ಉದ್ಯಮಶೀಲತೆಯ ಕಾರ್ಯಗಾರ
ಕೊಪ್ಪಳ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಐ.ಕ್ಯೂ.ಎ ಸಿ ಅಡಿಯಲ್ಲಿ ಜಾಗತಿಕ ಮಟ್ಟದಲ್ಲಿ ಬದಲಾಗುತ್ತಿರುವ ಉದ್ಯಮಗಳ ಕುರಿತು ವಿಶೇಷ ತರಬೇತಿ ನೀಡುವ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ತರಬೇತುದಾರಾರಾಗಿ ಶ್ರೀಮತಿ ಸಾವಿತ್ರಿ ಮುಜಮ್ ದಾರ್ ಆಗಮಿಸಿ ಮಹಿಳೆಯರ ಹೊಸ ಹೊಸ ಉದ್ಯಮಗಳ ಚಿತ್ರಣಗಳ ಸ್ವರೂಪ ಹಾಗೂ ಮಹಿಳಾ ಉದ್ಯೋಗಿಗಳಿಗೆ ಈಗೀರುವ ಸವಾಲು ಮತ್ತು ಅವಕಾಶಗಳ ಕುರಿತು ವಿಶೇಷ ತರಬೇತಿಯನ್ನು ನೀಡಿದರು. ಕಾಲೇಜಿನ ಐ.ಕ್ಯೂ.ಎ. ಸಿ ಘಟಕದ ಸಂಚಾಲಕರು ಮತ್ತು ಪ್ರಾಧ್ಯಾಪಕರಾದ ಡಾ.ಟಿ. ವಿ. ವಾರುಣಿ ಇವರು ಸಹ ಉದ್ಯಮಶೀಲತೆಯ ಪ್ರಸ್ತುತತೆ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ತಿಮ್ಮಾರೆಡ್ಡಿ ಮೇಟಿ ವಹಿಸಿ ವಿದ್ಯಾರ್ಥಿಗಳಲ್ಲಿ ಪಠ್ಯದ ಜೊತೆಗೆ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಅರಿವನ್ನು ಮೂಡಿಸುವ ಉದ್ದೇಶದಿಂದ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಾತನಾಡಿದರು. ಸಮಾರಂಭದಲ್ಲಿ ವಿದ್ಯಾರ್ಥಿಗಳು ಇದ್ದರು. ಸ್ವಾಗತ ವನ್ನು ಉಪನ್ಯಾಸಕಿ ಫೈಮಾ , ವಂದನಾರ್ಪಣೆಯನ್ನು ಉಪನ್ಯಾಸಕ ಅಶೋಕ್ಎಕಲಾಪೂರ್ , ನಿರೂಪಣೆಯನ್ನು ಉಪನ್ಯಾಸಕ ಶಿವಬಸಪ್ಪ ಮಸ್ಕಿ ನೆರವೇರಿಸಿದರು.
Comments are closed.