ಮಾಧ್ಯಮ ಪ್ರತಿನಿಧಿಗಳಿಂದ ಕೊಪ್ಪಳದಲ್ಲಿ ರೋಚಕ ಕ್ರಿಕೆಟ್ ಪಂದ್ಯ

Get real time updates directly on you device, subscribe now.


ಕನಕಗಿರಿ ಉತ್ಸವ-2024ರ ಪ್ರಚಾರಾರ್ಥವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಫೆಬ್ರವರಿ 27ರಂದು ಮಾಧ್ಯಮ ಪ್ರತಿನಿಧಿಗಳಿಂದ ರೋಚಕ ಕ್ರಿಕೆಟ್ ಪಂದ್ಯ ನಡೆಯಿತು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಕೊಪ್ಪಳದಲ್ಲಿ ಹಮ್ಮಿಕೊಂಡ ಮಾಧ್ಯಮ ಪ್ರತಿನಿಧಿಗಳ ಕ್ರಿಕೆಟ್ ಪಂದ್ಯದ ಮೂಲಕ ಉತ್ಸವಕ್ಕೆ ಶುಭಾರಂಭವಾಗಿದ್ದು ವಿಶೇಷವಾಗಿತ್ತು.‌
ಡಿ.ಸಿ., ಎಸ್ಪಿ ಅವರಿಂದ ವೀಕ್ಷಣೆ: ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ ಅವರು ಮಂಗಳವಾರ ಬೆಳಗ್ಗೆ ಜಿಲ್ಲಾ ಕ್ರೀಡಾಂಗಣಕ್ಕೆ
ಭೇಟಿ ನೀಡಿ ಕ್ರಿಕೆಟ್ ಪಂದ್ಯದಲ್ಲಿ ಪಾಲ್ಗೊಂಡು ಮಾಧ್ಯಮ ಪ್ರತಿನಿಧಿಗಳಿಗೆ ಸ್ಪೂರ್ತಿ ತುಂಬಿದರು. ಇದೆ ವೇಳೆ ಪತ್ರಕರ್ತರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ
ಗ್ರೂಪ್ ಫೋಟೋ ತೆಗೆಸಿಯಿಕೊಂಡು ಸಂಭ್ರಮಿಸಿದರು.
ಇದೆ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ಪ್ರತಿನಿತ್ಯ ಸುದ್ದಿಗಾರಿಕೆಯಲ್ಲಿ ನಿರತರಾಗಿರುವ ಮಾಧ್ಯಮ ಪ್ರತಿನಿಧಿಗಳಿಗೆ ಕನಕಗಿರಿ ಉತ್ಸವದ ಅಂಗವಾಗಿ ಕ್ರಿಕೆಟ್ ಏರ್ಪಡಿಸಿದ್ದು, ಇಂತಹ ಕ್ರೀಡೆಗಳಿಂದ ಒತ್ತಡ ನಿವಾರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಇದೆ ವೇಳೆ ಎಲ್ಲಾ ಮಾಧ್ಯಮ ಪ್ರತಿನಿಧಿಗಳಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ವಿಠ್ಠಲ್ ಜಾಬಗೌಡ್ರ, ವಾರ್ತಾ ಇಲಾಖೆಯ ಎಂ. ಅವಿನಾಶ, ತಿಪ್ಪಯ್ಯ ನಾಯ್ದು ಎಂ., ಮಾಧ್ಯಮ ಪ್ರತಿನಿಧಿಗಳು, ಕ್ರೀಡಾ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಮೋದ್ ಮುಖಂಡತ್ವದ ತಂಡಕ್ಕೆ ಜಯ: ಕ್ರಿಕೇಟ್ ಪಂದ್ಯದಲ್ಲಿ ಮೊದಲಿಗೆ ಬ್ಯಾಂಟಿಂಗ್ ಆಯ್ದುಕೊಂಡ ಸಿರಾಜ್ ಬಿಸರಳ್ಳಿ ಅವರ ನೇತೃತ್ವದ ಪತ್ರಕರ್ತರ ತಂಡವು 8 ಓವರಗಳಲ್ಲಿ 2 ವಿಕೇಟ್ ನಷ್ಟಕ್ಕೆ 75 ರನ್ ಗಳಿಸಿತು. ಬಳಿಕ ಬ್ಯಾಟಿಂಗ್ ಮಾಡಿದ ಪ್ರಮೋದ್ ಕುಲಕರ್ಣಿ ನೇತೃತ್ವದ ಪತ್ರಕರ್ತರ ತಂಡವು 4 ವಿಕೇಟ್ ನಷ್ಟಕ್ಕೆ 76 ರನ್‌ಗಳನ್ನು ಗಳಿಸುವ ಮೂಲಕ ಗೆಲುವು ಸಾಧಿಸಿತು. ಕೊನೆಯ ಕ್ಷಣದವರೆಗೂ ರೋಚಕತೆಯನ್ನು ಕಾಯ್ದುಕೊಂಡ ಈ ಕ್ರಿಕೆಟ್ ಪಂದ್ಯವು ತುಂಬಾ ಆಕರ್ಷಣೀಯವಾಗಿತ್ತು.

Get real time updates directly on you device, subscribe now.

Comments are closed.

error: Content is protected !!