ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಶಿಸ್ತು ಮತ್ತು ಸಂಯಮ ಕಲಿಸುವ ಔದಾರ್ಯ ಬೆಳೆಸಿ

Get real time updates directly on you device, subscribe now.


ಕೊಪ್ಪಳ: ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಶಿಸ್ತು ಮತ್ತು ಸಂಯಮ ಕಲಿಸುವ ಔದಾರ್ಯ ಬೆಳೆಸಿಕೊಳ್ಳಬೇಕು ಎಂದು ಚೈಲ್ಡ್ ವೆಲ್ ಫೇರ್ ಸದಸ್ಯರಾದ ಶ್ರೀ ಮತಿ ಸರೋಜ ಬಾಕಳೆ ಅವರು ಹೇಳಿದರು.
ಅವರು ಕೊಪ್ಪಳ ನಗರದಲ್ಲಿರುವ ನಿವೇದಿತಾ ಪ್ರೌಢಶಾಲೆಯ ೨೩ನೇ ಶಾಲಾವಾಷೀಕೋತ್ಸವದ ಅಂಗವಾಗಿ ಶ್ರೀ ಸರಸ್ವತಿ ಪೂಜೆ ಹಾಗೂ ಕ್ರೀಢೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಮಕ್ಕಳಿಗೆ ಬರೀ ಪರ್ಸೆಂಟೇಜ, ಹೋಮ್ ವರ್ಕ್ ಮಾಡುವ ಒತ್ತಡ ಹಾಕಬಾರದು ಎಂದು ಪಾಲಕರಿಗೆ ಕಿವಿಮಾತು ಹೇಳಿದರು.
ಪಾಲಕರ ಪ್ರತಿನಿಧಿಯಾಗಿ ಭಾಗವಹಿಸಿದ ಮಹಮ್ಮದ್ ಐ. ಸಿದ್ದೀಕ್ ಅವರು ಮಾತನಾಡಿ ನಿವೇದಿತಾ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಬಹಳ ಅದೃಷ್ಟವಂತರು ಏಕೆಂದರೆ ಉತ್ತಮ ಶಿಕ್ಷಕರು ಮತ್ತು ಮಾತೃ ಹೃದಯಿ ವಿಧ್ಯಾ ಸಂಸ್ಥೆಯ ಅಧ್ಯಕ್ಷರನ್ನು ಪಡೆದಿದ್ದಾರೆ, ನಿವೇಲ್ಲಾ ಚನ್ನಾಗಿ ಓದಿ ದೊಡ್ಡ ಮಟ್ಟಕ್ಕೆ ಹೊಗಬೇಕು ಎಂದು ಮಕ್ಕಳಿಗೆ ಹೇಳಿದರು.
ಇನ್ನೋರ್ವ ಅತಿಥಿ ಹಾಗೂ ನಿವೇದಿತಾ ಶಾಲೆಯ ಹಳೇ ವಿಧ್ಯಾರ್ಥಿ ಅಖಿಲವಾಣಿ ಪತ್ರಿಕೆಯ ಸಂಪಾದಕ ಮಹಮ್ಮದ್ ಅಖೀಲ್ ಉಡೇವು ಮಾತನಾಡಿ ನಾನು ಈ ಶಾಲೆಯಲ್ಲಿ ಓದಿ ಇದೇ ಶಾಲೆಗೆ ಅತಿಥಿಯಾಗಿ ಬಂದಿದ್ದು ನನ್ನ ಜೀವನದ ಬಹಳ ವಿಶೇಷವಾದ ದಿನವಾಗಿದೆ, ನಿವೇದಿತಾ ಶಾಲೆಯಲ್ಲಿ ಓದುತ್ತೀರುವಾಗ ಇಷ್ಟೊಂದು ಅಭಿವೃದ್ಧಿಯಾಗಿರಲಿಲ್ಲ ಈಗ ಬಹಳ ಉನ್ನತ ಮಟ್ಟಕ್ಕೆ ತಲುಪಿದ್ದು ಉತ್ತಮವಾದ ಶಿಕ್ಷಕರು ಹಾಗೂ ಉತ್ತಮ ಆಡಳಿತ ಮಂಡಳಿ ಹೊಂದಿದ್ದು, ಮಕ್ಕಳಿ ಓದುವುದಕ್ಕೆ ಪ್ರೋತ್ಸಹಿಸುತ್ತಾರೆ. ಶಾರದಾ ಬಾಯಿ ಮೆಡಂ ಅವರು ಮಕ್ಕಳ ಬಗ್ಗೆ ಬಹಳ ಕಾಳಜಿ ಹೊಂದಿದ್ದು ಓದುವಕಡೆ ಗಮನ ಕೊಡಲು ಹೇಳುತ್ತಿತ್ತಾರೆ ಎಂದು ಹೇಳಿದರು. ಪ್ರಸ್ತಾವಿಕವಾಗಿ ನಿತೇಶ್ ಪುಲಸ್ಕರ್ ಮಾತನಾಡಿದರು.ಅತಿಥಿಗಳ ಪರಿಚಯ ಮಾರುತಿ ಕಿರುಬಂಡಿಯವರು ಮಾಡಿಕೊಟ್ಟರು, ಅತಿಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಮಾರುತಿ ಹಂಪಣ್ಣನವರ್ ನೆಡೆಸಿಕೊಟ್ಟರು, ಮಹಮ್ಮದ್ ಶಫಿ ಹಿರೆಮಸೂತಿ ಅವರು ಕಾರ್ಯಕ್ರಮದ ಸ್ವಾಗತ ಕೋರಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಪ್ರೀತಿ ನಿಡಶೆಸಿಯವರು ಮಾಡಿದರು. ವಂದನಾರ್ಪಣೆಯನ್ನು ಹನುಮೇಶ್ ಗ್ಯಾನದ್ ನೆರವೇರಿಸಿದರು, ಈ ಸಂದರ್ಭದಲ್ಲಿ ಮಲ್ಲಪ್ಪ ಮಾಟರಂಗಿ, ಜಯಶ್ರೀ ಪಿ.ಕುಂಬಾರ, ಪಾಲಾಕ್ಷಿ ಗೌಡ ಮಾಲಿಪಾಟೀಲ್ ಹಾಗೂ ಶಿಕ್ಷಕ ವೃಂದ ಮತ್ತು ಮಕ್ಕಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: