ಹಣವಾಳ್, ಶ್ರೀರಾಮ್ ನಗರದಲ್ಲಿ ಸಂವಿಧಾನ ಜಾಗೃತಿ ಜಾಥಕ್ಕೆ ಅದ್ದೂರಿ ಸ್ವಾಗತ

Get real time updates directly on you device, subscribe now.

ಜಿಲ್ಲೆಯಲ್ಲಿ ಜನವರಿ 26 ರಿಂದ ಫೆಬ್ರವರಿ 23ರವರೆಗೆ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಗುರುವಾರದಂದು (ಫೆ.22) ಗಂಗಾವತಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆ ನಡೆಯಿತು.
ಗಂಗಾವತಿ ತಾಲ್ಲೂಕಿನ ಹೊಸ್ಕೇರಾ, ಜಂಗಮರ ಕಲ್ಗುಡಿ, ಮರಳಿ, ಡಣಾಪುರ ಹಾಗೂ ಚಿಕ್ಕಜಂತಕಲ್‌ಗೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆ ಗ್ರಾಮದಲ್ಲಿ ನಂದಿ ಕೋಲು, ಕುಂಭ ಮೆರವಣಿಗೆ, ಪೂಜಾ ಕಾರ್ಯಕ್ರಮದ ಮೂಲಕ ಸಂಭ್ರಮದ ಸ್ವಾಗತ ಕೋರಿದರು. ವಿವಿಧ ಗ್ರಾಮಗಳಲ್ಲಿ ಜಾಥಾ ಮೆರವಣಿಗೆಗೆ ಬೈಕ್ ರ‍್ಯಾಲಿ, ಪೂರ್ಣ ಕುಂಭದ ಮೂಲಕ ಅದ್ದೂರಿ ಸ್ವಾಗತ ಕೋರಲಾಯಿತು. ಜಾಥಾ ವೇಳೆ ಮಕ್ಕಳು ವಿವಿಧ ಛದ್ಮ ವೇಷಗಳಲ್ಲಿ ಮೆರವಣಿಗೆಗೆ ಮೆರುಗು ನೀಡಿದರು. ಹಾಗೂ ಗ್ರಾಮಗಳಲ್ಲಿ ಸಂವಿಧಾನ ಪೀಠಿಕೆ ಓದುವುದು, ಪ್ರಮುಖ ರಸ್ತೆಗಳಲ್ಲಿ ಶಾಲಾ ಮಕ್ಕಳು, ಗ್ರಾಮಸ್ಥರಿಂದ ಜಾಥಾವನ್ನು ನಡೆಸಲಾಯಿತು.
ಈ ಸಂದರ್ಭ ಗ್ರಾಮಗಳ ಮುಖಂಡರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಶಾಲಾ ಮಕ್ಕಳು, ಶಿಕ್ಷಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!