ದತ್ತಿ ಪ್ರಶಸ್ತಿಗಾಗಿ ಮಹಿಳಾ ಬರಹಗಾರರ ಪುಸ್ತಕಗಳ ಆಹ್ವಾನ

ದಿ.ಅಂದಮ್ಮ ಮರಿಗೌಡ ಮಲ್ಲನಗೌಡರ ಅವರ ಸ್ಮಾರಕ ದತ್ತಿ ”

Get real time updates directly on you device, subscribe now.

 

       ಕೊಪ್ಪಳ : ಡಾ.ಮಹಾಂತೇಶ ಮಲ್ಲನಗೌಡರ  ಅವರು “ ದಿ.ಅಂದಮ್ಮ ಮರಿಗೌಡ ಮಲ್ಲನಗೌಡರ ಅವರ ಸ್ಮಾರಕ ದತ್ತಿ ” ಹೆಸರಿನಲ್ಲಿ ನೀಡುವ ದತ್ತಿ ಪ್ರಶಸ್ತಿಗೆ ಕೊಪ್ಪಳ ಜಿಲ್ಲಾ ಮಹಿಳಾ ಬರಹಗಾರರಿಂದ ಪುಸ್ತಕಗಳನ್ನು ಆಹ್ವಾನಿಸಿದೆ,

ಅರ್ಹ ಮಹಿಳಾ ಬರಹಗಾರರು 2022 ರ ಜನೇವರಿಯಿಂದ ಡಿಶೆಂಬರ್ 2022 ರ ಒಳಗಿನ ಪ್ರಕಟಿತ ಪುಸ್ತಕಗಳ ಎರಡು ಪ್ರತಿಗಳನ್ನು ಚನ್ನಬಸಪ್ಪ ಕಡ್ಡಿಪುಡಿ ಗೌರವ ಕಾರ್ಯದರ್ಶಿಗಳು ಜಿಲ್ಲಾ ಕಸಾಪ ಕೊಪ್ಪಳ , ಪ್ರಗತಿ ಪಥ ಸಹಕಾರಿ ಬ್ಯಾಂಕ್ ಆಝಾದ್ ಸರ್ಕಲ್  ಕೊಪ್ಪಳ ಈ ವಿಳಾಸಕ್ಕೆ ದಿ: 10/06/2023 ರ ಒಳಗಾಗಿ   ಕಳುಹಿಸಿ ಕೊಡಲು ಕೋರಿದೆ. ಆಯ್ಕೆಗೊಂಡ ಪುಸ್ತಕಗಳಿಗೆ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ “ ದತ್ತಿ ಪ್ರಶಸ್ತಿ “ ಪ್ರಧಾನ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ರಾಮಚಂದ್ರಗೌಡ ಗೊಂಡಬಾಳ ( 9845085709 ) ಅಧ್ಯಕ್ಷರು ಕಸಾಪ ತಾಲೂಕು ಘಟಕ ಕೊಪ್ಪಳ ಇವರನ್ನು ಸಂರ್ಪಿಕಿಸಲು ಕೋರಿದೆ.

Get real time updates directly on you device, subscribe now.

Comments are closed.

error: Content is protected !!
%d bloggers like this: