ಸೈನಿಕರ ಸೇವೆ ಅವಿಸ್ಮರಣೀಯ – ನೇಮರಡ್ಡಿ  

Get real time updates directly on you device, subscribe now.

ಕೊಪ್ಪಳ

ದೇಶ ಕಾಯುವ ಮಹಾನ ಕಾರ್ಯ ಮಾಡುವ ಸೈನಿಕರನ್ನು ಗೌರವದಿಂದ ಕಾಣಬೇಕು ಮತ್ತು ಅವರ ಸೇವೆ ಅವಿಸ್ಮರಣೀಯ ಎಂದು ಉದ್ಯಮಿ ನೇಮರಡ್ಡಿ ಕೋಳೂರು ಅವರು ಹೇಳಿದ್ದಾರೆ.

ಕೊಪ್ಪಳ ನಗರದ ಹುಡ್ಕೊ ಕಾಲೋನಿಯಲ್ಲಿ ಇರುವ ಮಾಜಿ ಸೈನಿಕರ ಕಾರ್ಯಾಲಯದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ದೇಶದಲ್ಲಿ ಶಾಂತಿಯಿಂದ ಬದುಕುತ್ತಿದ್ದೇವೆ ಎಂದರೇ ಅದಕ್ಕೆ  ಗಡಿ ಕಾಯುತ್ತಿರುವ ಸೈನಿಕರು ಕಾರಣ, ದೇಶದ ಹೊರಗೆ ಮತ್ತು ಒಣಗೆ ವಿದ್ವಂಸಕ ಕೃತ್ಯ ಎಸಗುವವರ ವಿರುದ್ಧ ನಿರಂತರವಾಗಿ ಹೋರಾಡುತ್ತಲೇ ಇರುತ್ತಾರೆ ಎಂದರು.

ಹಿರಿಯ ಪತ್ರಕರ್ತ ಸೋಮರಡ್ಡಿ ಅಳವಂಡಿ ಮಾತನಾಡಿ, ದೇಶವನ್ನು ಕಾಯುವ ಸೈನಿಕರನ್ನು ದೇವರಂತೆ ಕಾಣಬೇಕು. ಅವರು ತಮ್ಮ ಕುಟಂಬವನ್ನೇ ತ್ಯಾಗ ಮಾಡಿ, ದೇಶದ ಗಡಿಯಲ್ಲಿ ವೈರಿಗಳ ವಿರುದ್ಧ ಹೋರಾಡುತ್ತಲೇ ಇರುತ್ತಾರೆ. ಇಂಥ ಸೈನಿಕರ ಕುರಿತು ಪಠ್ಯದಲ್ಲಿ ಪಾಠ ಇರಬೇಕು. ಪ್ರತಿ ಮಗುವು  ಇದನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಮಾರುತಿ ಗೊಂದಿ ಅವರು ಮಾತನಾಡಿ, ಮಾಜಿ ಸೈನಿಕರಿಗೆ ಸ್ವಂತ ಕಚೇರಿ ಮತ್ತು ಸ್ಥಳವಕಾಶ ಇಲ್ಲ. ಹೀಗಾಗಿ, ಈಗ ಸರ್ಕಾರಕ್ಕೆ ಮನವಿ ಮಾಡಿಕೊಂಡಾಗ ನಮಗೆ ಒಂದುವರೆ ಎಕರೆ ಭೂಮಿಯನ್ನು ಮಂಜೂರಾತಿ ನೀಡಿದ್ದಾರೆ.  ಈಗ ಅದರಲ್ಲಿ ಸ್ವಂತ ಕಚೇರಿ ಸೇರಿದಂತೆ ಮಿಲ್ಟ್ರಿ ಕ್ಯಾಂಟೀನ್ ನಿರ್ಮಾಣ ಮಾಡುವ ಕಾರ್ಯ ಆಗಬೇಕಾಗಿದೆ ಎಂದರು.

ಪದಾಧಿಕಾರಿಗಳಾದ ಶ್ರೀಕಾಂತರಾವ್ ಪಾಟೀಲ್, ನಿಂಗಪ್ಪ ಗಾಣಿಗೇರ, ಇದ್ದರು. ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಶ್ರೀಧರ ಪಾಟೀಲ್ ಅವರು ಕಾರ್ಯಕ್ರಮ ನಿರೂಪಿಸಿದರು.

Get real time updates directly on you device, subscribe now.

Comments are closed.

error: Content is protected !!