ಜಾಜಿ ಸಂಶೋಧಕ ಮತ್ತು ವಿದ್ಯಾರ್ಥಿ ನೆಚ್ಚಿನ ಶಿಕ್ಷಕ; ರಮೇಶ ಗೊಬ್ಬರ

Get real time updates directly on you device, subscribe now.


ಕೊಪ್ಪಳ : ಡಾ. ಜಾಜಿ ದೇವೇಂದ್ರಪ್ಪನವರು ಒಬ್ಬ ಉತ್ತಮ ಸಂಶೋಧಕ ಜೊತೆಗೆ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕ ಎಂದು ಗಂಗಾವತಿ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಗ್ರಂಥಪಾಲಕರಾದ ರಮೇಶ ಗಬ್ಬೂರವರು ನುಡಿದರು. ಅವರು ಭಾಗ್ಯನಗರದ ಶಕ್ತಿ ಶಾರದೆಯ ಮೇಳದಿಂದ ಹಮ್ಮಿಕೊಂಡಿದ್ದ ವಿಚಾರ ಮಂಥನ ಕೂಟ – ೪೭ ರಲ್ಲಿ ಡಾ. ಜಾಜಿ ದೇವೇಂದ್ರಪ್ಪನವರ ಬದುಕು-ಬರಹ ಕುರಿತು ಮಾತನಾಡಿದರು. ಮುಂದುವರೆದು ಡಾ. ಜಾಜಿ ದೇವೇಂದ್ರಪ್ಪನವರು ಶಿಕ್ಷಕ ವೃತ್ತಿಯ ಜೊತೆಗೆ, ಸಾಹಿತ್ಯ, ಸಂಶೋಧನೆ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಅನನ್ಯ. ಅನೇಕ ಕಥೆ, ಕಾವ್ಯಗಳ ಮೂಲಕ ಒಬ್ಬ ಸಾಂಸ್ಕೃತಿಕ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದರು. ಡಾ. ಜಾಜಿ ದೇವೇಂದ್ರಪ್ಪನವರ ಕೃತಿಗಳ ಕುರಿತು ಮಾತನಾಡಿದ ಮಹೇಶ ಬಳ್ಳಾರಿಯವರು ಜಾಜಿಯವರ ಕೃತಿಗಳಲ್ಲಿ ಅಂತಃಪ್ರಜ್ಞೆ ಇದೆ. ಸಂಶೋಧನೆಯಲ್ಲಿ ಅವರ ಪಾಂಡಿತ್ಯ ಅಪಾರವಾದದ್ದು ಎಂದರು. ಈ ಕಾರ್ಯಕ್ರಮದಲ್ಲಿ ಪಿಎಚ್.ಡಿ ಪದವಿ ಪಡೆದ ಹನುಮಂತಪ್ಪ ಅಂಡಗಿ ಮತ್ತು ಮಂಜುನಾಥ ಬಡಿಗೇರ ಅವರನ್ನ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಮಾಲಾ ಬಡಿಗೇರವರು ವಹಿಸಿಕೊಂಡಿದ್ದರು. ಸಂಘಟಕರಾದ ಡಿ.ಎಂ ಬಡಿಗೇರವರು ಉಪಸ್ಥಿತರಿದ್ದರು. ಡಿ.ರಾಮಣ್ಣ ಮತ್ತು ಪವನಕುಮಾರವರು ಕಾರ್ಯಕ್ರಮ ನಿರ್ವಹಿಸಿದರು.

Get real time updates directly on you device, subscribe now.

Comments are closed.

error: Content is protected !!