ಮಕ್ಕಳ ಸಾಹಿತ್ಯ ಸಂಭ್ರಮಕ್ಕೆ ಅದ್ಧೂರಿ ಚಾಲನೆ

Get real time updates directly on you device, subscribe now.

): ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಕೊಪ್ಪಳ ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ ತಾಲೂಕ ಘಟಕ ಕೊಪ್ಪಳ, ಗಿಣಗೇರಿ, ಹಾಲವರ್ತಿ, ಗುಳದಳ್ಳಿ, ಬೇವಿನಹಳ್ಳಿ ಗ್ರಾಮ ಪಂಚಾಯತ ಸಂಯುಕ್ತಾಶ್ರಯದಲ್ಲಿ ಗಿಣಗೇರಿಯ ಮಣ್ಣು, ನೀರು ಮತ್ತು ಎಲೆ ವಿಶ್ಲೇಷಣಾ ಪ್ರಯೋಗಾಲಯ ಕೇಂದ್ರದಲ್ಲಿ ಫೆಬ್ರುವರಿ 14, 15, 16 ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ಕೊಪ್ಪಳ ತಾಲ್ಲೂಕ ಮಟ್ಟದ ಮಕ್ಕಳ ಸಾಹಿತ್ಯ ಸಂಭ್ರಮಕ್ಕೆ ಬುಧವಾರದಂದು ಅದ್ಧೂರಿ ಚಾಲನೆ ನೀಡಲಾಯಿತು.
ಮಕ್ಕಳ ಸಾಹಿತ್ಯ ಸಂಭ್ರಮಕ್ಕೆ ಬಂದ ಮಕ್ಕಳನ್ನು ಅದ್ಧೂರಿಯಾಗಿ, ಕಿರೀಟ ಹಾಕಿ, ಪುಷ್ಪ ನೀಡಿ ಮೆರವಣಿಗೆಯಲ್ಲಿ ಡೊಳ್ಳು ಬಾರಿಸುತ, ಹಾಡುಗಳನ್ನು ಹಾಡುತ್ತ ಬರಮಾಡಿಕೊಳ್ಳಲಾಯಿತು. ಮೆರವಣಿಗೆಗೆ ಗಿಣಗೇರಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಲಕ್ಷ್ಮೀ ಮೂರಮನಿ ಡೊಳ್ಳು ಬಾರಿಸುವುದರೊಂದಿಗೆ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟನೆ ಮಾಡಲಾಯಿತು. ಉದ್ಘಾಟನೆ ಬಳಿಕ ಜಿಲ್ಲಾ ಪಂಚಾಯತ ಮುಖ್ಯ ಯೋಜನಾ ಅಧಿಕಾರಿ ಮಂಜುನಾಥ ಅವರು ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಲು ಈ ತರಹದ ಶಿಬಿರಗಳು ಸಹಕಾರಿ. ನಿಮ್ಮಲ್ಲಿನ ಪ್ರತಿಭೆಗಳನ್ನು ಗುರುತಿಸಿ ಹೊರತೆಗೆಯುವ ಪ್ರಯತ್ನವನ್ನು ಸಂಪನ್ಮೂಲ ವ್ಯಕ್ತಿಗಳು ಮಾಡುತ್ತಾರೆ ಎಂದರು.
ಗಿಣಗೇರಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಕರಿಯಪ್ಪ ಮೇಟಿ ಮಾತನಾಡಿ, ಮಕ್ಕಳು ಈ ಶಿಬಿರದ ಪ್ರಯೋಜನ ಪಡೆದುಕೊಂಡು, ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಿ ಎಂದರು.
ಬೇವಿನಹಳ್ಳಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಮುರಳೀಧರ, ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಸಹಾಯಕ ನಿರ್ದೇಶಕ ಮಹೇಶ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನುಮಂತಪ್ಪ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಗೀತಾ ಕುಮಾರಿ, ಮಂಜುಳಾ, ಗುರುಸಿದ್ಧಪ್ಪ, ಮತ್ತಿತರರು ಹಾಜರಿದ್ದರು.
ಫಕೀರಪ್ಪ ಗುಳದಳ್ಳಿ ಪ್ರಾರ್ಥನೆಗೈದರು, ಹನುಮಂತಪ್ಪ ಕುರಿ ಸ್ವಾಗತಿಸಿದರು, ವಿರೇಶ ಮೇಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾಣೇಶ ಪೂಜಾರ ನಿರೂಪಿಸಿದರು, ಯಲ್ಲಪ್ಪ ವಂದಿಸಿದರು.
ಮೂರು ದಿನಗಳ ಕಾಲ ನಡೆಯಲಿರುವ ಮಕ್ಕಳ ಸಾಹಿತ್ಯ ಸಂಭ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ನಾಟಕ ವಿಭಾಗದಲ್ಲಿ ಲಕ್ಷ್ಮಣ ಪೀರಗಾರ, ಪ್ರಾಣೇಶ ಪೂಜಾರ, ರಾಮಣ್ಣ ಶ್ಯಾವಿ, ರಮೇಶ ಪೂಜಾರ, ಕವನ ವಿಭಾಗದಲ್ಲಿ ಶ್ರೀನಿವಾಸ ಚಿತ್ರಗಾರ, ಯಲ್ಲಪ್ಪ ಹರ್ನಾಳಗಿ, ಈರಪ್ಪ ಬಿಜಲಿ, ಶಂಕರ ಹರಟಿ, ಹನುಮಂತಪ್ಪ ಕುರಿ, ಕಥೆ ಕಟ್ಟೋಣ ವಿಭಾಗದಲ್ಲಿ ನಾಗರಾಜನಾಯಕ ಡೊಳ್ಳಿನ, ವಿಜಯಲಲಕ್ಷ್ಮೀ ಕೊಟಗಿ, ವಿರೇಶ ಮೇಟಿ, ದೀಪಾ, ನಾನು ರೀಪೊರ್ಟರ್ ವಿಭಾಗದಲ್ಲಿ ಮಂಜುನಾಥ, ವೀರಯ್ಯ, ಯಲ್ಲಪ್ಪ, ಫರೀದಾ ಅವರಿಂದ ಮಕ್ಕಳಿಗೆ ಮಾಹಿತಿ ನೀಡಲಿದ್ದಾರೆ.

Get real time updates directly on you device, subscribe now.

Comments are closed.

error: Content is protected !!