ಕಚೇರಿಗೆ ಅಲೆದಾಟ ತಪ್ಪಿಸಲು ಗುರುಸ್ಪಂದನ ಕಾರ್ಯಕ್ರಮದ ಅವಶ್ಯವಿದೆ: ಶಂಕ್ರಯ್ಯಾ
ಕೊಪ್ಪಳ: ಶಿಕ್ಷಕರು ಕಚೇರಿಗೆ ತಮ್ಮ ಕಾರ್ಯಗಳ ಉದ್ದೇಶದ ಸಲುವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಅಲೆದಾಟ ತಪ್ಪಿಸಲು ಗುರು ಸ್ಪಂದನ ಕಾರ್ಯಕ್ರಮದ ಅವಶ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಟಿ.ಎಸ್.ಶಂಕ್ರಯ್ಯಾ ಹೇಳಿದರು.
ಅವರು ನಗರದ ಸರ್ಧಾರಗಲ್ಲಿ ಉರ್ದು ಶಾಲೆಯಲ್ಲಿ ಸಾರ್ವಜಿನಿಕ ಶಿಕ್ಷಣ ಇಲಾಖೆ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕೊಪ್ಪಳ ವಲಯ ಮಟ್ಟದ ಗುರು ಸ್ಪಂದನ ಕಾರ್ಯಕ್ರಮದವನ್ನು ಉದ್ಘಾಟಿಸಿ ಮಾತನಾಡುತ್ತಾ,ಪ್ರತಿಯೊಂದು ಇಲಾಖೆಯಲ್ಲಿ ಕೆಲಸ ಮಾಡುವ ನೌಕರರಿಗೆ ಅವರ ಸೇವಾ ಸೌಲಭ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳು ಬರುತ್ತವೆ.ಅಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯ ಮಾಡಬೇಕಿದೆ.ವಿಶೇಷವಾಗಿ ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡಬೇಕಾದರೆ ಮೊದಲು ಅಂತಹ ಶಿಕ್ಷಕರಿಗೆ ಇರುವ ಅನೇಕ ಸೇವಾ ಸೌಲಭ್ಯವನ್ನು ಸಮಸ್ಯೆಗಳನ್ನು ಪರಿಹಾರ ಮಾಡಬೇಕು.ಪರಿಹಾರ ಸಿಗದಿದ್ದರೆ ಶಿಕ್ಷಕರು ಕಚೇರಿಗೆ ಅಲೆಯುವ ಕಾರ್ಯವಾಗುತ್ತದೆ.ಕಚೇರಿಗೆ ಶಿಕ್ಷಕರ ಅಲೆದಾಟವನ್ನು ತಪ್ಪಿಸಲು ಗುರುಸ್ಪಂದನ ಕಾರ್ಯ ಸಹಕಾರಿಯಾಗಿದೆ.ಶಿಕ್ಷಕರು ತಮಗೆ ಸಿಗಬೇಕಾದ ಸೌಲಭ್ಯಗಳ ಕುರಿತು ಮಾಹಿತಿ ಪಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದ ಕುರಿತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಪ್ರಧಾನ ಕಾರ್ಯದರ್ಶಿ ಬಾಳಪ್ಪ ಕಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ಹೋಳಿಬಸಯ್ಯಾ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ,ಅಕ್ಷರ ದಾಸೋಹ ಅಧಿಕಾರಿ ಹನುಮಂತಪ್ಪ, ಸರಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷರ ಶಿವಪ್ಪ ಜೋಗಿ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ.ಬಿ,ನಿಕಟ ಪೂರ್ವ ಅಧ್ಯಕ್ಷರಾದ ಪ್ರಾಣೇಶ ಪೂಜಾರ,ಸಹ ಕಾರ್ಯದರ್ಶಿ ಬಸವರಾಜ ಕಮಲಾಪುರ,ನಿರ್ದೇಶಕರಾದ ಯಶೋಧ ಹುನಗುಂದ,ಶರಣಪ್ಪ ರಡ್ಡೇರ ಮುಂತಾದವರು ಹಾಜರಿದ್ದರು.
ಬಹದ್ದೂರಬಂಡಿ ಕ್ಲಸ್ಟರ್ ಸಿ.ಆರ್.ಪಿ.ಹನುಮಂತಪ್ಪ ಕುರಿ ಕಾರ್ಯಕ್ರಮವನ್ನು ನಿರೂಪಿಸಿದರು.
ಶಿಕ್ಷಕರ ಸಂಘದ ನಿರ್ದೇಶಕರಾದ ನಫೀಜಖಾನ ಪಠಾನ,ಪದವಿಧರ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಮಾರುತಿ ಮ್ಯಾಗಳಮನಿ ವಂದಿಸಿದರು.
Comments are closed.