ಮಹಾಶಿವರಾತ್ರಿಯ ಪ್ರಯುಕ್ತ ಉಚಿತ ಸಾಮೂಹಿಕ ವಿವಾಹ ಃ ವಧು-ವರರು ನೋಂದಾಯಿಣಿಸಲು ಕರೆ

Get real time updates directly on you device, subscribe now.

ಕೊಪ್ಪಳಃ ಜಿಲ್ಲೆಯ ಕುಕನೂರ ತಾಲೂಕಿನ ಇಟಗಿಯ ಸುಕ್ಷೇತ್ರದ ಶ್ರೀಮರಳಸಿದ್ದೇಶ್ವರ ಪುಣ್ಯಾಶ್ರಮ ಕ್ಷೇಮಾಭಿವೃದ್ಧಿ ಸಂಘ (ರಿ) ಆಶ್ರಯದಲ್ಲಿ ಶಿವಶರಣ ಶ್ರೀ ಗದಿಗೆಪ್ಪಜ್ಜನವರ ನೇತೃತ್ವದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ೧೦೧ ಜೋಡಿ ಸರ್ವಧರ್ಮಗಳ ಸಾಮೂಹಿಕ ವಿವಾಹಗಳನ್ನು ಶ್ರೀ ಮರಳ ಸಿದ್ದೇಶ್ವರ ದೀಪೋತ್ಸವ ಹಾಗೂ ಜಾಗರಣೆಯನ್ನು ಪುಣ್ಯಾಶ್ರಮದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಾಶಿವರಾತ್ರಿ ಪ್ರಯುಕ್ತ ಜರುಗವ ಈ ಸಾಮೂಹಿಕ ವಿವಾಹವು ದಿಃ ೦೮-೦೩-೨೦೨೪ ರ ಶುಕ್ರವಾರದಂದು ಶ್ರೀಮಹೇಶ್ವರ ಪದವಿ ಪೂರ್ವ ಕಾಲೇಜ್ ಆವರಣ ಇಟಗಿಯಲ್ಲಿ ಜರಗುಲಿದೆ. ಶ್ರೀ ಬಸವಮೂರ್ತಿ ಮಾದರ ಚನ್ನಯ್ಯಸ್ವಾಮಿಗಳು, ಶ್ರೀ ಮಾದ ಚನ್ನಯ್ಯ ಗುರುಪೀಠ, ಚಿತ್ರದುರ್ಗ, ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಗವಿಮಠ, ಕೊಪ್ಪಳ, ಶ್ರೀ ಬಸವಜಯ ಮೃತ್ಯಂಜಯ ಮಹಾಸ್ವಾಮಿಗಳು ಪಂಚಮಸಾಲಿ ಪೀಠ ಕೂಡಲಸಂಗಮ, ಶ್ರೀ ಪ್ರಸನ್ನನಂದ ಪುರಿ ಮಹಾಸ್ವಾಮಿಗಳು ವಾಲ್ಮೀಕಿ ಗುರುಪೀಠ, ರಾಜನಹಳ್ಳಿ ಹರಿಹರ, ಶ್ರೀಕಲ್ಲಯ್ಯಜ್ಜ ನವರು ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ ಸೇರಿದಂತೆ ಹಲವು ಮಹಾಸ್ವಾಮಿಗಳು ಈ ಉಚಿತ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡು ವಧು ವರರಿಗೆ ಆಶೀರ್ವಚನೆ ನೀಡಿಲಿದ್ದಾರೆ.

ವಧು ವರರು ಮದುವಿಗೆ ಹೆಸರನ್ನು ನೋಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿರುವ ಸಂಘಟಕನ್ನು ಸಂಪರ್ಕಿಸಲು ತಿಳಿಸಿದ್ದಾರೆ. ಚನ್ನಬಸಪ್ಪ ಹೊಳೆಯಪ್ಪನವರ, ವಿಜಯಕುಮಾರ ಕಲ್ಮನಿ, ಈಶಪ್ಪ ದೊಡ್ಡಮನಿ, ಗಣೇಶ ಹೊರತಟ್ನಾಳ, ಪರಶುರಾಮ ಕೆರಳ್ಳಿ, ಹುಡಚಪ್ಪ ಹಳ್ಳಿಕೇರಿ, ಗಿರಿಯಪ್ಪ ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!