ಕೊಪ್ಪಳದ ಅಂಚೆ ಇಲಾಖೆಯ ಸಲಹಾ ಸಮಿತಿ ಸದಸ್ಯರಾಗಿ ರಾಜಶೇಖರ ಆಡೂರ ಆಯ್ಕೆ

Get real time updates directly on you device, subscribe now.


ಕೊಪ್ಪಳ : ಕೊಪ್ಪಳ ಪ್ರಧಾನ ಅಂಚೆ ಇಲಾಖೆಯ ಪೋಸ್ಟ್ ಫೋರಂ (ಸಲಹಾ ಸಮಿತಿ )ಗೆ ಸದಸ್ಯರನ್ನಾಗಿ ಶ್ರೀಗವಿಸಿದ್ದೇಶ್ವರ ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಜಶೇಖರ ಆಡೂರ ಹಾಗೂ ಇತರರನ್ನು ಅಂಚೆ ಇಲಾಖೆ ಆಯ್ಕೆ ಮಾಡಿದೆ.
ಸದಸ್ಯರಾಗಿ ವಿಜಯಲಕ್ಷ್ಮಿ ಎಚ್, ಪದ್ಮಾ ಜೈನ್, ಚೈತ್ರಾ ಪಾಟೀಲ್ ವಕೀಲರು, ಡಾ.ಶ್ರೀನಿವಾಸ ಹ್ಯಾಟಿ, ನಾಗರಾಜ್ ಡೊಳ್ಳಿನ್, ಸುದೇಶಕುಮಾರ ಪಟ್ಟಣಶೆಟ್ಟಿ ಆಯ್ಕೆಗೊಂಡಿದ್ದಾರೆ.
ಕೊಪ್ಪಳ ಪ್ರಧಾನ ಅಂಚೆ ಇಲಾಖೆಯ ಪೋಸ್ಟ್ ಫೋರಂ (ಸಲಹಾ ಸಮಿತಿ )ಗೆ ಸದಸ್ಯ ರಾಜಶೇಖರ ಆಡೂರ ಪತ್ರಿಕೆಯೊಂದಿಗೆ ಮಾತನಾಡಿ ಅಂಚೆ ಇಲಾಖೆಗೆ ಸಂಬಂಧಿಸಿದ ಸಲಹೆ ಸೂಚನೆಗಳನ್ನು ನೀಡುತ್ತೇನೆ.ಅಲ್ಲಿಯ ಯೋಜನೆಗಳ ಅನು?ನಕ್ಕೆ ಪ್ರಯತ್ನಿಸುವೆ.ಸೇವೆಯನ್ನು ನೀಡುವಾಗ ಏನಾದರೂ ಕುಂದುಕೊರತೆಗಳು ಕಂಡು ಬಂದರೆ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ನೀಡಲು ಪ್ರಯತ್ನಿಸುವೆ.ಜನರ ಮತ್ತು ಇಲಾಖೆಯ ನಡುವೆ ಸ್ನೇಹ ಸೌಹಾರ್ದತೆಯ ಸೇತುವೆಯಾಗಿ ಕಾರ್ಯ ನಿರ್ವಹಿಸುವೆ ಅಲ್ಲದೆ ಅಂಚೆ ಇಲಾಖೆಯು ಜನಪರವಾಗಿ ಕೆಲಸ ಮಾಡಿ ದೇಶದಲ್ಲಿಯೇ ಮಹತ್ವ ಪಡೆಯುವಂತೆ ಮಾಡಲು ನನ್ನ ಸಹಕಾರ ಇದೆ ನನ್ನನ್ನು ಆಯ್ಕೆಗೊಳಿಸಿದ ಅಂಚೆ ಇಲಾಖೆಯನ್ನು ಅಭಿನಂದಿಸುವೆ ಎಂದರು.

Get real time updates directly on you device, subscribe now.

Comments are closed.

error: Content is protected !!
%d bloggers like this: