ಜನಮನಕ್ಕೆ ಸ್ಪಂದಿಸುವ ಅಜ್ಜನ ಜಾತ್ರಾಮಹೋತ್ಸವ

Get real time updates directly on you device, subscribe now.

ಜಾತ್ರೆ ಎಂದರೆ ಕೇವಲ ಧಾರ್ಮಿಕ ಸಾಂಪ್ರದಾಯಿಕ ವೃಥಾ ಆಚರಣೆಗಳಿಗೆ ಸೀಮಿತವಾಗಿರದೆ ಜನಮನಕ್ಕೆ ಹಾಗೂ ಜನರ ನಾಡಿಮಿಡಿತಗಳಿಗೆ ಸ್ಪಂದಿಸುವಂತಹ ಸಮಾಜಮುಖಿಜನೋಪಯೋಗಿಕಾರ್ಯಕ್ರಮಗಳನ್ನು ಜಾತ್ರಾಮಹೋತ್ಸವ ಸಂದರ್ಭದಲ್ಲಿ ಆಯೋಜಿಸಿ ತನ್ಮೂಲಕಇಡೀ ಸಮಾಜಕ್ಕೆ ಹೊಸ ಚೈತನ್ಯವನ್ನು ಶಕ್ತಿಯನ್ನು ನೀಡಿ ಸಂಪದ್ಭರಿತ ಹಾಗೂ ಆರೋಗ್ಯವಂತ ಸಮಾಜವನ್ನು ನಿರ್ಮಸುವಂತಹ ಸಮಾಜಮುಖಿ, ಜನಮುಖಿ  ಎಂಬ ಖ್ಯಾತಿಗೆ  ಶ್ರೀಗವಿಮಠದ ಅಜ್ಜನಜಾತ್ರೆ ಪ್ರಸಿದ್ಧಿಯನ್ನು ಹೊಂದಿದೆ. ರಕ್ತದಾನ ಶಿಬಿರ ಬಾಲ್ಯವಿವಾಹ ತಡೆಜಾಗೃತಿ ಜಲದೀಕ್ಷೆಒತ್ತಡದ ಬದುಕು ನಿವಾರಣೆಗಾಗಿ ಸಶಕ್ತ ಮನ ಸಂತೃಪ್ತಜೀವನ, ನೇತ್ರದಾನಕ್ಕೆಕೃಪಾದೃಷ್ಠಿ ಅಂಗಾಂಗದಾನ ಸ್ವಾವಲಂಬಿ, ಸಮೃದ್ಧ ಹಾಗೂ ಸಂತೋಷದ ಬದುಕನ್ನು ಸಾಗಿಸಲು ಮಾನವ ಸದಾಕಾಯಕದಲ್ಲಿ ನಿರತನಾಗಿರಬೇಕು. ಯಾವಕಾಯಕವೂ ಕೀಳೂ ಅಲ್ಲ ಮೇಲೂ ಅಲ್ಲಎಲ್ಲವೂ ಸರಿ ಸಮಾನಅದೇಕಾಯಕದೇವೋಭವಕಾಯಕದಲ್ಲಿಯೇ ಭಗವಂತನನ್ನುಕಾಣುವಂತಹ ಅಚಲ ವಿಶ್ವಾಸ. ಇಂತಹ ಹತ್ತು ಹಲವಾರು ಜಾಥಾಗಳನ್ನು ಕಾರ್ಯಕ್ರಮಗಳನ್ನು ಶ್ರೀಗವಿಮಠ ಜಾತ್ರಾಮಹೋತ್ಸವದ ಸಂದರ್ಭದಲ್ಲಿ ಆಯೋಜಿಸಿ ಜನಮನದಲ್ಲಿ ಸ್ಥಾಯಿಯಾಗಿನೆಲೆಗೊಂಡಿದೆ.
ಕೊಪ್ಪಳ ನಾಡಿನಅಧಿದೇವತೆ ಮಹಾಮಹಿಮ ಗವಿಸಿದ್ಧೇಶ ಗವಿಮಠದ ಭವ್ಯ ಪರಂಪರೆಯಲ್ಲಿ ಹನ್ನೊಂದನೆಯ  ಪೂಜ್ಯರು. ಆದರೆಜನಮನದಲ್ಲಿಇವರೇ ಪ್ರಥಮ ಪೀಠಾಧೀಶರೆಂಬ ಭಾವನೆ ಈಗಲೂ ಮನೆ ಮಾಡಿದೆ. ಪೂಜ್ಯರ  ಸಮಾಜಮುಖಿ ಕಾರ್ಯಗಳೇ  ಇದಕ್ಕೆಕಾರಣೀಭೂತವಾಗಿವೆ. ಕೊಪ್ಪಳದ ನೆರೆಯ  ಮಂಗಳಾಪುರದ  ಗುರುಲಿಂಗಮ್ಮ ಹಾಗೂ  ಮಹಾದೇವಯ್ಯ  ದಂಪತಿಗಳವರಲ್ಲಿ  ಜನಿಸಿ ಬಂದವರು. ಮಳಲ  ಮಲ್ಲೇಶನಲ್ಲಿಧ್ಯಾನಗೈದತಪೋನಿಧಿ.  ಶ್ರೀಮಠದ ೧೦ನೇ ಪೀಠಾಧೀಶಚನ್ನಬಸವ ಶಿವಯೋಗಿಗಳವರ ಪ್ರೀತ್ಯಾದರಗಳಿಗೆ ಪಾತ್ರರಾಗಿ ಗವಿಮಠದ ಪೀಠಾಧಿಪತಿಗಳಾದವರು.ಇವರ  ಕ್ರಿಯಾಶೀಲ ಬದುಕನ್ನುಕಂಡುಗುರುಚನ್ನಬಸವ ಸ್ವಾಮಿಗಳು ತಾವು ಲಿಂಗೈಕ್ಯರಾಗುವಅಭಿಲಾಷೆ ವ್ಯಕ್ತಪಡಿಸಿದರು.  ಈನುಡಿ ಕೇಳಿದ ಗವಿಸಿದ್ಧೇಶ್ವರರು  ನಾಳಿನಿಂದ ಗುರುಗಳ ಸೇವೆ  ಅಲಭ್ಯವೆಂದರಿತು ಗುರುಗಳಿಗಾಗಿಯೇ ನಿರ್ಮಾಣವಾಗಿದ್ದಗದ್ದುಗರಯನ್ನೇರಿ ಶಿವಧ್ಯಾನಗೈಯುತ್ತಾ  ಶಾಲಿವಾಹನ ಶಕೆ ೧೭೩೫ ಶ್ರೀಮುಖ ನಾಮ ಸಂವತ್ಸರ ಪುಷ್ಯ ಬಹುಳ ಬಿದಿಗೆಯೆಂದು (ಕ್ರಿ.ಶ. ೧೮೧೬) ಆ ಲಿಂಗದ ಬೆಳಕಿನಲ್ಲಿಯೇ ಬೆಳಕಾದವರು. ಅಂದಿನಿಂದ ಇಂದಿನವರೆಗು ಜಾತ್ರಾ ಮಹೋತ್ಸವ ನಿರಂತರವಾಗಿ ಸಾಗಿಬಂದಿದೆ ಇದು ೨೦೮ನೇ ರಥೋತ್ಸವ. ದಾಸೋಹ
ದಾಸೋಹ ಎಂಬ ಪರಿಕಲಪ್ಪನೆ ನಿನ್ನೆ ಮೊನ್ನೆಯದಲ್ಲಾ ಇದು ಅಕ್ಷರ ದಾಸೋಹ ಅನ್ನ ದಾಸೋಹ ಹಾಗೂ ಆಧತ್ಮ ದಾಸೋಹ ದಾಸೋಹಗಳನ್ನು ತಮ್ಮ ನಿತ್ಯನಿರಂತರ ಕಾಯಕವನ್ನಾಗಿ ಮಾಡಿಕೊಂಡು ಬಂದವರು ಗವಿಮಠದ ಯಲ್ಲಾ ಶಿವಯೋಗಿಗಳು. ಜಾತ್ರಾ ಮಹೋತ್ಸವದ ಸಂದರ್ಬದಲ್ಲಿ ವಿಶೇಷವಾದ ದಾಸೋಹದ ವ್ಯವಸ್ಥೆಯನ್ನ ಮಾಡಲಾಗುತ್ತದೆ ಸುಮಾರು ೧೨ ಏಕರೆ ವಿಸ್ತೀರಣ ಜಾಗದಲ್ಲಿ ಸು, ೬೦ ಕೌಂಟರಗಳಲ್ಲಿ ಪ್ರಸಾದವನ್ನು ಬಡಿಸುವ ವ್ಯವಸ್ತೆಯನ್ನು ಮಾಡಲಾಗಿದೆ. ಪುರುರಿಗೆ ಮಹಿಳಹಿರಿಗೆ ಹಾಗೂ ವಯೋವೃದ್ದರಿಗೆ ಅಂಗವಿಕಲರಿಗೆ ವಿಶೇಷ ವೆವಸ್ತೆಯನ್ನು ಮಾಡಲಾಗಿದೆ.
ಸ್ವಚ್ಛ ಕುಡಿಯುವನೀರು ಲಕ್ಷೆಪಲಕ್ಷ ಜನಸಂದಣಿ ಸೆರಿದರು ಒಬ್ಬರಿಗೊಬ್ಬರು ತಾಗದಂತೆ ವಿಶಾಲವಾದ ಮಂಟಪ ಬೆಳಿಗ್ಗೆ ೯ ರಿಂದ ರಾತ್ರಿ ೧೨ ವರೆಗು ದಾಸೋಹದ ಬಾಗಿಲು ತೆರೆದಿರುತ್ತದೆ. ನಿಗದಿತ ಸ್ಥಳಗಳಲ್ಲಿ ಸಿ,ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಆಹಾರ ಪದಾರ್ಥಗಳನ್ನು ಕೆಡದಂತೆ ಸಂಗ್ರಹ ಕೊಣೆಯನ್ನು ನಿರ್ವಿಸಲಾಗಿದೆ ಹೊಳಿಗೆ ಹುಗ್ಗಿ ಕರೆಗಡೆಬು ಬುಂದೆ ಮೈಸೂರಪಾಕು ಜಾಮುನ ಜಿಲೇಬಿ ರೊಟ್ಟಿ ಪಲ್ಲೇ ಗುರೆಳ್ಳು ಚಟ್ನಿ ಶೆಂಗಾಚಟ್ನಿ ಮಸೂರು ಹಾಲು ತುಪ್ಪಾ ಉಪ್ಪಿನಕಾಯಿ, ಮುಂತಾದ ಖಾದ್ಯಗಳು ಯಲ್ಲವು ಕ್ವಿಂಟಲ್ ಲೆಕ್ಕದಲ್ಲಿ ೫-೬ ಲಕ್ಷ ಶೆಂಗಾ ಹೋಳಿಗೆ ೩-೪ ಮಿರ್ಚಿ ಬಜಿ ಇವೆಲ್ಲವು ಭಕ್ತರ ಭಕ್ತಯಿಂದಲೆ ಸಂಗ್ರಹಗೊಂಡು ದಾಸೋಹದ ಮುಖಾಂತರ ಜನರಿಗೆ ಭೂರಿ ಬೋಜನಾ ವ್ಯವಸ್ಥೆಯನ್ನಾ ಶ್ರೀಮಠದ ದಾಸೋಹ ನಿರಂತರವಾಗಿ ಮಾಡಿಕೊಂಡು ಬಂದಿದೆ.
ಅಕ್ಷರ ಕ್ರಾಂತಿ-ಶಿಕ್ಷಣದಿಂದಲೆ ನಾಡಿನ ಸರ್ವತೋಮುಖ ಅಬಿವೃದ್ಧಿ ಸಾದ್ಯ ಎಂಬುದನ್ನು ಅರಿತ ೧೬ನೇ ಪೀಠಾಧೀಶ ಮರಿಶಾಂತವೀರ ಮಹಾಸ್ವಾಮಿಗಳವರು ೧೯೫೧ ಇಸ್ವಿಯಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು. ಇಂದು ಈ ಸಂಸ್ಥೆಯ ಅಡಿಯಲ್ಲಿ ೨೫ಕ್ಕೂ ಮಿಕ್ಕಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಪ್ರಸಾರದ ಕಾರ್ಯದಲ್ಲಿ ತೊಡಗಿವೆ ೧೭ನೇ ಪೀಠಾಧೀಶ ಶಿವಶಾಂತವೀರ ಮಹಾಸ್ವಾಮಿಗಳವರು ಆರ್ಯುವೇದ ಕಾಲೇಜು ಹಾಗೂ ಆಸ್ಪತ್ರೆಯನ್ನು ಪ್ರಾರಂಭಿಸಿದರು. ಇಂದಿನ ೧೮ನೇ ಪೀಠಾಧೀಶ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರು ಶಿಕ್ಷಣ ಸಂಸ್ಥೆಗಳನ್ನು ಉನ್ನತಿಕರಿಸಿದ್ದಾರೆ. ನಾವಿನ್ನತೆಯ ಸ್ವರೂಪವನ್ನು ನೀಡಿದ್ದಾರೆ. ೧೩.೧೨.೨೦೦೨ ರಂದು ಪಟ್ಟಕ್ಕೆ ಬಂದ ಪೂಜ್ಯರು ಮಠದ ಹಾಗೂ ಜಾತ್ರೆಯ ಸ್ವರೂಪವನ್ನೆ ಬದಲಾಯಿಸಿದ್ದಾರೆ. ಜಾತ್ರೆ ಎಂಬ ಶಬ್ದಕ್ಕೆ ಹೊಸ ವ್ಯಾಖ್ಯಾನ ಬರೆದಿದ್ದಾರೆ ಹೊಸ ಪರಿಕಲ್ಪನೆಗೆ ನಾಂದಿಯನ್ನು ಹಾಡಿದ್ದಾರೆ ಬಾಬಾರಾಮ್‌ದೇವಿ ಸಿ.ಎನ್. ಆರ್. ರಾವ್ ವಿರೇಂದ್ರ ಹೆಗಡೆ ಅಣ್ಣಾ ಹಜಾರೆ, ಮುಂತಾದ ಮಹಾನಿಯರು ಜಾತ್ರೆಗೆ ಸಾಕ್ಷಿ ಭೂತರಾಗಿದ್ದಾರೆ. ಈ ಸಾರೆ ನಿವೃತ ಐ.ಎ.ಎಸ್. ಅಧಿಕಾರಿ ಯುನೆಸ್ಕೋ ಗೆ ಮಾಜಿ ರಾಯಬಾರಿಗಳಾದ ಚಿರಂಜೀವಿ ಸಿಂಘ್, ಖ್ಯಾತ ಖಗೋಳ ವಿಜ್ಞಾನಿ ಪಿ. ವೀರಮುವೇಲ್ ಹಾಗೂ ಬೆಂಗಳೂರಿನ ಅದಮ್ಯ ಚೇತನ ಪೌಂಡೇಶನ್ ಸಂಸ್ಥಾಪಕರು ಶ್ರೀಮತಿ ತೇಜಸ್ವಿನಿ ಅನಂತಕುಮಾರ ಆಗಮಿಸುವರು. ಇಂತಹ ಮಹಾನಿಯರ ಅನುಭವ ವಾಣಿಯನ್ನು ಕೇಳುವ ಜಾನಪದ ಹಾಡು ಕೇಳುವ ನೃತ್ಯಗಳನ್ನು ನೋಡಿ ಕಣ್ತುಂಬಿಕೊಳ್ಳುವ ಅವಕಾಶ ಜಾತ್ರಾ ಮಹೋತ್ಸವದಲ್ಲಿ ದೊರಕುವುದು ನಮ್ಮ ಸೌಭಾಗ್ಯವಾಗಿದೆ.
ದಾಸೋಹದಲ್ಲಿ ೨೦ ಲಕ್ಷ ರೊಟ್ಟಿ, ೮೦೦ ಕ್ವಿಂಟಲ್ ಸಿಹಿ ಪದಾರ್ಥ ೭೦೦ ಕ್ವಿಂಟಲ್ ಅನ್ನ ೩೦೦ ಕ್ವಿಂಟಲ್ ತರಕಾರಿ ೩೦೦ ಕ್ವಿಂಟಲ್ ದವಸಧಾನ್ಯ ೧೫ ಕ್ವಿಂಟಲ್ ತುಪ್ಪ ೧೫ ಸಾವಿರ ಲೀಟರ್ ಹಾಲು ಮೋಸರು ೬ ಸಾವಿರ ಕೆಜಿ ಉಪ್ಪಿನ ಕಾಯಿ ೭೦೦ ಕ್ವಿಂಟಲ್ ಕೆಂಪು ಚಟ್ನಿ ಇವೆಲ್ಲಾ ಪದಾರ್ಥಗಳು ಭಕ್ತರ ಭಕ್ತಿಯಿಂದಲೆ ದಾಸೋಹದಲ್ಲಿ ಸಂಗ್ರಹವಾಗುವ ನೀರಿಕ್ಷ ಇದೆ
ನಾಡಿನ ಹಲವಾರು ಗ್ರಾಮಗಳ ಬಾಣಸಿಗರು ಸ್ವಯಂ ಸ್ಪೂರ್ತಿಯಿಂದಲೆ ಆಗಮಿಸುವರು ಪ್ರಸಾದ ಬಡಿಸುವರು ಸಹ ಸಾವಿರ-ಸಾವಿರ ಸಂಖ್ಯೆಯಲ್ಲಿ ಆಗಮಿಸುವರು ಇದೊಂದು ವಿಶೇಷ ವ್ಯವಸ್ಥೆಯನ್ನೆ ಮಾಡಲಾಗಿದೆ ಸುಮಾರು ೧೫ ದಿನಗಳ ಕಾಲ ನಡೆಯುವ ಈ ಅತ್ಯದ್ಭುತ ದಾಸೋಹ ನಾಡಿನ ಯಾವ ಜಾತ್ರಾ ಮಹೋತ್ಸವದಲ್ಲಿ ಕಾಣಲಿಕ್ಕೆ ಸಾಧ್ಯವಿಲ್ಲಾ ಆದರೆ ಗವಿಮಠ ಜಾತ್ರೆಯಲ್ಲಿ ಇವೆಲ್ಲವೂಗಳನ್ನೂ ನೋಡಿ ಕಣ್ತುಂಬಿಕೊಳ್ಳೋಣ ಮನವನ್ನು ಶುಬ್ರಗೊಳಿಸಿಕೊಂಡು ಬದುಕನ್ನು ಹಸನಮಾಡಿಕೊಳ್ಳೋಣ. ಇದೇ ಜಾತ್ರೆಯ ವೈಶಿಷ್ಠೆ ಜಾತ್ರೆಯನ್ನು ಮಾಡುವವರಿಗೆ ಮಾದರಿಯ ಹಾಗೂ ಅನುಕರಣಾಶೀಲ ಜಾತ್ರೆ ಆಗಿದೆ ಜಾತ್ರೆ ಎಂಬ ಶಬ್ದಕ್ಕೆ ಹೊಸ ಭಾಷ್ಯೆಯನ್ನು ಬರೆದು ಅದನ್ನು ಅನುಷ್ಠಾನ ಗೊಳಿಸಿದ ಪೂಜ್ಯರಿಗೆ ಅನಂತಾಂತ ವಂದನೆಗಳು.
ಲೇಖಕರು
  ಎಸ್.ಎಮ್.ಕಂಬಾಳಿಮಠ.
ವಿಶ್ರಾಂತ ಅಧ್ಯಾಪಕರು ಕಲ್ಯಾಣ ನಗರ ಕೊಪ್ಪಳ
   ಮೊ ಸಂ: ೯೪೮೧೮೬೩೬೫೮

Get real time updates directly on you device, subscribe now.

Comments are closed.

error: Content is protected !!