ಎಸ್ಎಸ್ ಕೆ ಸಮಾಜದ ಅಧ್ಯಕ್ಷರಾಗಿ ಜವಾಹರಲಾಲಸಾ ಅಂಟಾಳಮರದ ಆಯ್ಕೆ, ಸನ್ಮಾನ

Get real time updates directly on you device, subscribe now.

 

ಭಾಗ್ಯನಗರ : ಭಾಗ್ಯನಗರದ ಎಸ್ ಎಸ್ ಕೆ ಸಮಾಜದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜವಾಹರ್ ಲಾಲಸಾ ಅಂಟಾಳಮರದರಿಗೆ ವಿದ್ಯಾ ವಿಕಾಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದ್ದಾರೆ.

ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆಯ ನಿರ್ದೇಶಕರಾಗಿರುವ  ಜವಾಹರ್ ಲಾಲಸಾ ಅಂಟಾಳಮರದ ಇವರು ಎಸ್ ಎಸ್ ಕೆ ಸಮಾಜ ಭಾಗ್ಯನಗರದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಭೇಟಿ ನೀಡಿದ ವಿದ್ಯಾ ವಿಕಾಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು ಅಂಟಾಳಮರದರವರ ನೇತೃತ್ವದಲ್ಲಿ ಇಡೀ ಸಮುದಾಯದ ಮತ್ತಷ್ಟು ಅಭಿವೃದ್ದಿ ಸಾಧಿಸಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ  ರಾಘವೇಂದ್ರ ಪಾನಘಂಟಿ, ಉಪಾಧ್ಯಕ್ಷರಾದ ಉಮಾಕಾಂತಸಾ ಕಠಾರೆ, ಸಂಸ್ಥೆಯ ನಿರ್ದೇಶಕರಾದ ಪೆದ್ದಸುಬ್ಬಯ್ಯ ಶ್ರೀನಿವಾಸ ಗುಪ್ತಾ ,  ಲಕ್ಷ್ಮಣಸಾ ನಿರಂಜನ್,  ಹನುಮಂತಸಾ ನಿರಂಜನ್, ಸುರೇಶ್ ಪದ್ದಿ,ಶ್ರೀ ಕೃಷ್ಣ ಕಬ್ಬೇರ,  ಮಾರುತಿ ಮೇಘರಾಜ.ವಾದಿರಾಜ್, ವಿಜಯ ಪೋಚಗುಂಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!