ವಿದ್ಯಾರ್ಥಿಗಳು ಸಂಶೋಧನಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು: ಡಾ. ಹನುಮಂತಪ್ಪ ಅಂಡಗಿ

Get real time updates directly on you device, subscribe now.

ಕೊಪ್ಪಳ : ಸಂಶೋಧನೆ ಎನ್ನುವುದು ಪಾಶ್ಚಾತ್ಯ ವಿದ್ವಾಂಸರು ತೋರಿಸಿಕೊಟ್ಟ ಮಾರ್ಗದಲ್ಲಿ ರೂಪುಗೊಂಡ ಒಂದು ಶೈಕ್ಷಣಿಕ ಶಿಸ್ತು. ಕರ್ನಲ್ ಮೇಕೆಂಜಿಯು ಸಂಶೋಧನಾಲೋಕದ ಆದ್ಯಪುರುಷ. ವಿದ್ಯಾರ್ಥಿಗಳು ಪದವಿಪೂರ್ವ ಹಂತದಿಂದಲೇ ಸಂಶೋಧನಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಕಲಿಕೆಗೆ ವಯಸ್ಸಿನ ಮಿತಿಯಿಲ್ಲ. ಕಲಿಯುವ ಆಸಕ್ತಿ ಇರಬೇಕು, ಉತ್ಸಾಹ ವಿರಬೇಕು, ಕುತೂಹಲವಿರಬೇಕು, ಜ್ಞಾನದ ಹಂಬಲವಿರಬೇಕು. ಇವೆಲ್ಲವುಗಳಿದ್ದರೆ ವ್ಯಕ್ತಿ ಯಾವ ವಯಸ್ಸಿನಲ್ಲಿಯಾದರೂ ಉನ್ನತ ಪದವಿಯನ್ನು ಪಡೆಯಬಹುದು. ನಾನು ಅರ್ಥಶಾಸ್ತ್ರದ ಉಪನ್ಯಾಸಕನಾದರೂ ಸಹಿತ ಪುನಃ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಈಗ ನನ್ನ ೫೩ನೇ ವಯಸ್ಸಿನಲ್ಲಿ ಮೂವರು ಮೊಮ್ಮಕ್ಕಳು ಕಂಡ ಮೇಲೆ ಪಿಎಚ್.ಡಿ ಪದವಿ ಪಡೆದಿದ್ದೇನೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಬೇಕು. ಉನ್ನತ ಶಿಕ್ಷಣ ಪಡೆಯುವುದರಿಂದ ಉನ್ನತ ಹುದ್ದೆ ಲಭಿಸುತ್ತದೆ. ಉನ್ನತ ಶಿಕ್ಷಣ ಪಡೆಯುವ ಹಂತದಲ್ಲಿ ದೊಡ್ಡ ದೊಡ್ಡ ಸಾಹಿತಿಗಳ, ಸಂಶೋಧಕರ, ವಿಮರ್ಶಕರ, ಮಾರ್ಗದರ್ಶನ ದೊರೆಯುತ್ತದೆ. ಇದರಿಂದ ಉನ್ನತ ವಿಚಾರಗಳು ಬೆಳೆದು ನಮ್ಮ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಹಿರೇಸಿಂದೋಗಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ಅವರು ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪಿಎಚ್.ಡಿ ಪದವಿ ಪಡೆದ ಹಿನ್ನೆಲೆಯಲ್ಲಿ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಂಡ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ಜೀವಶಾಸ್ತ್ರ ಉಪನ್ಯಾಸಕರಾದ ವೀರಶೇಖರ ಪತ್ತಾರ ಅವರು ಮಾತನಾಡುತ್ತಾ, ನಮ್ಮ ಮಹಾವಿದ್ಯಾಲಯದ ಕ್ರಿಯಾಶೀಲ ಪ್ರಾಚಾರ್ಯರು, ಸಾಹಿತಿಗಳು, ಸಂಶೋಧಕರೂ ಆಗಿರುವ ಡಾ. ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ತಮ್ಮ ಜೀವನದಲ್ಲಿ ಹಲವಾರು ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸಹಿತ ಛಲಬಿಡದ ವಿಕ್ರಮನಂತೆ ಪಿಎಚ್.ಡಿ ಪದವಿ ಪಡೆದು ನಮ್ಮ ಮಹಾವಿದ್ಯಾಲಯಕ್ಕೆ, ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಮುಂದಿನ ದಿನಮಾನಗಳಲ್ಲಿಯೂ ಸಹ ಇವರು ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚೆಚ್ಚು ಕ್ರಿಯಾಶೀಲರಾಗಿ ಸೇವೆಸಲ್ಲಿಸಲಿ ಎಂದು ಶುಭಹಾರೈಸಿದರು.
ವೀರಣ್ಣ ಜೋಗಿನ, ಐ.ಎನ್. ಪಾಟೀಲ, ಕೆ. ಉಮಾಕಾಂತರಾವ, ಜಯಪಾಲರೆಡ್ಡಿ ಚೆಲ್ಲಾ, ಅನಿತಾ ದಲಬಂಜನ ಈರಬಸಮ್ಮ ನೆಲಾಗಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: