ಜಿವಿಟಿ ಕೇರ್ ಟ್ರಸ್ಟ್‌ನಿಂದ ಉಚಿತ ಅಂಬುಲೆನ್ಸ್ ಸೇವೆ
ಹೆಚ್ಚಿನ ಮಾಹಿತಿಗೆ ೯೦೩೫೬೨೬೨೬೩, ೭೪೧೧೨೮೨೮೨೯ ಈ ನಂಬರ್
ಗಂಗಾವತಿ: ಗಂಗಾವತಿಯ ಬಡ ಜನರಿಗೆ ಸಹಕಾರ ನೀಡುವ ದೃಷ್ಟಿಯಿಂದ ಸಮಾನ ಮನಸ್ಕರು ಜಿವಿಟಿ ಕೇರ್ ಟ್ರಸ್ಟ್ ಸ್ಥಾಪಿಸಿ ಅಂಬುಲೆನ್ಸ್ ಸೇವೆ ಆರಂಭಿಸಿದ್ದೇವೆ ಎಂದು ಟ್ರಸ್ಟ್ ಅಧ್ಯಕ್ಷ ಎಂ.ಡಿ.ಆಸೀಫ್ ಹುಸೇನ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಪ್ರತಿ ಶುಕ್ರವಾರ ಬಡವರಿಗೆ ಉಚಿತ ಒಂದೊತ್ತು ಊಟ ಹಾಗು ಶವ ಸಂಸ್ಕರಣಾ ಪೆಟ್ಟಿಗೆ ಕೂಡಾ ಉಚಿತವಾಗಿ ನೀಡಲಿದ್ದೇವೆ, ಸಾರ್ವಜನಿಕರಿಗೆ ಅನುಕೂಲ ಮಾಡುವ ಕಾರಣ ಈ ಯೋಜನೆ ಆರಂಭಿಸಿದ್ದು ನಾಗರೀಕರು ಕೈ ಜೋಡಿಸ ಸದುಪಯೋಗ ಪಡಿಸಿಕೊಳ್ಳಬೇಕು ಗಂಗಾವತಿಯ ಗೌಳಿ ಮಹಾದೇವಪ್ಪ ರಸ್ತೆ (ಬೈಪಾಸ್) ರಸ್ತೆಯ ಶ್ರೀ ದುರ್ಗಾ ದೇವಿ ಕಾಂಪ್ಲೆಕ್ಸ್‌ನಲ್ಲಿ ಕಚೇರಿ ತೆರೆಯಲಾಗಿದ್ದು, ಹೆಚ್ಚಿನ ಮಾಹಿತಿಗೆ ೯೦೩೫೬೨೬೨೬೩, ೭೪೧೧೨೮೨೮೨೯ ಈ ನಂಬರ್ ಸಂಪರ್ಕಿಸಲು ಮನವಿ ಮಾಡಿದ್ದಾರೆ.
Comments are closed.