ಜನರ ಸಮಸ್ಯೆಗಳನ್ನು ಬಗೆಹರಿಸಲು ಜನ ಸಂಪರ್ಕ ಸಭೆ: ಶಿವರಾಜ್ ಎಸ್. ತಂಗಡಗಿ
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಬೂದಗುಂಪಾ ಗ್ರಾ.ಪಂ ನಲ್ಲಿ ಜನ ಸಂಪರ್ಕ ಸಭೆ
Karatagi ಕ್ಷೇತ್ರದಲ್ಲಿನ ಗ್ರಾಮಸ್ಥರ ಕುಂದುಕೊರತೆಗಳನ್ನು ಈಡೇರಿಸಲು ಸಲುವಾಗಿಯೇ ಅಧಿಕಾರಿಗಳನ್ನ ಗ್ರಾಮಕ್ಕೆ ಕರೆದು ಜನ ಸಂಪರ್ಕ ಸಭೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರ ಹೇಳಿದರು.
ಕಾರಟಗಿ ತಾಲೂಕಿನ ಬೂದಗುಂಪಾ, ತಿಮ್ಮಾಪುರ ಹಾಗೂ ಹಾಲಸಮುದ್ರ ಗ್ರಾಮದಲ್ಲಿ ರವಿವಾರದಂದು ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚುನಾವಣಾ ಪೂರ್ವದಲ್ಲಿ ಕ್ಷೇತ್ರದ ಜನರ ವಿವಿಧ ಬೇಡಿಕೆಗಳಿಗೆ ಬಗೆಹರಿಸುತ್ತೆನೆಂದು ಮಾತು ಕೊಟ್ಟಂತೆ, ಚುನಾವಣೆಯಲ್ಲಿ ಗೆದ್ದ ನಂತರ ಮಾತಿಗೆ ತಪ್ಪದೆ ಪ್ರತಿಯೊಂದು ಗ್ರಾಮಕ್ಕೆ ಅಧಿಕಾರಿಗಳೊಂದಿಗೆ ಭೇಟಿ ಅಧಿಕಾರಿಗಳ ಸಮ್ಮುಖದಲ್ಲಿ ಬಗೆಹರಿಸಲು ತಮ್ಮ ತಮ್ಮ ಯಾವುದೇ ಬೇಡಿಕೆಗಳನ್ನು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೆನೆ ಎಂದರು.
ನಂತರ ಸರ್ಕಾರದ ಐದು ಗ್ಯಾರಂಟಿಗಳಾದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಈಗಾಗಲೇ ಪ್ರಾರಂಭವಾಗಿದ್ದು, ಗೃಹ ಲಕ್ಷ್ಮಿ ಯೋಜನೆ ಅಡಿ ಮನೆ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ, ಮುಂದಿನ ದಿನಗಳಲ್ಲಿ ಅನ್ನ ಭಾಗ್ಯ ಯೋಜನೆ ಅಡಿ ಬಿಪಿಎಲ್ ಕಾರ್ಡ್ ಇರುವ ಕುಟುಂಬದ ಪ್ರತಿ ಸದಸ್ಯನಿಗೂ ತಿಂಗಳಿಗೆ 10 ಕೆಜಿ ಅಕ್ಕಿ, ಗೃಹ ಜ್ಯೋತಿ ಯೋಜನೆ ಅಡಿ ರಾಜ್ಯದ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ಅರ್ಜಿ ಹಾಗೂ ಯುವ ನಿಧಿ ಯೋಜನೆ ಅಡಿ ನಿರುದ್ಯೋಗಿ ಪದವೀಧರರು ಹಾಗೂ ಡಿಪ್ಲಮೋ ಮಾಡಿದವರಿಗೆ ಭತ್ಯೆ ಕೊಡುವ ಯೋಜನೆಗಳ ಸದುಪಯೋಗವನ್ನು ಪ್ರತಿಯೊಬ್ಬರು ಪಡೆಯಬೇಕು ಎಂದರು.
ಜನ ಸಂಪರ್ಕ ಸಭೆಯಲ್ಲಿ ಚರ್ಚಿಸಿದ ಗ್ರಾಮಸ್ಥರ ಬೇಡಿಕೆಗಳು: ಆರ್ ಒ ಪ್ಲಾಂಟ್ ದುರಸ್ತಿ ಸರಿಪಡಿಸುವಂತೆ ಮನವಿ, ಗ್ರಾಮದಲ್ಲಿ ಚರಂಡಿ, ಸಿಸಿ ರಸ್ತೆಗಳ ನಿರ್ಮಾಣ, ಸ್ಥಳೀಯವಾಗಿ ನರೇಗಾದಡಿ ಸಣ್ಣ ಸಣ್ಣ ಉಪ ಕಾಲುವೆಗಳ ಹೂಳೆತ್ತುವ ಕೆಲಸ ನೀಡುವುದು. ರೈತರ ನಮ್ಮ ಹೊಲ ನಮ್ಮ ರಸ್ತೆ ಮನವಿ, ಗ್ರಾಮದಲ್ಲಿ ರಕ್ತ ಪರೀಕ್ಷೆ ಕೇಂದ್ರ ಪ್ರಾರಂಭ, ಪ್ರಾಥಮಿಕ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕೊರತೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ MBBS ಡಾಕ್ಟರ್ ನೇಮಕ,
31 ಉಪ ಕಾಲುವೆ ಗೆ ಕುಡಿಯುವ ನೀರಿನ- ಪುಟ್ ಬಾಲ್ ತೊರವು ಗೊಳಿಸಿ ಮುಖ್ಯ ಕಾಲುವೆ ಸ್ಥಳಾಂತರ ಮಾಡಲು ಮನವಿ, ಪದವಿ ಪೂರ್ವ ಕಾಲೇಜ್ ಮಂಜೂರು ಮಾಡುವಂತೆ, ಬಿಸಿಎಂ ಹಾಸ್ಟೆಲ್ ನಿರ್ಮಾಣ, ಕೊನೆ ಬಾಗದ ರೈತರಿಗೆ ನೀರಾವರಿ ಕಲ್ಪಿಸುವುದು, ಸಂಜೀವಿನಿ ವರ್ಕ್ ಶೆಡ್ ನಿರ್ಮಾಣ, ಪ್ರೌಢ ಶಾಲೆಗೆ ಹೆಚ್ಚುವರಿ ಅಥಿತಿ ಶಿಕ್ಷಕರ , ಬೂದಗುಂಪಾ ಗ್ರಾಮದಿಂದ ಹಾಲಸಮುದ್ರ, ತಿಮ್ಮಾಪುರ ಮುಖ್ಯರಸ್ತೆ ಡಾಂಬರೀಕರಣ ಸೇರಿದಂತೆ ಇನ್ನಿತರ ಇಲಾಖೆಗಳಿಗೆ ಸಂಬಂಧಿಸಿದ ಬೇಡಿಕೆಗಳನ್ನು ಸಚಿವರ ಸಮ್ಮುಖದಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಕಾರಟಗಿ ತಹಸೀಲ್ದಾರ್ ಎಂ.ಬಸವರಾಜ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ನರಸಪ್ಪ ಎನ್ , ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೋಮಶೇಖರ ಗೌಡ ತಾಲೂಕು ಮಟ್ಟದ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅನುಷ್ಠಾನ ಅಧಿಕಾರಿಗಳು,ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ತಾ.ಪಂ,ಗ್ರಾ.ಪಂ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು
Comments are closed.