Sign in
Sign in
Recover your password.
A password will be e-mailed to you.
:- ಕೊಪ್ಪಳ:- ವಿದ್ಯಾರ್ಥಿಗಳು ಪ್ರತಿ ದಿನ ನಿರಂತರ ವಾಗಿ ಅಭ್ಯಾಸ ಮಾಡುವುದರ ಮೂಲಕ ಉತ್ತಮ ಫಲಿತಾಂಶ ಪಡೆದು ಸಂಸ್ಥೆಗೆ ಕೀರ್ತಿ ತರಬೇಕು ಎಂದು ಕಾಲೇಜಿನ ಅಡಳಿತ ಮಂಡಳಿಯ ಅಧ್ಯಕ್ಷರಾದ ಅಕ್ಕಿ ಶಿವಕುಮಾರ ಸರ್ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ಗ್ರಾಮದಲ್ಲಿ ಇರುವ ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜಿನ 2023-24 ನೇ ಸಾಲಿನ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಂದ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭ ಹಾಗೂ ಸರಸ್ವತಿ ಪೂಜೆ ಕಾರ್ಯಕ್ರಮ ದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ್ದರು,
ವಿದ್ಯಾರ್ಥಿಗಳು ಪ್ರತಿ ನಿತ್ಯ ಶ್ರದ್ಧೆ ಯಿಂದ ಓದುವುದರ ಮೂಲಕ ಅತ್ಯಂತ ಪರಿಶ್ರಮದಿಂದ ಯಶಸ್ಸು ಕಾಣಬಹುದು ಎಂದು ಹೇಳಿದರು,
ವಿಶೇಷ ಉಪನ್ಯಾಸವನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮುನಿರಾಬಾದ್ ಉಪನ್ಯಾಸಕಿ ವಿಜಯಲಕ್ಷ್ಮಿ ಎಸ್ ಒಡೆಯರ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಂಸ್ಕಾರವನ್ನು ಕಲಿಯಬೇಕು ಜೊತೆಗೆ ತಮ್ಮ ತಂದೆ ತಾಯಿ ಗಳನ್ನು ಜವಾಬ್ದಾರಿಯಂದ ಕಾಪಾಡಬೇಕು ಎಂದರು,
ಹುಲಿಗಿಯ ತುಂಗಭದ್ರಾ ಅನುದಾನಿತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಜೇಶ್ ಪೂಜಾರು ,ಹಾಗೂ ಸದಾನಂದಕುಮಾರ್ ಮಾತನಾಡಿದ್ದರು,
ವಿವಿಧ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು,
ಪ್ರಾಚಾರ್ಯರಾದ ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿ ವೀರಶೈವ ವಿದ್ಯಾವರ್ಧಕ ಸಂಘವು ಮುನಿರಾಬಾದ್ ಗ್ರಾಮದಲ್ಲಿ ತುಂಗಭದ್ರಾ ಜಲಾಶಯ ನಿರ್ಮಾಣಕ್ಕಾಗಿ ಬಂದತಹಃ ಸಾವಿರಾರು ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಸ್ಥಾಪಿಸಿದ ಸಂಸ್ಥೆ, ಬಡ ಕುಟುಂಬದವರಿಗೆ ಸಹಾಯಕವಾಗಿದೆ ಎಂದರು,
ಜಿ.ಸಂಗೀತ ಶಿಕ್ಷಕಿ ಪ್ರಾರ್ಥನೆಯನ್ನು ಮಾಡಿದ್ದರು ,
ವಿವಿಧ ಕ್ರೀಡಾ ಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ದೈಹಿಕ ಉಪನ್ಯಾಸಕರಾದ ತಿರುಪತಿ ಇವರು ಪ್ರಶಸ್ತಿ ಪತ್ರವನ್ನು ಪ್ರಕಟಿಸಿದರು,
ಕಳೆದ ವರ್ಷ ದ್ವಿತೀಯ ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಅಂಜುಮ್ ಅರಾ,ಅಯಿಶಾ ಖಾನಂ,ಕಿರ್ತನ,ಅಫ್ರಿನ್ ಶೈನಾಜ್,ಪರುಶುರಾಮ,ಸನಾ ಅಂಜುಮ್ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು,
ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಕ್ಷರಾದ ಅಕ್ಕಿ ಶಿವಕುಮಾರ, ಅಡಳಿತ ಮಂಡಳಿಯ ಸದಸ್ಯರಾದ ಜೆ.ಎಮ್.ಪ್ರಭಾಕರ,ಬಿ. ಮಲ್ಲೇಶಪ್ಪ,ಡಾ.ವಿರೂಪಾಕ್ಷಯ್ಯ ಸ್ವಾಮಿ,ಡಾ.ವಿಜಯಲಕ್ಷ್ಮಿ ಎಸ್.ಒಡೆಯರ್, ಪ್ರಾಚಾರ್ಯರಾದ ಬಸವರಾಜ, ವಿವಿಧ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಜೇಶ್ ಪೂಜಾರ,ಗವಿ ಸಿದ್ದಪ್ಪ ಮಟ್ಟಿ,ಸದಾನಂದ ಕುಮಾರ,ಸೆಲ್ವಾ ಜಾರ್ಜ್, ರಾಬಿಯಾ,ರುಬಿಯಾ,ಮಾರ್ತಂಡ್ ರಾವ್ ದೇಸಾಯಿ,ಮೀನಾಕ್ಷಿ,ಶಿವಪ್ರಕಾಶ್, ಶರಣ ಬಸವರಾಜ, ಅಭಿಲಾಷ್ ಫೌಂಡೆಶನ್ ಅಧ್ಯಕ್ಷರಾದ ಮಹಮ್ಮದ್ ಅಜೀಂ,ಉಪಸ್ಥಿತರಿದ್ದರು, ವಿವಿಧ ವಿದ್ಯಾರ್ಥಿಗಳು ತಮ್ಮ ಎರಡೂ ವರ್ಷದ ಅನುಭವಗಳನ್ನು ಹೇಳಿದ್ದರು, ಚನ್ನಬಸಪ್ಪ ನಿರೂಪಿಸಿದರು, ಅಂಬಳಿ ವೀರೇಂದ್ರ ಸ್ವಾಗತಿಸಿದರು, ಜಿ.ಸಂಗೀತ ಪ್ರಾರ್ಥಿಸಿದ್ದರು,ಹೇಮಪ್ಪ ಎಸ್ ಅಂಗಡಿ ವಂದಿಸಿದ್ದರು,ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
Get real time updates directly on you device, subscribe now.
Comments are closed.