ಶರಣರ ತತ್ವಗಳನ್ನು ಮನವರಿಕೆ ಮಾಡಿಕೊಡುವ ಉಪಯುಕ್ತ ಕೃತಿ

Get real time updates directly on you device, subscribe now.

“ಅಂತರಂಗದೊಳು ಚಿಗುರಲಿ ಶರಣರ ವಚನಾಮೃತಗಳು” ಎಂಬ ಕೃತಿಯನ್ನು ಸ್ನೇಹಿತರಾದ ಜಿ. ಎಸ್. ಗೋನಾಳ್ ಪ್ರಕಟಿಸಿದ್ದಾರೆ. ಇದು ಅವರ ಮಹತ್ವಾಕಾಂಕ್ಷೆಯ 16ನೆಯ ಕೃತಿಯಾಗಿದೆ. ಸೂರಿನಲ್ಲಿ ಸುತ್ತೂರು ಮಠದ ಶ್ರೀ ದೇಶಿ ಕೇಂದ್ರ ಮಹಾಸ್ವಾಮಿಗಳು ಮತ್ತು ಗದಗಿನ ತೋಟದ ಸಿದ್ದರಾಮ ಮಹಾಸ್ವಾಮಿಗಳು, ಮತ್ತು ಹಿರಿಯ ಜಾನಪದ ವಿದ್ವಾಂಸ , ಗೋ.ರು. ಚನ್ನಬಸಪ್ಪನವರಿಂದ ಹಿರಿಯರಿಂದ ಬಿಡುಗಡೆ ಮಾಡಿದ ಕೃತಿಯಾಗಿದೆ.

ಜಿ. ಎಸ್. ಗೋನಾಳರು 30 ವರ್ಷಕ್ಕಿಂತಲೂ ಹೆಚ್ಚಿನ ಕಾಲದಿಂದ ನನಗೆ ಆತ್ಮೀಯ ಸ್ನೇಹಿತರು. ಆ ಕಾಲದಿಂದಲೂ ಅವರ ನಾನು ಗಮನಿಸುತ್ತಿದ್ದೇನೆ ಪತ್ರಕರ್ತನಾಗಿ, ಅನೇಕ ಸಂಘಟನೆಗಳ ಜವಾಬ್ದಾರಿಯುತ ಪದಾಧಿಕಾರಿಯಾಗಿ, ಬಿಡುವಿಲ್ಲದೆ ದುಡಿಯುತ್ತಿರುವ ಕ್ರಿಯಾಶೀಲರು ಇವರು. ಮಾರು. 30. 35. ಪ್ರಶಸ್ತಿಗಳಿಗೆ ಭಾಷಣರಾಗಿದ್ದಾರೆ. ಹೆಚ್ಚು ಕೃತಿಗಳನ್ನು ಪ್ರಕಟಿಸಿದ ಕೊಪ್ಪಳದ ಕೆಲವೇ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ.

ಸ್ತುತ ಕೃತಿಯು ಪಾಂಡಿತ್ಯ ಪ್ರದರ್ಶನಕ್ಕಿಂತಲೂ ಶರಣ ತತ್ವ ಗಳನ್ನು ಜನರಲ್ಲಿ ಬಿತ್ತುವ ಉದ್ದೇಶ ಹೊಂದಿದೆ. ಸರಳ ಭಾಷೆಯಲ್ಲಿ ಶರಣರ ವಿಚಾರಗಳನ್ನು ವಿಶೇಷವಾಗಿ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮ ಪ್ರಭುಗಳ ಗಳ ಮೂಲಕ ತಿಳಿಸಲು ಪ್ರಯತ್ನಿಸಿದ್ದಾರೆ. ಬಸವಣ್ಣನವರಿಗೆ ಇನ್ನು ಹೆಚ್ಚಿನ ಸ್ಥಾನ ಲಭಿಸಿದೆ ಅಲ್ಲಲ್ಲಿ ಅನೇಕ ವಚನಕಾರರನ್ನು ಉಲ್ಲೇಖಿಸಿದ್ದಾರೆ.

ಎಲ್ಲಾ ವಚನಗಳನ್ನು ಸಾಮಾಜಿಕ ನೆಲೆಯಲ್ಲಿಯೇ, ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ವಚನಕಾರರ ವಚನಗಳಲ್ಲಿ ಸಾಮಾಜಿಕ ಆಯಾಮ ಸಾಮಾಜಿಕ ಮೌಲ್ಯಗಳು ಮುಖ್ಯವಾಗಿವೆ. ಈ ದೃಷ್ಟಿಯು ಇಂದಿನ ಅವಶ್ಯಕತೆಯೂ ಆಗಿದೆ. ತೀರ ಆಧ್ಯಾತ್ಮಿಕ ಧಾರ್ಮಿಕ ರೀತಿಯಿಂದ ನೋಡದಿದುದ್ದು ಸಾಮಾನ್ಯರಿಗೆ ಪ್ರಯುಕ್ತವಾಗಿದೆ. ಮಾನ್ಯರಿಗೂ ಸುಲಭವಾಗಿ ಸಂವಹನ ಗೊಳ್ಳುವ ಆಶಯೂ ಲೇಖಕರಿಗೆ ಇರಬಹುದು.

ವಚನಗಳ ಬಗ್ಗೆ ಜ್ಞಾನ ಒಂದುದಕ್ಕಿಂತ ಅದನ್ನು ಕ್ರಿಯೆಯಲ್ಲಿ ಉದ್ದೇಶವನ್ನು ಒತ್ತಿ ಒತ್ತಿ ಹೇಳುತ್ತಾರೆ. ಚನ್ನ ಬಸವಣ್ಣನವರು “ಅಂತರಂಗದಲ್ಲಿ ಅರಿವಿದ್ದರೇನು…? ಬಹಿರಂಗದಲ್ಲಿ ಕ್ರಿಯೆಯಾಗದನ್ನಕ್ಕರ” ಎಂದು ಪ್ರಶ್ನಿಸುತ್ತಾರೆ. ಮುಂದುವರೆದು ಜ್ಞಾನವೆಂಬುದು ಎಡಪಾದ ಕ್ರಿಯೆ ಎಂಬುದನ್ನು ಬಲಪಾದವೆನ್ನುತ್ತಾರೆ. ವಿಚಾರಗಳ ಕ್ರಿಯೆ ಯಾದಾಗಲೇ, ಅವುಗಳ ಸಾರ್ಥೈಕೈವಾಗುತ್ತದೆ. ಈ ದೃಷ್ಟಿಯು ಕೃತಿಯ ಉದ್ದಕ್ಕೂ ವ್ಯಕ್ತವಾಗಿದೆ. ಸಂದರ್ಭಾನುಸಾರ ಸೂಕ್ತ ಮಗಳನ್ನು ಪ್ರಸ್ತುತಪಡಿಸಿ ಜನರ ವಿವೇಚನೆಯನ್ನ ವಿಸ್ತರಿಸಲು ಪ್ರಯತ್ನಿಸಿದ್ದಾರೆ. ಮೌಲಿಕವಾದ ವಿಷಯ, ವಿಚಾರಗಳಿಂದ ತುಂಬಾ ಉಪಯುಕ್ತವಾಗಿದೆ.

ಇನ್ನು ಅನೇಕ ಕೃತಿಗಳು ಇವರಿಂದ ಹೊರಬಂದು ಲೋಕಜ್ಞಾನ ಹೆಚ್ಚಿಸುವಂತಾಗಲಿ ಎಂದು ಆಶಿಸುತ್ತೇನೆ.

ಎ. ಎಂ. ಮದರಿ. ಸಾಹಿತಿಗಳು. ಭಾಗ್ಯನಗರ ಕೊಪ್ಪಳ.

Get real time updates directly on you device, subscribe now.

Comments are closed.

error: Content is protected !!