ಮಿರ್ಚಿ ಜಾತ್ರೆ : ಮಹಾದಾಸೋಹದಲ್ಲಿ ೪೦೦ ಜನ ಬಾಣಸಿಗರಿಂದ ಮಿರ್ಚಿಯ ತಯಾರಿಕೆ
ಕೊಪ್ಪಳ : ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಇಂದು ಜಾತ್ರಾ ಮಹೋತ್ಸವದ ಮಹಾದಾಸೋಹದ ಪ್ರಸಾದದಲ್ಲಿ ಇಂದು ೨೮.೦೧.೨೪ ಉತ್ತರ ಕರ್ನಾಟಕದ ವಿಶೇಷ ಖಾದ್ಯವಾದ ಮಿರ್ಚಿಯನ್ನು ವಿತರಿಸಲಾಯಿತು. ಮಿರ್ಚಿ ತಯಾರಿಕೆಗೆ ೨೮ ಕ್ವಿಂಟಾಲ್ ಹಸೆ ಹಿಟ್ಟು, ೧೩ ಬ್ಯಾರಲ್ ಎಣ್ಣೆ, ೨೦ಕ್ವಿಂಟಾಲ್ ಮೆಣಸಿನಕಾಯಿ, ೬೦ಕೆಜಿ ಅಜಿವಾನ, ೬೦ಕೆಜಿ ಸಣ್ಣ ಉಪ್ಪು, ೬೦ಕೆಜಿ ೫೦ಗ್ಯಾಸ್‌ಸಿಲಿಂಡರ್, ಸೊಡಾಪುಡಿ ಬಳಸಲಾಗುತ್ತದೆ. ಮಿರ್ಜಿ ತಯಾರಿಕೆಗೆ ನೂರು ಜನರ ನಾಲ್ಕು ತಂಡದAತೆ ಒಟ್ಟು ೪೦೦ಜನ ಬಾಣಸಿಗರು ಮಿರ್ಚಿ ತಯಾರಿಕೆಯ ಸೇವೆಯಲ್ಲಿ ತೊಡಗಲಿದ್ದರು. ನಾಡಿ ವಿವಿಧ ಗ್ರಾಮದ ಬಾಣಸಿಗರು ಸೇವೆಗೈದರು. ಸುಮಾರು ಮೂರು ಲಕ್ಷ ಜನರು ಮಿರ್ಚಿಯನ್ನು ಪ್ರಸಾದದಲ್ಲಿ ಸವಿದರು ಎಂದು ಶ್ರೀ ಗವಿಮಠದ ಪ್ರಕಟಣೆ ತಿಳಿಸಿದೆ.
Comments are closed.