ಕಾ|| ಭಾರಧ್ವಾಜ್ ಸಿ.ಪಿ.ಐ.ಎಂ.ಎಲ್ ಪಕ್ಷಕ್ಕೆ ಮರಳಿ ಸೇರ್ಪಡೆ – ವಿಜಯ ದೊರೆರಾಜು
ಗಂಗಾವತಿ: ಸಿ.ಪಿ.ಐ.ಎಂ.ಎಲ್ ಪಕ್ಷದಲ್ಲಿ ಕಾ|| ಭಾರಧ್ವಾಜರು ಸುಮಾರು ೨೩ ವರ್ಷಗಳಿಂದ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಾ, ಕಳೆದ ೦೬ ತಿಂಗಳ ಹಿಂದೆ ವೈಯಕ್ತಿಕ ಕಾರಣಗಳಿಂದ ಪಕ್ಷದಿಂದ ದೂರ ಸರಿದು ಪಕ್ಷದಲ್ಲಿನ ಜವಾಬ್ದಾರಿಗೆ ರಾಜೀನಾಮೆ ನೀಡಿದ್ದರು. ಪೌರಕಾರ್ಮಿಕರ ಹಾಗೂ ರೈಸ್ ಮಿಲ್ ಕಾರ್ಮಿಕರ, ಹಾಗೂ ಇನ್ನಿತರ ಸಂಘಟನೆಗಳ ಕಾರ್ಮಿಕರ ಒತ್ತಾಯದ ಮೇರೆಗೆ ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಪಕ್ಷಕ್ಕೆ ಮರಳಿ ಸೇರ್ಪಡೆಗೊಂಡಿರುವುದು ಅತೀವ ಸಂತಸ ತಂದಿದೆ ಎಂದು ಪಕ್ಷದ ಕೊಪ್ಪಳ ಜಿಲ್ಲಾ ಕಾರ್ಯದರ್ಶಿಯಾದ ವಿಜಯ್ ದೊರೆರಾಜು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿ.ಪಿ.ಐ.ಎಂ.ಎಲ್ ಪಕ್ಷಕ್ಕೆ ಭಾರಧ್ವಾಜ್‌ರವರು ಮರಳಿ ಸೇರ್ಪಗೊಳ್ಳುವ ಬಗ್ಗೆ ಕಾ|| ಕೆಂಚಪ್ಪ ಹಿರೇಖೇಡ, ಕಾ|| ಮಣಿ, ಕಾ|| ವಿಜಯ್ ಚರ್ಚಿಸಿ ಪಕ್ಷದ ರಾಜ್ಯ ಶಾಖೆಗೆ ತಿಳಿಸಿದರು. ನಂತರ ರಾಜ್ಯ ಸ್ಥಾಯಿ ಸಮಿತಿ ಸದಸ್ಯರೆಲ್ಲರೂ ಭಾರಧ್ವಾಜರಿಗೆ ಶುಭ ಕೋರಿ ಪಕ್ಷಕ್ಕೆ ಸ್ವಾಗತಿಸಿದರು.
ಇದೆ ಸಂದರ್ಭದಲ್ಲಿ ಪೌರಕಾರ್ಮಿಕರ ಸಂಘಟನೆಯ ಮುಖಂಡರಾದ ಪರಶುರಾಮ, ಬುಡ್ಡಪ್ಪ, ಹನುಮಂತಪ್ಪ, ಮಾಯಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Comments are closed.