ಕರಾಟೆ ಮೌನೇಶಗೆ ಸಾಧನಶ್ರೀ ಪ್ರಶಸ್ತಿ
ಕೊಪ್ಪಳ : ಫೆ.೦೪ ರಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳ್ಮಣ್ ಶ್ರೀ ವಿಠೋಬ ಭಜನಾ ಮಂದಿರದಲ್ಲಿ ಬುಡೋಕಾನ ಕರಾಟೆ ಮತ್ತು ಮಾರ್ಷಲ್ ಆರ್ಟ್ಸ ಡೋ(ರಿ) ಇಂಡಿಯಾದ ಆಯೋಚಕ ಸತೀಶ್ ಬೆಳ್ಮಣ್ ಮಾತನಾಡಿ ಕೊಪ್ಪಳದ ಹಿರಿಯ ಕರಾಟೆ ಶಿಕ್ಷಕ ಮೌನೇಶರವರು ೨೫ವರ್ಷಗಳ ಸುದಿರ್ಘ ಕಾಲ ಕರಾಟೆ ತರಬೇತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ರಾಜ್ಯ, ರಾಷ್ಟ್ರ, ಮತ್ತು ಶ್ರೀಲಂಕಾ, ಮಲೇಶಿಯಾ, ತೈಲಾಂಡನಂತಹ ಅಂತರಾಷ್ಟ್ರೀಯ ಸ್ಪರ್ದೇಗಳಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ ಚಿನ್ನ ಹಾಗೂ ಬೆಳ್ಳಿ ಪದಕವನ್ನು ಪಡೆದಿದ್ದು, ಮತ್ತು ಪೋಲಿಸ್ ಇಲಾಖೆ ಶಿಕ್ಷಣ ಇಲಾಖೆ ಕಂದಾಯ ಇಲಾಖೆಯ ಸಿಬ್ಬಂದಿ ವರ್ಗದವರಿಗೆ ಮತ್ತು ಇಂಡಿಯನ್ ರಿಸರ್ವ ಬಟಾಲಿಯನ್ ಪ್ರಶಿಕ್ಷಣಾರ್ಥಿಗಳಿಗೆ ಹಾಗೂ ಮಹಿಳಾ ಪೋಲಿಸ ಸಿಬ್ಬಂದಿಗಳಿಗೆ ಸರಕಾರಿ ಪ್ರೌಢ ಶಾಲಾ, ಮತ್ತು ಕಾಲೇಜು ವಿದ್ಯಾರ್ಥಿನಿಯರಿಗೆ ತಮ್ಮನ್ನು ತಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ಸ್ವಯಂ ರಕ್ಷಣಾ ಕರಾಟೆ ಟ್ರೀಕ್ಸ್‌ಗಳನ್ನು ಹೇಳಿಕೊಟ್ಟಿದ್ದು, ಈವರೆಗೂ ಸುಮಾರು ೧೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿಯನ್ನು ನೀಡಿರುತ್ತಾರೆ. ಜೊತೆಗೆ ಕೊಪ್ಪಳ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಪ್ರತಿ ವರ್ಷವೂ ವಿಭಿನ್ನವಾಗಿ ಸಾಹಸ ಕರಾಟೆ ಪ್ರದರ್ಶನ ನೀಡಿರುತ್ತಾರೆ. ರಾಜ್ಯ ಕರಾಟೆ ಶಿಕ್ಷಕರ ಸಂಘದಲ್ಲಿ ವಕ್ತಾರರಾಗಿ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ಕರಾಟೆ ಬೆಳವಣಿಗೆಗೆ ಶ್ರಮಿಸಿದ್ದು ಇನ್ನೂ ಹಲವಾರು ಸಾಧನೆಗಳನ್ನು ಮಾಡಿದ ಕೊಪ್ಪಳದ ಮೌನೇಶರವರನ್ನು ಸಾಧನಶ್ರೀ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಮೋಕ್ತೇಸರರು ಆದ ವೇದಮೂರ್ತಿ ವಿಘ್ನೇಶ್ವರ ಭಟ್ ರವರು ಮೌನೇಶರವರಿಗೆ ಪ್ರಶಸ್ತಿ ಪ್ರಧಾನವನ್ನು ಮಾಡಿ ಆರ್ಶೀವದಿಸಿದರು.
ಈ ಸಂದರ್ಭದಲ್ಲಿ ಕಾಪು ತಾಲೂಕ ಯೋಜನಾ ಸೇವಾಧಿಕಾರಿ ರಿತೇಶ ಶೆಟ್ಟಿ ಸುಗುಡಾ, ಡೈಜಿವಲ್ಡ್ ಮೀಡಿಯಾ ಸಂಸ್ಥಾಪಕರಾದ ವಾಲ್ಟ್‌ರ್ ಉದಯ, ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಮುನಿಯಾಲು ಉದಯಶೆಟ್ಟಿ, ರಾಜ್ಯ ಕರಾಟೆ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ನದಿಮ್ ಮಂಗಳೂರು, ಎಸ್.ಕೆ. ಶಾಲಿಯಾನ್, ಕೃಷ್ಣ ಮೂರ್ತಿ ಆಚಾರ್, ಶೊಧನ ಕುಮಾರ ಶೆಟ್ಟಿ, ಸತ್ಯನಾರಾಯಣ ಭಟ ಮತ್ತಿತರರು ಉಪಸ್ಥಿತರಿದ್ದರು.
Comments are closed.