ಸುಳ್ಳು ಸಾಕ್ಷಿ ಹೇಳಿದ್ದರಿಂದ ದೂರುದಾರರ ಮೇಲೆ ಕ್ರಮ
ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ದೂರುದಾರರು ಪ್ರತಿಕೂಲ ಸುಳ್ಳು ಸಾಕ್ಷಿ ಹೇಳಿದ್ದರಿಂದ ಅವರ ವಿರುದ್ದ ಸಿ.ಆರ್.ಪಿ.ಸಿ ಕಲಂ 340 ರ ಪ್ರಕಾರ ದೂರನ್ನು ಕಲಂ 193 ಐ.ಪಿ.ಸಿ. ರಡಿಯಲ್ಲಿ ದಾಖಲಿಸಲು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಖ್ಯಾ ಆಡಳಿತಾಧಿಕಾರಿಗಳಿಗೆ ನಿರ್ದೇಶನ ನಿಡಲಾಗಿದೆ.
ಪ್ರಕರಣ ಏನು?: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕೊಪ್ಪಳದಲ್ಲಿ ದೂರುದಾರರು ದಿ:13.05.2020ರಂದು ಸರಕಾರಿ ಕರ್ತವ್ಯದಲ್ಲಿದಾಗ ವ್ಯಕ್ತಿಯೊಬ್ಬರು ಕೃಷಿ ಯೋಜನೆಗಳ ಮಾಹಿತಿ ಕೇಳಲು ಕಚೇರಿಗೆ ಭೇಟಿ ನೀಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸರಕಾರಿ ಕರ್ತವ್ಯವನ್ನು ನಡೆಸಲು ಅಡಚಣೆ ಮಾಡಿದ್ದರಿಂದ ಆ ವ್ಯಕ್ತಿಯ ವಿರುದ್ದ ದೂರುದಾರರು ಕೊಪ್ಪಳ ನಗರ ಠಾಣೆಯಲ್ಲಿ ದೂರನ್ನು ನೀಡಿದ್ದು ನಂತರ ತನಿಖಾಧಿಕಾರಿಯಾದ ಡಿ.ವೈ.ಎಸ್.ಪಿ ಅವರು ನ್ಯಾಯಾಲಯಕ್ಕೆ ವಿಶೇಷ (ಎಸ್.ಸಿ/ಎಸ್.ಟಿ) ಕಲಂಗಳ ಅಡಿಯಲ್ಲಿ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರಿಂದ ನ್ಯಾಯಾಲಯದಲ್ಲಿ ವಿಶೇಷ(ಎಸ್.ಸಿ ಎಸ್.ಟಿ) ಪ್ರಕರಣ ಸಂಖ್ಯೆ 20/2020 ಎಂದು ದಾಖಲಾಗಿತ್ತು.
ನಂತರ ವಿಚಾರಣೆಯ ವೇಳೆಯಲ್ಲಿ ದೂರುದಾರರು ತಾವು ನೀಡಿದ್ದ ದೂರಿನ ವಿರುದ್ದ ನ್ಯಾಯಾಲಯದಲ್ಲಿ, ಆರೋಪಿಯು ಗೊತ್ತಿರುವುದಿಲ್ಲ, ನೋಡಿಲ್ಲ, ಅವನು ಜಾತಿ ನಿಂದನೆ ಮಾಡಿರುವುದಿಲ್ಲ, ಕರ್ತವ್ಯಕ್ಕೆ ಅಡಚಣೆ ಮಾಡಿರುವುದಿಲ್ಲ ಹಾಗೂ ದೂರು ಕೊಟ್ಟಿರುವುದಿಲ್ಲ ಎಂದು ಪ್ರತಿಕೂಲ ಸುಳ್ಳು ಸಾಕ್ಷಿ ನುಡಿದಿದ್ದರು. ಈ ಪ್ರಕರಣದಲ್ಲಿ ಆರೋಪಿಯನ್ನು 21.12.2023 ರಂದು ಖುಲಾಸೆ ಮಾಡಲಾಗಿದೆ ಎಂದು ಕೊಪ್ಪಳದ ಸಾರ್ವಜನಿಕರ ಅಭಿಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.