ಶ್ರೀ ಗವಿಸಿದ್ಧೇಶ್ವರ ಜಾತ್ರೆ ಪುರುಷರ. ಮಹಿಳೆಯರ ಪ್ರತ್ಯೇಕ ಜಂಗಿ ನಿಖಾಲಿ ಕುಸ್ತಿಗಳ ಪಂದ್ಯಾವಳಿ.

Get real time updates directly on you device, subscribe now.

 ಶ್ರೀ ಗವಿಸಿದ್ಧೇಶ್ವರ ಜಾತ್ರೆ ಅಂಗವಾಗಿ ರವಿವಾರ ಆಹ್ವಾನಿತ ಪುರುಷರ. ಮಹಿಳೆಯರ ತಂಡಗಳಿಂದ ಭಾರಿ ಜಂಗಿ ನಿಖಾಲಿ ಕುಸ್ತಿಗಳ ಪಂದ್ಯಾವಳಿ.
ಕೊಪ್ಪಳದ : ನಗರದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪುರಾತನ ಕಾಲದಿಂದಲೂ ನಡೆದು ಬಂದ ಕುಸ್ತಿ ಪಂದ್ಯಾವಳಿಯನ್ನು ದಿನಾಂಕ 28.01.2024 ರಂದು ರವಿವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ.
ಶ್ರೀ ಗವಿಮಠ ಕೊಪ್ಪಳ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ. ಆದರ್ಶ ಕುಸ್ತಿ ಕ್ರೀಡಾಪಟುಗಳ ಸಂಘ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ
ಶ್ರೀ ಗವಿಸಿದ್ಧೇಶ್ವರ ಆಟದ ಮೈದಾನದಲ್ಲಿ ಆಹ್ವಾನಿತ ಪುರುಷರ ಮತ್ತು ಮಹಿಳೆಯರ ಪ್ರತ್ಯೇಕ ತಂಡಗಳಿಂದ ಭಾರಿ ಜಂಗಿ ನಿಖಾಲಿ ಕುಸ್ತಿಗಳನ್ನು ಏರ್ಪಡಿಸಲಾಗಿದೆ ಎಂದು ಆದರ್ಶ ಕುಸ್ತಿ ಕ್ರೀಡಾಪಟುಗಳ ಸಂಘದ ಗೌರವಾಧ್ಯಕ್ಷ ಎಸ್.ಎ.ಗಫಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
        ನಗರದ ಗವಿಸಿದ್ಧೇಶ್ವರ ಆಟದ ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಕುಸ್ತಿ ಪೈಲ್ವಾನರ ಜೋಡಿಗಳ ಆಯೋಜಿಸಲಾಗಿದೆ.ಬೆಳಗಾವಿಯ ರಾಷ್ಟ್ರೀಯ ಬಂಗಾರದ ಪದಕ ವಿಜೇತ  ಶಿವಯ್ಯ ಪೂಜಾರಿ ಜೊತೆ ದೆಹಲಿಯ
ಪವನ್ ಕುಮಾರ್.ಕಲಬುರಗಿಯ ರಾಷ್ಟ್ರೀಯ ಪದಕ ವಿಜೇತ ಪ್ರವೀಣ್ ಹಿಪ್ಪರಗಿ ಜೊತೆ ಪುಣೆಯ ಯುವರಾಜ್ ಮೆಹತಾ. ದಾವಣಗೆರೆಯ ಬಸವರಾಜ ಪಾಟೀಲ್ ಜೊತೆ ಕೊಲ್ಹಾಪುರದ ಆದಿತ್ಯ ಪಾಟೀಲ್. ಅಥಣಿಯ                             ಮಹೇಶ್ ಕುಮಾರ್ ಲಂಗೋಟಿ ಜೊತೆ ಕೊಲ್ಹಾಪುರದ
ರಾಕೇಶ್ ಕಾಂಬಳೆ.ಬೆಳಗಾವಿಯ
ಪಂಕಜ್ ಪಾಟೀಲ್ ಜೊತೆ ಪುಣೆ (ಸಾಂಗ್ಲಿ)ರೂಪೇಶ್ ಪವಾರ್.ಬಾಗಲಕೋಟೆ. ದರ್ಶನ್ ಅಡೆಕರ್ ಜೊತೆ ಸವದತ್ತಿಯ
ಮುಸ್ತಾಖ್ ಆಲಂ. ಬಾಗಲಕೋಟೆಯ
 ಆದರ್ಶ ತೋಟಗಾರ
  ಜೊತೆ ದಾವಣಗೆರೆಯ
   ಭೀಮಲಿಂಗೇಶ್ವರ. ಬಾಗಲಕೋಟೆಯ ಅಲ್ತಾಫ್ ಕರ್ಜಗಿ ಜೊತೆ ಬೆಳಗಾವಿಯ
ಮಹೇಶ್ ಬಿರ್ಜೆ. ಹಗರಿಬೊಮ್ಮನಹಳ್ಳಿಯ ಮಹೇಂದ್ರ ಜೊತೆ ಕೊಪ್ಪಳದ ನಾಗರಾಜ್ ದೊಡ್ಡಮನಿ.ಹರಪನಹಳ್ಳಿ  ಕೆಂಚಪ್ಪ ಜೊತೆ ಧಾರವಾಡದ ಚನ್ನಪ್ಪ ನರೇಂದ್ರ. ಕಾರ್ತಿಕ್ ಹಾವೇರಿ ಜೊತೆ ಹನುಮಂತ ಮರಿಯಮ್ಮನಹಳ್ಳಿ. ಸಿರಿ ಹಗರಿಬೊಮ್ಮನಹಳ್ಳಿ ಜೊತೆ ಲಕ್ಕುಂಡಿಯ ಸುನೀಲ್.ಲಕ್ಕುಂಡಿಯ.
ದಾನೇಶ್  ಜೊತೆ  ದಾವಣಗೆರೆಯ ರಾಕಿ.ದಾವಣಗೆರೆಯ ಆಕಾಶ್  ಜೊತೆ ವಿಕಾಸ್ ಮರಿಯಮ್ಮನಹಳ್ಳಿ. ಅಭಿ ಮರಮನಹಳ್ಳಿ ಜೊತೆ ದಾವಣಗೆರೆಯ ಅರ್ಜುನ್. ದಾವಣಗೆರೆಯ ಮುಬಾರಕ್  ಜೊತೆ ಲಕ್ಕುಂಡಿಯ ಮುತ್ತು.ಲಕ್ಕುಂಡಿಯ ಪರಶುರಾಮ್  ಜೊತೆ ಧಾರವಾಡದ ಬಸವರಾಜ .ಮರಿಯಮ್ಮನಹಳ್ಳಿಯ ಬಸವರಾಜ್ ಜೊತೆ ದಾವಣಗೆರೆಯ ಸಂತೋಷ್.ಮರಿಯಮ್ಮನಹಳ್ಳಿಯ ಆನಂದ್ ಜೊತೆ ದಿಡ್ಡಿಕೇರಿ ಮಹೆಮೂದ್ ಸಾಬ್ ಮೊಮ್ಮಗ ಅಲ್ತಾಫ್ ದಫೇದಾರ್.ದಾವಣಗೆರೆಯ ದಾದಾಪೀರ್ ಜೊತೆ ಮರಿಯಮ್ಮನಹಳ್ಳಿಯ ಮೋಹನ್. ಲಕ್ಕುಂಡಿಯ ಮಂಜು ಜೊತೆ ಮರಿಯಮ್ಮನಹಳ್ಳಿಯ ಶ್ರೀಕಾಂತ್.ಕೊಪ್ಪಳದ ಮರ್ದಾನ್ ಅಲಿ ದಿಡ್ಡಿಕೇರಿ  ಜೊತೆ ದಾವಣಗೆರೆಯ ಪ್ರಜ್ವಲ್.
     ಮಹಿಳಾ ಕುಸ್ತಿಪಟುಗಳ ಜೋಡಿಗಳಾದ ಹಳಿಯಾಳ ರಾಷ್ಟ್ರೀಯ ಪದಕ ವಿಜೇತೆ ಮನೀಶ್ ಸಿದ್ಧಿ ಜೊತೆ ಕೊಲ್ಹಾಪುರದ
ಸುನಿತಾ ಮಗದುಮ್.ಹಳಿಯಾಳದ  ಲಕ್ಷ್ಮೀ ಪಾಟೀಲ್ ಜೊತೆ ಪುಣೆಯ ವೈಷ್ಣವಿ.ಗದಗಿನ ವೈಷ್ಣವಿ ಜೊತೆ ಮುಧೋಳಿನ
ವಿದ್ಯಾಶ್ರೀ ಗೆನೆನವರ. ಜಮಖಂಡಿಯ ಕಾವೇರಿ ಯಡಾಲಿ ಜೊತೆ ಗದಗಿನ ಶ್ವೇತಾ ಬಿನ್ನಾಳ ಮುಂತಾದ ಕುತೂಹಲ ಮೂಡಿಸುವ ಕುಸ್ತಿ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬ್ ಗೌಡರ.ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಈಶಪ್ಪ ದೊಡ್ಡಮನಿ. ಶ್ರೀ ಗವಿಸಿದ್ಧೇಶ್ವರ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ವಿನೋದ ಮುದಿಬಸನಗೌಡರ.
 ಆದರ್ಶ ಕುಸ್ತಿ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ಸಾಧಿಕ್ ಅಲಿ ದಫೇದಾರ್ ಪೈಲ್ವಾನ್ ಮುಂತಾದವರು
ಕುಸ್ತಿ ಪಂದ್ಯದ ವ್ಯವಸ್ಥಾಪಕರಾಗಿದ್ದಾರೆ.
         ಕುಸ್ತಿ ಪಂದ್ಯ ಆಡಿಸುವ ಕೊಪ್ಪಳದ ಹಿರಿಯ ಪೈಲ್ವಾನ್ ಭೀಮಸಿ ಗಾಳಿ.ಮುಸ್ತಫಾ ಚಪರಾಸಿ ಪೈಲ್ವಾನ್.
ಮುಸ್ತಫಾ ಬಡೆಘರ ಪೈಲ್ವಾನ್.
ಶಬ್ಬೀರ್ ಪೈಲ್ವಾನ್ ಕಂಪ್ಲಿ.
ಗಿರೀಶ್. ಮರಿಯಪ್ಪ ಬೆಲ್ಲದ್ ಪೈಲ್ವಾನ್ ಕೊಪ್ಪಳ. ಕುಸ್ತಿ ತರಬೇತುದಾರರಾದ ಹನುಮಂತ ಪಾಟಿಲ್ ಬೆಳಗಾವಿ ಕಾಡೇಶ್ ನ್ಯಾಮಗೌಡ ಬಾಗಲಕೋಟೆ. ತುಕಾರಾಮ್ ಹಳಿಯಾಳ ಮುಂತಾದವರು ನಿರ್ಣಾಯಕರಾಗಿದ್ದಾರೆ.
     ಕಣದಲ್ಲಿ ನಿಗದಿತ ವೇಳೆಗೆ ಎಲ್ಲಾ ಪೈಲ್ವಾನರು ಹಾಜರಿರಬೇಕು. ಕೊಕ್ಕರಿ. ಗದ್ದಲೋಡ. ಚಡ್ಡಿ ಹಿಡಿಯುವ ಅವಕಾಶ ಇರುವುದಿಲ್ಲ. ನಿರ್ಣಾಯಕರ ನಿರ್ಣಯವೇ ಅಂತಿಮವಾದದ್ದು.ಎಲ್ಲರೂ ಸಹಕರಿಸಬೇಕು.ಕುಸ್ತಿ ಪಂದ್ಯಾವಳಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ
ಆದರ್ಶ ಕುಸ್ತಿ ಕ್ರೀಡಾಪಟುಗಳ ಸಂಘದ ಗೌರವ ಅಧ್ಯಕ್ಷ ಎಸ್.ಎ.ಗಫಾರ್. ಅಧ್ಯಕ್ಷ
ಸಾಧಿಕ್ ಅಲಿ ದಫೇದಾರ್ ಪೈಲ್ವಾನ್. ಉಪಾಧ್ಯಕ್ಷ ಬಸವರಾಜ್ ಗಾಳಿ ಪೈಲ್ವಾನ್. ಕಾರ್ಯದರ್ಶಿ ಮಂಜುನಾಥ್ ದೊಡ್ಡಮನಿ.ಖಜಾಂಚಿ
ದಾದಾಪೀರ್ ಕುದ್ರಿ ಪೈಲ್ವಾನ್ ಮುಂತಾದವರು ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: