ಕೊಪ್ಪಳ ಜಿಲ್ಲಾ ಉತ್ತಮ ಶಿಕ್ಷಕಿ 2024 ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ

Get real time updates directly on you device, subscribe now.


ಕುಷ್ಠಗಿ,ಜ,23; ಶ್ರೀಮತಿ ಬಸಮ್ಮ ಮರಿಯಪ್ಪ (ತಾಳಕೇರಿ) ಮಾಸ್ಟರ್ ಟ್ರಸ್ಟ್ ವತಿಯಿಂದ ಜ.24 ಬುಧವಾರ ಬೆಳಿಗ್ಗೆ 10 ಗಂಟೆಗೆ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ದೇಶದ ಮೊದಲ ಶಿಕ್ಷಕಿ, ಅಕ್ಷರದ ಅವ್ವ ಶ್ರೀಮತಿ ಸಾವಿತ್ರಿ ಬಾಯಿ ಫುಲೆ ಇವರ ಜನ್ಮದಿನದ ಪ್ರಯುಕ್ತ ಕೊಪ್ಪಳ ಜಿಲ್ಲಾ ಉತ್ತಮ ಶಿಕ್ಷಕಿ 2024 ಪ್ರಶಸ್ತಿ ಪುರಸ್ಕಾರ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಶ್ರೀಮತಿ ಬಸಮ್ಮ ಮರಿಯಪ್ಪ ಮಾಸ್ಟರ್ ಸೇವಾ ಟ್ರಸ್ಟ್ ನ ಸುಖರಾಜ್ ತಾಳಕೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾವಿತ್ರಿ ಬಾಯಿ ಫುಲೆಯವರ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪ್ರಧಾನ ಜೊತೆಗೆ ಕುಷ್ಟಗಿ ತಾಲೂಕಿನ ಪ್ರಸಕ್ತ ಸಾಲಿನಲ್ಲಿ ಅಂಬೇಡ್ಕರ್ ಫೆಲೋಷಿಪ್ ಪಡೆದ ಸಾಧಕರಿಗೆ ಗೌರವ ಸನ್ಮಾನ ಮಾಡಲಾಗುವುದು.
ಕುಷ್ಟಗಿ ತಾಲೂಕಿನ ಆಸಕ್ತ ಶಿಕ್ಷಕ ಬಂಧುಗಳು ,ಹಿರಿಯ ನಾಗರೀಕರು, ಸಾರ್ವಜನಿಕರು, ಯುವ ಮಿತ್ರರು, ವಿಧ್ಯಾರ್ಥಿ-ವಿಧ್ಯಾರ್ಥಿನೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಈ ಮೂಲಕ ಕೋರಲಾಗಿದೆ.

Get real time updates directly on you device, subscribe now.

Comments are closed.

error: Content is protected !!
%d bloggers like this: