ಬಿ.ಟಿ ಹತ್ತಿ ಬೆಳೆಗಾರರಿಗೆ ಕೃಷಿ ಇಲಾಖೆಯಿಂದ ಸಲಹೆಗಳು

Get real time updates directly on you device, subscribe now.

: ಬಿ.ಟಿ. ಹತ್ತಿಯ ಬಿತ್ತನೆ ಕಾಲಾವಧಿಯು ಜೂನ್ ಮೊದಲ ವಾರದಿಂದ ಜುಲೈ ಮೂರನೇ ವಾರದವರೆಗೆ ಇದ್ದು, ಈ ಕಾಲಾವಧಿಯ ಶಿಫಾರಸ್ಸನ್ನು ಅನುಸರಿಸುವಂತೆ ರಾಯಚೂರು ವಿಶ್ವ ವಿದ್ಯಾನಿಲಯದ ಕೃಷಿ ವಿಜ್ಞಾನಿಗಳು ಸೂಚಿಸಿದ್ದಾರೆ.

ಹತ್ತಿ ಬೆಳೆಯುವ ರೈತರಿಗಾಗಿ ವಿವಿಧ ಬೀಜದ ಕಂಪನಿಗಳು ಅನೇಕ ಬಿ.ಟಿ. ಹತ್ತಿ ತಳಿಗಳನ್ನು ಮಾರಾಟಕ್ಕೆ ದಾಸ್ತಾನು ಇಟ್ಟಿರುತ್ತಾರೆ. ಈ ಎಲ್ಲಾ ತಳಿಗಳು ಬಿ.ಟಿ. ತಳಿಗಳಾಗಿದ್ದು, ಅವುಗಳಲ್ಲಿ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. ರೈತರು ಯಾವುದೇ ಒಂದು ಕಂಪನಿಯ ಯಾವುದಾದರೊಂದು ತಳಿಯು ಬೇಕೆಂದಲ್ಲಿ ಮಾರುಕಟ್ಟೆಯಲ್ಲಿ ಅಂತಹ ತಳಿಯ ಕೊರತೆಯುಂಟಾಗಿ, ಅಧಿಕ ಬೆಲೆಗೆ ಮಾರಾಟವಾಗುವುದು ಹಾಗೂ ಕಳಪೆ ಬೀಜವನ್ನು ಸರಬರಾಜು ಮಾಡುವುದು ಇತ್ಯಾದಿ ಅವ್ಯವಹಾರ ಪ್ರಾರಂಭವಾಗಿ, ರೈತರಿಗೆ ಅನ್ಯಾಯ ವಾಗುವುದೆಂಬುದನ್ನು ಮನಗಾಣಬೇಕು.
ಕಾರಣ ಹತ್ತಿ ಬೆಳೆಗಾರರು ಮಾರುಕಟ್ಟೆಯಲ್ಲಿರುವ ವಿವಿಧ ತಳಿಗಳಲ್ಲಿ ಲಭ್ಯತೆಯ ಮೇಲೆ ಆಯ್ಕೆ ಮಾಡಿಕೊಳ್ಳಬೇಕು. ಆದರೆ ಕೊಳ್ಳುವ ಮುನ್ನ ಪ್ಯಾಕೇಟ್‌ನ್ನು ಪರಿಶೀಲಿಸಿ, ತಯಾರಕರ ಕಂಪನಿಯ ಪೂರ್ಣ ಹೆಸರು ಹಾಗೂ ವಿಳಾಸ ಸರಿಯಿರುವುದನ್ನು ಹಾಗೂ ಅದರೊಂದಿಗೆ ನಿಜ ಚೀಟಿ ಪತ್ರ ಇರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಬಿತ್ತನೆ ಬೀಜವನ್ನು ಅಧಿಕೃತ ಪರವಾನಿಗೆ ಹೊಂದಿರುವವರಿAದ ಕೊಂಡುಕೊಳ್ಳಬೇಕು ಹಾಗೂ ಮಾರಾಟಗಾರರಿಂದ ಕಡ್ಡಾಯವಾಗಿ ತಪ್ಪದೇ ರಸೀದಿಯನ್ನು ಕೇಳಿ ಪಡೆಯಬೇಕು. ಆ ತಳಿಯ ಬೇಸಾಯ ಪದ್ಧತಿಯ ಬಗ್ಗೆ ಕರಪತ್ರವನ್ನು ಪಡೆಯಬೇಕು. ಬಿತ್ತನೆ ಮಾಡಿದ ನಂತರ ಬೆಳೆ ಕಟಾವು ಆಗುವವರೆಗೆ ಬೀಜದ ಚೀಲ, ಅಲ್ಪ ಪ್ರಮಾಣದ ಬೀಜ, ರಸೀದಿ ಹಾಗೂ ಕರಪತ್ರವನ್ನು ಕಾಯ್ದಿರಿಸಿಕೊಳ್ಳಬೇಕು. ಬೆಳೆಯಲ್ಲಿ ಸಮಸ್ಯೆಯುಂಟಾದಾಗ ಇವುಗಳು ಪ್ರಯೋಜನಕ್ಕೆ ಬರುತ್ತವೆ.
ಪ್ರತಿ ಬಿ.ಟಿ. ಹತ್ತಿಯ ಪ್ಯಾಕೇಟ್ ಜೊತೆ 125 ಗ್ರಾಂ. ಬಿ.ಟಿ. ಯೇತರ (ರೆಪ್ಯೂಜಿ) ಬೀಜಗಳನ್ನು ನೀಡುತ್ತಿದ್ದು, ರೈತರು ತಮ್ಮ ಹೊಲದ ಸುತ್ತಲೂ 4 ಸಾಲಿನಲ್ಲಿ ಈ ಬೀಜಗಳನ್ನು ಖಡ್ಡಾಯವಾಗಿ ಬಿತ್ತನೆ ಮಾಡಬೇಕು. ಇದರಿಂದ ಕಾಯಿಕೊರಕ ಹುಳುವಿನಲ್ಲಿ ಬಿ.ಟಿ. ನಿರೋಧಕ ಶಕ್ತಿಯನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಹಾಗೂ ಕಾಯಿಕೊರಕದ ಬಾಧೆಯನ್ನು ಗುರುತಿಸಲು ಅನುಕೂಲವಾಗುತ್ತದೆ. ಕೆಲವೊಂದು ರೈತರು ಬಿ.ಟಿ. ಯೇತರ ಬೀಜವನ್ನು ಹುಸಿ ಗುಣಿಗಳಲ್ಲಿ ಬಳಸುತ್ತಿರುವುದು ಕಂಡು ಬರುತ್ತದೆ. ಆದರೆ ಹುಸಿಗುಣಿಗಳಿಗಾಗಿ ಬಳಸದೇ ಮೇಲೆ ತಿಳಿಸಿದಂತೆ ಅನುಸರಿಸಲು ರೈತರಿಗೆ ಕೋರಿದೆ.
ಬಿತ್ತನೆ ಬೀಜಕ್ಕಾಗಿ ಹತ್ತಿ ಬೆಳೆಯುವ ರೈತರು ಕಡ್ಡಾಯವಾಗಿ ಕಂಪನಿಯೊAದಿಗೆ ಅಥವಾ ಸೀಡ್ ಆರ್ಗನೈಸರ್ ಇವರೊಂದಿಗೆ ಒಡಂಬಡಿಕೆ ಮಾಡಿಕೊಂಡಿರಬೇಕು.
ಹೆಚ್ಚಿನ ಮಾಹಿತಿಗಾಗಿ ಹಾಗೂ ಈ ಬಗ್ಗೆ ಯಾವುದೇ ದೂರುಗಳಿದ್ದಲ್ಲಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!