ನಾಳೆ  ಅರ್ಚಕರು, ಪುರೋಹಿತರ ಸಂಘದಿಂದ ಸರ್ವಧರ್ಮ ಸಮಾವೇಶ : ಚಂದ್ರಶೇಖರಯ್ಯ ಶಾಸ್ತ್ರಿಗಳು 

Get real time updates directly on you device, subscribe now.

ಕೊಪ್ಪಳ: ನಗರದ ಜಿಲ್ಲಾ ಕ್ರೀಡಾಂಗಣ ಎದುರಿಗೆ ಸಪ್ತಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ರಾಜ್ಯ ವೀರಶೈವ ಜಂಗಮ ಅರ್ಚಕರ,ಪುರೋಹಿತರ ಇತರೆ ಸಂಘ ಶ್ರೀ ಅಮರನಾಥ ಗುರುಕುಲ ಬೆಳಗಾವಿ ಹಾಗೂ ಕೊಪ್ಪಳ ಜಿಲ್ಲಾ ವೀರಶೈವ ಜಂಗಮ ಅರ್ಚಕ ಪುರೋಹಿತರ ಸಂಘ ಕೊಪ್ಪಳ ಇವರ ಸಹಯೋಗದಲ್ಲಿ ಕೊಪ್ಪಳ ನಗರದಲ್ಲಿ ಪ್ರಪ್ರಥಮ ಬಾರಿಗೆ ರಾಷ್ಟ್ರಮಟ್ಟದ ಗುರು ಸಭಾರಿ ಪಟ್ಟಾಧಿಕಾರ ಹಾಗೂ ನಿರಂಜನ್ ಜಂಗಮ ಸೇವಾದೀಕ್ಷಾ, ಶಾಂಭವಿದೀಕ್ಷಾ ಪಟ್ಟಾಧಿಕಾರ ಪ್ರಾಯೋಗಿಕ ಕಾರ್ಯಗಾರ
ಶ್ರೀ ಆಸ್ಥಾನ ವಿದ್ವಾನ್ ನಂಜುಂಡರಾಧ್ಯರ ಜನ್ಮ ಶತಮಾನೋತ್ಸವ ಹಾಗೂ ನಾಗನೂರು ಬೃಹನ್ಮರಾಧ್ಯಕ್ಷರಾದ ವೇ।। ಪಂಡಿತ ಶ್ರೀ ಕಾಶಿನಾಥ ಶಾಸ್ತ್ರಿಗಳು ನಿಮಿತ್ಯ ಅರ್ಚಕರು, ಜ್ಯೋತಿಷಿಗಳಿಗೆ ಹಾಗೂ ಆಗಮಿಕರುಗಳಿಗೆ ಪುರೋಹಿತ ರತ್ನ ಪ್ರಶಸ್ತಿ ಕಾರ್ಯಕ್ರಮ ಪ್ರಪ್ರಥಮ ಬಾರಿಗೆ ಸರ್ವಧರ್ಮಿಯ ಪುರೋಹಿತ ಅರ್ಚಕ ಜ್ಯೋತಿಷ್ಯ ಹಾಗೂ ಆಗಮಿಕರ ಸಮ್ಮೇಳನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಪುರೋಹಿತರು, ಪೂಜ್ಯರು ಗಣ್ಯ ವ್ಯಕ್ತಿಗಳ ಭಾಗವಹಿಸಲಿದ್ದಾರೆ.ಸರ್ವ ಧರ್ಮೀಯರು ಭಾಗವಹಿಸಿ ಯಶಸ್ವಿಗೊಳಿಸಿ ಎಂದು  ರಾಜ್ಯಾಧ್ಯಕ್ಷ ವಿದ್ವಾನ್ ಚಂದ್ರಶೇಖರಯ್ಯ ಶಾಸ್ತ್ರಿಗಳು  ಹಾಗೂ ಜಿಲ್ಲಾಧ್ಯಕ್ಷ ರುದ್ರಯ್ಯ ಸ್ವಾಮಿ ಶಾಸ್ತ್ರಿ ಗಳು ಚೆನ್ನವಡೆಯರಮಠ, ಕಾರ್ಯದರ್ಶಿ ಸಿದ್ದಯ್ಯ , ಜಗದೀಶಶಾಸ್ತ್ರಿ ಸೇರಿದಂತೆ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!