ಸಂಜೀವ್ ಕಿಶೋರ್ ಅವರನ್ನು ಭೇಟಿ ಮಾಡಿದ ಸಂಸದ ಸಂಗಣ್ಣ : ಶೀಘ್ರ ಅಗಳಕೇರ- ಬನ್ನಿಕೊಪ್ಪ ಮೇಲ್ಸೇತುವೆ ನಿರ್ಮಾಣ
ಕೊಪ್ಪಳ: ಲೋಕಸಭಾ ವ್ಯಾಪ್ತಿಯ ಅಗಳಕೇರ ಮತ್ತು ಬನ್ನಿಕೊಪ್ಪ ಬಳಿ ಶೀಘ್ರ ಮೇಲ್ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಸಂಸದ ಕರಡಿ ಸಂಗಣ್ಣ ಭರವಸೆ ನೀಡಿದರು.
ಕೊಪ್ಪಳ ಲೋಕಸಭಾ ವ್ಯಾಪ್ತಿಯ ರೈಲ್ವೆ ಅಭಿವೃದ್ಧಿ ಕಾಮಗಾರಿಗಳು, ಲೋಕಾರ್ಪಣೆಗೆ ಸಂಬಂಧಿಸಿದ ವಿಷಯಗಳ ಕುರಿತು ಪ್ರಧಾನ ವ್ಯವಸ್ಥಾಪಕರ ಸಂಜೀವ್ ಕಿಶೋರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಳೆದ 10 ವರ್ಷದಲ್ಲಿ ರೈಲ್ವೆ ಕ್ರಾಂತಿಯಾಗಿದೆ. ತಾಲೂಕುಗಳಿಗೆ ರೈಲು ಸಂಚಾರ ನಡೆಸಲಾಗುತ್ತಿದೆ. ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ಆಗುತ್ತಿವೆ. ಇಂದೆಂದೂ ಕಾಣದಂತ ಅಭಿವೃದ್ಧಿ ಕಳೆದ ಹತ್ತು ವರ್ಷದಲ್ಲಿ ಆಗಿದೆ. ಗಿಣಿಗೇರಾ – ಮಹೆಬೂಬ್ ನಗರ ರೈಲ್ವೆ ಯೋಜನೆಗೆ ಪ್ರಸ್ತುತ ಸಾಲಿನಲ್ಲಿ 300 ಕೋಟಿ ರೂ. ಹಾಗೂ ಗದಗ- ವಾಡಿ ಗೆ 350 ಕೋಟಿ ರೂ. ಮೀಸಲಿಡಲಾಗಿದೆ. ನಮ್ಮ ಬದ್ಧತೆಯಂತೆ ರೈಲ್ವೆ ಯೋಜನೆ ಪೂರ್ಣಗೊಳಿಸಲಾಗುತ್ತಿದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ 8 ವಿಧಾನಸಭಾ ಕ್ಷೇತ್ರಕ್ಕೆ ನೀಡಿದ ಭಾಗಶಃ ಭರವಸೆಗಳನ್ನು ಈಡೇರಿಸಿದ್ದೇವೆ. ಅಭಿವೃದ್ಧಿ ಕೆಲಸಗಳಿಂದ ಹಾಗೂ ಜನರ ಆಶೀರ್ವಾದ ದಿಂದ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸತತವಾಗಿ ಗೆಲುವು ಸಾಧಿಸಿದೆ. ಮತ್ತೊಮ್ಮೆ ಬಿಜೆಪಿ ಗೆಲ್ಲಿಸುವ ಮೂಲಕ ಮಾದರಿ ಕ್ಷೇತ್ರ ನಿರ್ಮಾಣ ಮಾಡುವೆ ಎಂದರು.
*ಸಭೆಯಲ್ಲಿ ಚರ್ಚಿಸಿದ ವಿಷಯಗಳು*
• ಮುನಿರಾಬಾದ್ ಮೆಹಬೂಬ್ ನಗರ ಮಾರ್ಗದಲ್ಲಿ ಕಾರಟಗಿಯಿಂದ ಸಿಂಧನೂರುವರೆಗೆ ರೈಲು ಸಂಚರಿಸಲು ಫೆಬ್ರುವರಿ ಅಂತ್ಯದೊಳಗಾಗಿ ದಿನಾಂಕ ನಿಗದಿ ಮಾಡುವ ಬಗ್ಗೆ.
• ಗದಗ ವಾಡಿ ಕುಷ್ಟಗಿ ವರೆಗೆ ರೈಲು ಸಂಚರಿಸಲು ಮಾರ್ಚ್ ಮೊದಲ ವಾರದಲ್ಲಿ ಸಾಧ್ಯತೆ.
• ಫೆಬ್ರವರಿ ಅಂತ್ಯದೊಳಗಾಗಿ ಸಿಂಧನೂರುವರೆಗೆ ರೈಲ್ವೆ ಸಂಚಾರ.
• ಅಗಳಕೆರೆ ಹಾಗೂ ಬನ್ನಿಕೊಪ್ಪ ಸೇತುವೆಗಳ ನಿರ್ಮಾಣದ ಕುರಿತು ಚರ್ಚೆ.
• ಶೀಘ್ರದಲ್ಲೇ ಗಂಗಾವತಿಯಿಂದ ಅಯೋಧ್ಯೆಗೆ ರೈಲು ಬಿಡುವ ಬಗ್ಗೆ ಚರ್ಚೆ.
• ಭಾನಾಪುರು ಎಲ್ ಸಿ ನಂ – 56 ಮೇಲ್ ಸೇತುವೆಯಲ್ಲಿ ವಾಹನಗಳ ಓಡಾಟಕ್ಕೆ ಅನು ಮಾಡಿಕೊಡುವ ಬಗ್ಗೆ ಚರ್ಚೆ.
• ಗಿಣಿಗೇರಿ ಮೇಲ್ ಸೇತುವೆ ಉದ್ಘಾಟನೆ ದಿನಾಂಕ ನಿಗದಿಪಡಿಸುವ ಬಗ್ಗೆ.
ರೈಲ್ವೆ ನಿಲ್ದಾಣ, ಮೇಲ್ಸೇತುವೆ ಕಾಮಗಾರಿ ಲೋಕಾರ್ಪಣೆಗೆ ದಿನಾಂಕ ನಿಗದಿ ಪಡಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಕೆಲ ಕಾಮಗಾರಿ ಗಳಿಗೆ ಶೀಘ್ರವೇ ಚಾಲನೆ ನೀಡಲಾಗುವುದು.– ಸಂಗಣ್ಣ ಕರಡಿ, ಸಂಸದರು.
Comments are closed.