ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸಿಕೊಳ್ಳಿ: ನಲಿನ್ ಅತುಲ್

Get real time updates directly on you device, subscribe now.

): ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ 2024ರ ಹಿನ್ನೆಲೆಯಲ್ಲಿ ಅಂತಿಮ ಮತದಾರರ ಪಟ್ಟಿಗಳನ್ನು ಪ್ರಕಟಿಸಲಾಗಿದ್ದು, ಸಾರ್ವಜನಿಕರು ತಮ್ಮ ಹೆಸರುಗಳನ್ನು ಪರಿಶೀಲಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಅವರು ತಿಳಿಸಿದ್ದಾರೆ.

ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯನ್ವಯ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ 2024ರ ಸಂಬಂಧ ಅರ್ಹತಾ ದಿನಾಂಕ: 01.01.2024ರ ಆಧಾರದ ಮೇಲೆ ತಯಾರಿಸಲಾದ ಕೊಪ್ಪಳ ಜಿಲ್ಲೆಯ 60-ಕುಷ್ಟಗಿ, 61-ಕನಕಗಿರಿ, 62-ಗಂಗಾವತಿ, 63-ಯಲಬುರ್ಗಾ ಮತ್ತು 64-ಕೊಪ್ಪಳ ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಜನವರಿ 22ರಂದು ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ, ತಹಶೀಲ್ದಾರ ಕಚೇರಿಗಳಲ್ಲಿ, ಮತದಾರರ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಚುರಪಡಿಸಲಾಗಿದೆ. ಸಾರ್ವಜನಿಕರು ಈ ಮತದಾರರ ಪಟ್ಟಿಗಳಲ್ಲಿ ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.
*ಮತದಾರರ ವಿವರ:* ಪ್ರಸ್ತುತ, ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯಲ್ಲಿರುವ ಮತದಾರರ ವಿವರದನ್ವಯ ಜಿಲ್ಲೆಯ 60-ಕುಷ್ಟಗಿ ವಿಧಾನಸಭಾ ಕ್ಷೇತ್ರದ 267 ಮತಗಟ್ಟೆಗಳ ಪೈಕಿ 1,20,521 ಪುರುಷರು, 1,19,503 ಮಹಿಳೆಯರು, 10 ಇತರೆ ಸೇರಿ ಒಟ್ಟು 2,40,034 ಮತದಾರರು ಮತ್ತು 206 ಸೇವಾ ಮತದಾರರಿದ್ದಾರೆ.
61-ಕನಕಗಿರಿ ವಿಧಾನಸಭಾ ಕ್ಷೇತ್ರದ 266 ಮತಗಟ್ಟೆಗಳ ಪೈಕಿ 1,12,023 ಪುರುಷರು, 1,15,780 ಮಹಿಳೆಯರು, 11 ಇತರೆ ಸೇರಿ ಒಟ್ಟು 2,27,814 ಮತದಾರರು ಮತ್ತು 26 ಸೇವಾ ಮತದಾರರಿದ್ದಾರೆ.
62-ಗಂಗಾವತಿ ವಿಧಾನಸಭಾ ಕ್ಷೇತ್ರದ 235 ಮತಗಟ್ಟೆಗಳ ಪೈಕಿ 1,01,732 ಪುರುಷರು, 1,04,618 ಮಹಿಳೆಯರು, 15 ಇತರೆ ಸೇರಿ ಒಟ್ಟು 2,06,365 ಮತದಾರರು ಮತ್ತು 34 ಸೇವಾ ಮತದಾರರಿದ್ದಾರೆ.
63-ಯಲಬುರ್ಗಾ ವಿಧಾನಸಭಾ ಕ್ಷೇತ್ರದ 256 ಮತಗಟ್ಟೆಗಳ ಪೈಕಿ 1,13,815 ಪುರುಷರು, 1,14,063 ಮಹಿಳೆಯರು, 5 ಇತರೆ ಸೇರಿ ಒಟ್ಟು 2,27,883 ಮತದಾರರು ಮತ್ತು 171 ಸೇವಾ ಮತದಾರರಿದ್ದಾರೆ.
64-ಕೊಪ್ಪಳ ವಿಧಾನಸಭಾ ಕ್ಷೇತ್ರದ 290 ಮತಗಟ್ಟೆಗಳ ಪೈಕಿ 1,28,854 ಪುರುಷರು, 1,31,967 ಮಹಿಳೆಯರು, 15 ಇತರೆ ಸೇರಿ ಒಟ್ಟು 2,60,836 ಮತದಾರರು ಮತ್ತು 91 ಸೇವಾ ಮತದಾರರಿದ್ದಾರೆ.
ಐದು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಕೊಪ್ಪಳ ಜಿಲ್ಲೆಯ 1314 ಮತಗಟ್ಟೆಗಳ ಪೈಕಿ 5,76,945 ಪುರುಷರು, 5,85,931 ಮಹಿಳೆಯರು, 56 ಇತರೆ ಸೇರಿ ಒಟ್ಟು 11,62,932 ಮತದಾರರು ಮತ್ತು 528 ಸೇವಾ ಮತದಾರರಿದ್ದಾರೆ.
*28,272 ಯುವ ಮತದಾರರು:* ಅಂತಿಮಮತದಾರರ ಪಟ್ಟಿಯಲ್ಲಿರುವಯುವ 18 ರಿಂದ 19 ವಯೋಮಾನದ ಮತದಾರರ ವಿವರದನ್ವಯ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 3533 ಗಂಡು ಹಾಗೂ 2568 ಹೆಣ್ಣು ಸೇರಿ 6101 ಯುವ ಮತದಾರರಿದ್ದಾರೆ. ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 2927 ಗಂಡು, 2125 ಹೆಣ್ಣು ಹಾಗೂ ಇತರೆ 2 ಸೇರಿ 5054 ಯುವ ಮತದಾರರು. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 2974 ಗಂಡು ಹಾಗೂ 2321 ಹೆಣ್ಣು ಸೇರಿ 5295 ಯುವ ಮತದಾರರು. ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 3270 ಗಂಡು ಹಾಗೂ 2417 ಹೆಣ್ಣು ಸೇರಿ 5687 ಯುವ ಮತದಾರರು. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 3379 ಗಂಡು, 2755 ಹೆಣ್ಣು ಹಾಗೂ ಇತರೆ 1 ಸೇರಿ 6135 ಯುವ ಮತದಾರರು. ಜಿಲ್ಲೆಯಲ್ಲಿ 16,083 ಗಂಡು, 12,186 ಹೆಣ್ಣು ಹಾಗೂ ಇತರೆ 3 ಸೇರಿ ಒಟ್ಟು 28,272 ಯುವ ಮತದಾರರಿದ್ದಾರೆ.
*14590 ವಿಕಲಚೇತನ ಮತದಾರರು:* ಅಂತಿಮ ಮತದಾರರ ಪಟ್ಟಿಯಲ್ಲಿರುವ ವಿಕಲಚೇತನ ಮತದಾರರ ವಿವರದಂತೆ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 1755 ಪುರುಷ ಹಾಗೂ 1048 ಮಹಿಳಾ ಸೇರಿ 2803 ವಿಕಲಚೇತನ ಮತದಾರರಿದ್ದಾರೆ. ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 1889 ಪುರುಷ ಹಾಗೂ 1312 ಮಹಿಳಾ ಸೇರಿ 3201 ವಿಕಲಚೇತನ ಮತದಾರರು. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 1537 ಪುರುಷ ಹಾಗೂ 1176 ಮಹಿಳಾ ಸೇರಿ 2713 ವಿಕಲಚೇತನ ಮತದಾರರು. ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 1778 ಪುರುಷ ಹಾಗೂ 1075 ಮಹಿಳಾ ಸೇರಿ 2853 ವಿಕಲಚೇತನ ಮತದಾರರು. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 1731 ಪುರುಷ ಹಾಗೂ 1289 ಮಹಿಳಾ ಸೇರಿ 3020 ವಿಕಲಚೇತನ ಮತದಾರರು. ಜಿಲ್ಲೆಯಲ್ಲಿ 8690 ಪುರುಷ ಹಾಗೂ 5900 ಮಹಿಳಾ ಸೇರಿ ಒಟ್ಟು 14,590 ವಿಕಲಚೇತನ ಮತದಾರರಿದ್ದಾರೆ.
ಸಾರ್ವಜನಿಕರು ಈ ಮತದಾರರ ಪಟ್ಟಿಗಳನ್ನು ಪರಿಶೀಲಿಸಿಕೊಳ್ಳಲು, ಅಂತಿಮ ಮತದಾರರ ಪಟ್ಟಿಯಲ್ಲಿ ಯಾವುದೇ ಮತದಾರರ ಹೆಸರು ಬಿಟ್ಟು ಹೋಗಿದ್ದಲ್ಲಿ ನಮೂನೆ-6ರಲ್ಲಿ ಮತ್ತು ಯಾವುದೇ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಬೇಕಿದ್ದಲ್ಲಿ ನಮೂನೆ-7ರಲ್ಲಿ, ಮತದಾರರ ಪಟ್ಟಿಯಲ್ಲಿ ನಮೂದುಗಳಲ್ಲಿ ಯಾವುದೇ ತಿದ್ದುಪಡಿ ಅಥವಾ ಸ್ಥಳಾಂತರ ಅವಶ್ಯಕತೆಯಿದ್ದಲ್ಲಿ ನಮೂನೆ-8ರಲ್ಲಿ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿಗಳಿಗೆ, ತಾಲ್ಲೂಕು ತಹಶೀಲ್ದಾರರಿಗೆ ಸಲ್ಲಿಸಬಹುದು. ಇದರೊಂದಿಗೆ, ಭಾರತ ಚುನಾವಣಾ ಆಯೋಗದ ಅಪ್ಲಿಕೇಶನ್ ವೋಟರ್ ಹೆಲ್ಪ್ಲೈನ್ ಆ್ಯಪ್ ಅಥವಾ ವೆಬ್ ಪೋರ್ಟಲ್  https://voters.eci.gov.in/ ಮೂಲಕವೂ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!