ರೈಲ್ವೆ ಕಾಮಗಾರಿ ಶೀಘ್ರ ಲೋಕಾರ್ಪಣೆ: ಸಂಗಣ್ಣ
ಕೊಪ್ಪಳ: ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಹಳಷ್ಟು ರೈಲ್ವೆ ಕಾಮಗಾರಿಗಳು ಪೂರ್ಣಗೊಂಡಿವೆ. ಶೀಘ್ರ ಲೋಕಾರ್ಪಣೆ ಗೊಳಿಸಲಾಗುವುದು ಎಂದು ಸಂಸದ ಸಂಗಣ್ಣ ಹೇಳಿದರು.
ನಗರದ ಕಿಡದಾಳ ರೈಲ್ವೆ ಗೇಟ್ ನಂ 68 ರಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯೋಜನಾ ವರದಿ ತಯಾರಿಸಲು ಬಂದ ಅಧಿಕಾರಿಗಳ ತಂಡದ ಜತೆಗೆ ತಾವು ಭೇಟಿ ನೀಡಿ ಮಾತನಾಡಿದರು.
ಕಿಡದಾಳ ರೈಲ್ವೆ ಗೇಟ್ ನಂ. 68 ರಲ್ಲಿ ಮೇಲ್ಸೇತುವೆ ನಿರ್ಮಾಣ ಯೋಜನೆ ಬಾಕಿ ಇತ್ತು. 2023 ಮೇ. 5ರಂದು ಕೇಂದ್ರ ಸರ್ಕಾರವು ರಾಜ್ಯದ 22 ಮೇಲ್ಸೇತುವೆ ಗೆ 795 ಕೋಟಿ ರೂ. ಮಂಜೂರು ಮಾಡಿತ್ತು. ಪ್ರಸಕ್ತ ವರ್ಷ 245 ಕೋಟಿ ರೂ. ಮೀಸಲಿಟ್ಟಿದೆ. ಯೋಜನಾ ವರದಿ ತಯಾರಿಸಲು ತಿಳಿಸಿತ್ತು. ಇದರಲ್ಲಿ ಕಿಡದಾಳ ರೈಲ್ವೆ ಗೇಟ್ ಸೇರಿತ್ತು. ಇಂದು ಡಿಪಿಆರ್ ತಯಾರಿಸಲು ಅಧಿಕಾರಿಗಳು ಬಂದು ಸ್ಥಳ ಪರಿಶೀಲಿಸಿದ್ದಾರೆ ಎಂದರು.
ಕುಷ್ಟಗಿ ರಸ್ತೆಯಲ್ಲಿ ನಿರ್ಮಿಸಿದಂತೆ ಜಾಸ್ತಿ ಪಿಲ್ಲರ್ ಗಳನ್ನು ಹಾಕಿ ಮೇಲ್ಸೇತುವೆ ನಿರ್ಮಿಸಲು ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ. ಅವರು ತಾಂತ್ರಿಕ ಹಿನ್ನೆಲೆಯಲ್ಲಿ ಕಾಮಗಾರಿ ನಡೆಸಲಿದ್ದಾರೆ. ಕಾಮಗಾರಿ 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಈ ವರ್ಷ ಮೀಸಲಿಟ್ಟ ಹಣದಲ್ಲಿ ಡಿಪಿಆರ್ ಸಿದ್ದವಾಗಲಿದೆ. ಮುಂದಿನ ವರ್ಷ ನೀಡುವ ಅನುದಾನದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದರು.
ಇತ್ತೀಚಿಗೆ ಕೇಂದ್ರ ಗೃಹಸಚಿವ ಅಮಿತಾ ಶಾ ರಾಜ್ಯಕ್ಕೆ ಭೇಟಿ ನೀಡಿದ್ದು, ರಾಜ್ಯದ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ತಿಳಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಹೊಂದಾಣಿಕೆ ಆಗಿದೆ. ವರಿಷ್ಠರ ತೀರ್ಮಾನದಂತೆ ಟಿಕೆಟ್ ಹಂಚಿಕೆಯಾಗಲಿದೆ ಎಂದರು.
Comments are closed.