ಮಹಾರಥೋತ್ಸವ ಸಂದರ್ಭದಲ್ಲಿ ಬಾಳೆಹಣ್ಣು ಎಸೆಯದಿರಲು ಸದ್ಭಕ್ತರಲ್ಲಿ ಮನವಿ

Get real time updates directly on you device, subscribe now.


ಕೊಪ್ಪಳ – ಶ್ರೀ ಗವಿಮಠದ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ದಿನಾಂಕ ೨೭.೦೧.೨೪ರಂದು ಜರುಗುವ ಮಹಾರಥೋತ್ಸವ ಸಾಗುವ ಸಂಧರ್ಭದಲ್ಲಿ ಭಕ್ತರು ತಮ್ಮ ಭಕ್ತಿಯಿಂದ ಉತ್ತತ್ತಿ ವiಹಾರಥೋತ್ಸವಕ್ಕೆ ಅರ್ಪಿಸುವುದು ಸಂಪ್ರದಾಯ. ಆದರೆ ಬಾಳೆಹಣ್ಣನ್ನು ಎಸೆಯುವುದು ಜಾಸ್ತಿ ಆಗಿದ್ದು, ಅದರಿಂದ ಜಾತ್ರಾ ಆವರಣದಲ್ಲಿನ ಮಕ್ಕಳು, ಮಹಿಳೆಯರು, ವೃದ್ಧರು, ಭಕ್ತರು ಕಾಲು ಜಾರಿ ಬೀಳುವ ಸಂದರ್ಭವಿರುತ್ತವೆ. ಅಲ್ಲದೆ ಶ್ರೀಮಠದ ಆವರಣದಲ್ಲಿಯೂ ಸ್ವಚ್ಚತೆ ಕಾಪಾಡಲು ತೊಂದರೆಯಾಗುವುದು, ಆದಕಾರಣ ಮುನ್ನಚ್ಚೆರಿಕೆಯ ಕ್ರಮವಾಗಿ ಸಧ್ಭಕ್ತಾಧಿಗಳು ಬಾಳೆಹಣ್ಣು ರಥೋತ್ಸವಕ್ಕೆ ಎಸೆಯಬಾರದೆಂದು ಹಾಗೂ ಬಾಳೆಹಣ್ಣನ್ನು ಮಾರಾಟ ಮಾಡುವವರು ಸಹ ಶ್ರೀ ಮಹಾರಥೋತ್ಸವ ನಡೆಯುವ ಆವರಣದಲ್ಲಿ ಬಾಳೆಹಣ್ಣನ್ನು ಮಾರಾಟ ಮಾಡಬಾರದೆಂದು ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವ ಸಂದರ್ಭದಲ್ಲಿ ಪೀಪಿ, ಪುಂಗಿ ಮಾರಾಟ ಮಾಡದಿರಲು ಸದ್ಭಕ್ತರಲ್ಲಿ ಮನವಿ
ಶ್ರೀ ಗವಿಮಠದ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಜಾತ್ರಾ ಸಮಯದಲ್ಲಿ ಅಪಾರ ಜನಸ್ತೋಮ ಸೇರಿರುವುದರಿಂದ ಶ್ರೀ ಮಠದ ಆವರಣ ಹಾಗೂ ಜಾತ್ರಾಮಹೋತ್ಸವ ಆವರಣದಲ್ಲಿ ಜೋರಾಗಿ ಶಬ್ದ ಮಾಡುವ ಪೀಪಿ, ಪುಂಗಿ ಇತ್ಯಾದಿಗಳನ್ನು ಬಳಸುವುದರಿಂದ ಮಕ್ಕಳು, ವಯೋವೃದ್ಧರು, ಮಹಿಳೆಯರು, ಸಣ್ಣ ಮಕ್ಕಳು ಜಾತ್ರೆಗೆ ಆಗಮಿಸುವ ಭಕ್ತಗಣಕ್ಕೆ, ಈ ಪೀಪಿಗಳು ಉಂಟು ಮಾಡುವ ಶಬ್ದದಿಂದ ತೊಂದರೆ, ಮಾನಸಿಕ ಹಿಂಸೆಯಾಗುವುದರಿAದ ಜೋರಾಗಿ ಕರ್ಕಶವಾಗಿ ಸದ್ದು ಮಾಡಿ ಶಬ್ದಮಾಲಿನ್ಯ ಉಂಟುಮಾಡುವ ಪೀಪಿಗಳನ್ನು ಮಾರುವುದನ್ನು ಮಾಡಬಾರದು ಎಂದು ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Get real time updates directly on you device, subscribe now.

Comments are closed.

error: Content is protected !!
%d bloggers like this: