ವಿದ್ಯಾರ್ಥಿಗಳ ಸಬಲೀಕರಣ ಕಾರ್ಯಗಾರದ ಸಮಾರೋಪ ಸಮಾರಂಭ
.
ಕೊಪ್ಪಳ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯೂ.ಎ.ಸಿ ಘಟಕ, ಸ್ಥಾನಿಕರಣ ಕೋಶ ಹಾಗೂ ಉನ್ನತ ಶಿಕ್ಷಣ ಅಕಾಡೆಮಿ ಧಾರವಾಡ ಇವರುಗಳ ಸಹಯೋಗದಲ್ಲಿ ಕಾಲೇಜಿನಲ್ಲಿ ಜರುಗಿದ ವಿದ್ಯಾರ್ಥಿಗಳ ಸಬಲೀಕರಣ ಕಾರ್ಯಗಾರದ ಸಮಾರೋಪ ಸಮಾರಂಭ ಸಭಾಂಗಣದಲ್ಲಿ ಜರುಗಿತು.
ಮೂರು ದಿನಗಳವರೆಗೆ ಜರುಗಿದ ಈ ಕಾರ್ಯಗಾರದಲ್ಲಿ ಅಕಾಡೆಮಿಯ ವಿವಿಧ ಸಂಪನ್ಮೂಲ ವ್ಯಕ್ತಿಗಳು ಬಿ. ಎ, ಬಿ. ಬಿ. ಎ, ಬಿ. ಕಾಂ, ಬಿ.ಎಸ್ಸಿ ವಿಭಾಗಗಳಿಂದ ಆಯ್ದ ಪ್ರತಿಭಾವಂತ ಐವತ್ತು ವಿದ್ಯಾರ್ಥಿಗಳಿಗೆ ಸ್ಕಿಲ್ಸ್ ಮತ್ತು ಸಾಫ್ಟ್ ಸ್ಕಿಲ್ಸ್ , ಉನ್ನತ ಶಿಕ್ಷಣದ ಮಹತ್ವ , ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವ ಬಗೆ , ನಾಯಕತ್ವ ಗುಣ ಹಾಗೂ ಸಂಘಟನೆ ಇವೆಲ್ಲ ವಿಷಯಗಳ ಕುರಿತು ವಿಶೇಷ ತರಬೇತಿಯನ್ನು ನೀಡಿದ್ದು ವಿದ್ಯಾರ್ಥಿಗಳಿಗೆ ಸದುಪಯೋಗವಾಗಿದೆ.
ಸಂಜೆ ಜರುಗಿದ ಸಮಾರಂಭ ಸಮಾರಂಭದಲ್ಲಿ ಪ್ರಾಂಶುಪಾಲರಾದ ತಿಮ್ಮಾ ರೆಡ್ಡಿ ಮೇಟಿ , ಪ್ರಾಧ್ಯಾಪಕರುಗಳಾದ ಡಾ. ಟಿ. ವಿ ವಾರುಣಿ , ಶಿವನಾಥ್ ಇ. ಜಿ ಮತ್ತು ಅಕಾಡೆಮಿಯ ಡಾ ಹೇಮರೆಡ್ಡಿ ನೀಲಗುಂದ ಹಾಗೂ ತರಬೇತಿಯನ್ನು ಪಡೆದ ವಿದ್ಯಾರ್ಥಿಗಳು ಹಾಜರಿದ್ದರು.
Comments are closed.