾತ್ರಿ ನಡೆಯಲಿರುವ ಖವ್ವಾಲಿ ಕಾರ್ಯಕ್ರಮದಲ್ಲಿ ಬೆಳಗಾವಿಯ ಸೈಯದ್ ಮೋಸಿನ್ ಚಿಸ್ತಿ ಇವರ ತಂಡದಿಂದ ಕವಾಲಿ ಕಾರ್ಯಕ್ರಮ ನಡೆಸಿ ಕೊಡಲಿದೆ ಭಾಗವಹಿಸುವ ಭಕ್ತಾದಿಗಳಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ತಂಗುವುದಕ್ಕೆ ವ್ಯವಸ್ಥೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.
ಆಗಮಿಸುವ ಭಕ್ತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕುಡಿಯುವ ನೀರು, ಸ್ವಚ್ಛತೆ ಹಾಗೂ ವಿದ್ಯುತ್ ನ ಎಲ್ಲ ರೀತಿಯ ಪರಿಶೀಲನೆ ಮಾಡಿ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದ್ದು ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಕಮಿಷನರ್ ಗಣಪತಿ ಪಾಟೀಲ್ ಪರಿಶೀಲನೆ ನಡೆಸಿ ಹೇಳಿದರು.
ಈ ಸಂದರ್ಭದಲ್ಲಿ ಖತೀಬ್ ಬಾಷು ಮಂಡಳಿಯ ಉಪಾಧ್ಯಕ್ಷರಾದ ಬಾಬಾ ಅರಗಂಜಿ ಕಾರ್ಯದರ್ಶಿ ಲಾಲ್ ಸಾಬ್ ಮನಿಯರ್, ಖಜಾಂಚಿ ಮುನವ್ವರ ಅಲಿ, ಅಜೀಮ್ ಅತ್ತಾರ್ ರಾಜಹುಸೇನ್, ಮುನೀರ್ ಷರೀಫ್, ಅಬ್ದುಲ್ ರಹೀಂ , ಕಾಶಿಮಲಿ ರೇವಡಿ ಬಶೀರ್ ಅಹ್ಮದ್, ಅಯ್ಯುಬ ಅಡ್ಡೆವಾಲೆ ಹಾಗೂ ಶಿವಕುಮಾರ್ ಪಾವಲಿ , ನವೋದಯ ವಿರೂಪಾಕ್ಷಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
Comments are closed.