ದೈಹಿಕ ಮತ್ತು ಮಾನಸಿಕ ಅರೋಗ್ಯಕ್ಕೆ ಕ್ರೀಡೆ ಬಹಳ ಅಗತ್ಯ-ಕಾವ್ಯ ರಾಣಿ

Get real time updates directly on you device, subscribe now.


ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಇರುತ್ತದೆ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಅರೋಗ್ಯವು ಬಹಳ ಗಟ್ಟಿಯಾಗಬೇಕಾದರೆ ತಾವು ಕ್ರೀಡಾಸಕ್ತಿಯನ್ನು ಬೆಳಸಿಕೊಳ್ಳಬೇಕು ಎಂದು ಕೊಪ್ಪಳ ನಗರಾಭಿವೃದ್ಧಿಯ ಯೋಜನಾ ನಿರ್ದೇಶಕರಾದ ಕಾವ್ಯ ರಾಣಿ ಅಭಿಪ್ರಾಯ ಹೇಳಿದರು. ಶ್ರೀ ಜಾತ್ರಾ ಮಹೋತ್ಸವದ ನಿಮಿತ್ಯ ಯುವ ಸಬಲೀಕರಣ & ಕ್ರೀಡಾ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಪುರುಷ ಮತ್ತು ಮಹಿಳೆಯರ ಆವ್ಹಾನಿತ ತಂಡಗಳಿಂದ ಹಮ್ಮಿಕೊಂಡ ಕಬಡ್ಡಿ ಪಂದ್ಯಾವಳಿಗಳನ್ನು ಉಧ್ಘಾಟಿಸಿ ಮಾತನಾಡಿದ ಅವರು ಸ್ಪರ್ಧೆಗಳಲ್ಲಿ ಸೋಲು ಗೆಲವು ಸಹಜವಾಗಿರುತ್ತವೆ ಎರಡನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಭಾಗವಹಿಸಿದ ಸಂತೋಷ ನಮ್ಮದಾಗಬೇಕು ಎಂದರು. ಮುಖ್ಯ ಅತಿಥಿಗಳಾಗಿ ಕೊಪ್ಪಳ ಜಿಲ್ಲಾ ಪೌರಾಯುಕ್ತರಾದ ಗಣೇಶ ಪ್ರಸಾದ, ಡಿ.ವಾಯ್.ಎಸ್.ಪಿ ಶರಣಬಸಪ್ಪ ಸುಭೇದಾರ, ಡಿ.ಎಸ್.ಪಿ ಗೋಪಿ, ಸಿ.ಪಿ.ಐ ಮಹಾಂತೇಶ ಸಜ್ಜನ, ಪಿ.ಎಸ್.ಐ ಸುನೀಲ್ ಅತಿಥಿಗಳಾಗಿ ಅಗಮಿಸಿದ್ದರು.
ಒಟ್ಟು ೨೪ ಪುರುಷರು ೦೮ ಮಹಿಳೆಯರ ತಂಡಗಳು ಭಾಗವಹಿಸಿದ್ದವು. ಪುರುಷರ ವಿಭಾಗದಲ್ಲಿ ಜೈಭೀಮ್-ಜೈಬಸವ ತಂಡಪ್ರಥಮ ಸ್ಥಾನ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ತಂಡ ದ್ವಿತೀಯ ಸ್ಥಾನ, ಎರಡೋಣಿ ಮತ್ತು ಉಡುಮಕಲ್ ತಂಡ ತೃತೀಯ ಸ್ಥಾನ ಪಡೆದವು. ಮಹಿಳೆಯರ ವಿಭಾಗದಲ್ಲಿ ಕರ್ನಾಟಕ ಎ ತಂಡ ಪ್ರಥಮ ಸ್ಥಾನ, ಕರ್ನಾಟಕ ಬಿ ತಂಡ ದ್ವಿತೀಯ ಸ್ಥಾನ, ಕರ್ನಾಟಕ ಸಿ ತಂಡ ತೃತೀಯ ಸ್ಥಾನ ಪಡೆದವು.
ನಿರ್ಣಾಯಕರಾಗಿ ಗವಿಸಿದ್ದಪ್ಪ ಆನೆಗುಂದಿ, ಮಂಜುನಾಥ ಅರೆಂಟನೂರ, ಆನಂದ ಕಟ್ಟಿಮನಿ, ಮುತ್ತು ಹೂಗಾರ, ಗದ್ದಿಗೆಪ್ಪ, ನಿರ್ಣಾಯಕರಾಗಿ ಆಗಮಿಸಿದ್ದರು. ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ದೈಹಿಕ ನಿರ್ದೇಶಕರಾದ ಡಾ. ಶಶಿಧರ್ ಕೆಲ್ಲುರ ಅವರು ವಿಜೇತ ತಂಡಗಳಿಗೆ ಬಹುಮಾನ ಮತ್ತು ಪಾರಿತೋಷಕಗಳನ್ನು ವಿತರಿಸಿದರು. ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಡಾ. ಚನ್ನಬಸವ, ದೈಹಿಕ ನಿರ್ದೇಶಕರಾದ ಈಶಪ್ಪ ದೊಡ್ಡಮನಿ, ವಿನೋದ ಮುದಿಬಸನಗೌಡರ್, ಜಯರಾಮ್ ಮರಡಿತೋಟ ಹಾಗೂ ಸ್ಪರ್ಧಾರ್ಥಿಗಳು ಉಪಸ್ಥಿತರಿದ್ದರು. ಆರಂಭದಲ್ಲಿ ಶ್ರೀ ಗವಿಸಿದ್ಧೇಶ್ವರ ಶಾಲಾ ಮಕ್ಕಳಿಂದ ಯೋಗ ಪ್ರದರ್ಶನ ನಡೆಯಿತು.

Get real time updates directly on you device, subscribe now.

Comments are closed.

error: Content is protected !!