ಕೊಪ್ಪಳ ಉಪ ನೊಂದಣಿ ಕಛೇರಿಯಲ್ಲಿ    ಭ್ರಷ್ಟಾಚಾರ ತಡೆಗಟ್ಟಲು ಕರವೇ ಜನಸೇನೆ ಮನವಿ

Get real time updates directly on you device, subscribe now.

ಕೊಪ್ಪಳ : ಕೊಪ್ಪಳ ಉಪ ನೊಂದಣೆ ಕಛೇರಿಯಲ್ಲಿ ಓಪನ್ ಭ್ರಷ್ಟಾಚಾರ ನಡೆಯುತ್ತಿದ್ದು ಇದನ್ನು ಕೂಡಲೇ ತಡೆಯುವಂತೆ ಕರ್ನಾಟಕ ರಕ್ಷಣಾ ವೇದಿಕೆ ಜನಸೇನೆ ಜಿಲ್ಲಾ ಘಟಕ ಕೊಪ್ಪಳ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಉಪ ನೊಂದಣೆ ಕಛೇರಿಯಲ್ಲಿ ದಿನ ನಿತ್ಯ ಸಾರ್ವಜನಿಕರು, ಖರೀದಿ ನೊಂದಣೆ, ಮಾರಾಟಾ, ಆಸ್ತಿ ಭೋಜ ಇತರೆ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ಪ್ರತಿ ನಿತ್ಯ ಉಪ ನೊಂದಣೆ ಕಛೇರಿಗೆ ತೆರಳುತ್ತಿದ್ದು, ಆದರೆ ಅಧಿಕಾರಿಗಳು ಸರ್ಕಾರದ ಶುಲ್ಕವನ್ನು ಹೊರತು ಪಡಿಸಿ ತಮಗೆ ಮನಬಂದತೆ ಉಪ ನೊಂದಣೆ ಜಮೀನು ಮಾಲೀಕರಲ್ಲಿ ಹಾಗೂ ನೊಂದಣೆಯ ಮಧ್ಯವರ್ತಿಗಳ ಮೂಲಕ ಅಧಿಕಾರಿಗಳು ಕಛೇರಿಯಲ್ಲಿ ತಮ್ಮ ಅನಧಿಕೃತವಾಗಿ ಕೆಲಸಗಾರರನ್ನು ಇಟ್ಟುಕೊಂಡು ಹಳ್ಳಿಗಳಿಂದ ಬರುವ ಜನರಲ್ಲಿ ಸಾವಿರಾರುಗಟ್ಟಲೇ ಹಣವನ್ನು ವಸೂಲಿ ಮಾಡುತ್ತಿರುವುದು ಗಮನಿಸಲಾಗಿದೆ, ಹಾಗೂ ಮದುವೆ ನೊಂದಣೆಗೆ ಸಂಬಂಧಿಸಿದಂತೆ ಸರ್ಕಾರಿ ಶುಲ್ಕವನ್ನು ಹೊರತುಪಡಿಸಿ ಹೆಚ್ಚುವರಿ ಹಣವನ್ನು ವಸೂಲು ಮಾಡುತ್ತಿರುವುದು ಕಂಡುಬಂದಿದೆ ಹಾಗೂ ನೂತನವಾಗಿ ಜಾರಿಯಾಗಿರುವ ಕಾವೇರಿ ಆನ್ ಲೈನ ಇಸಿ   ನ್ನು ನೀಡಲು ಅವಕಾಶ ನೀಡಿದ್ದು, ಕೊಪ್ಪಳ ತಾಲೂಕಿನಾಧ್ಯಂತ ಅಂದಾಜು ೨೮ ಹಣಕಾಸು ಸಂಸ್ಥೆಗಳು ಮತ್ತು ಫೈನಾನ್ಸ್‌ಗಳು ಸೇವೆಯನ್ನು ನೀಡುತ್ತಿದ್ದು ಎಲ್ಲಾ ಕಛೇರಿಗಳಿಗೆ ಸಾಲ ಮತ್ತು ಇತರೆ ಸೌಲಭ್ಯಕ್ಕಾಗಿ ಇಸಿ ಯ ಅವಶ್ಯಕತೆಯಿದ್ದು, ದಿನ ನಿತ್ಯ ಸಾರ್ವಜನಿಕರು ಪರದಾಡುವಂತಾಗಿದೆ ಅಲ್ಲದೆ ಅನೇಕ ದೂರುಗಳು ಇಸಿ ಯ ಕುರಿತು ಬಂದಲ್ಲಿ ಕಛೇರಿಯ ಮುಖ್ಯಸ್ಥರು ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಳ್ಳದೆ ಸುಮ್ಮನಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಕಾರಣ ಇಸಿ ಯನ್ನು ಸಾರ್ವಜನಿಕರಿಗೆ ನೀಡಲು ಉಪ ನೊಂದಣೆಯ ಕಛೇರಿ ಆವರಣದಲ್ಲಿ ಒಂದು ಕೇಂದ್ರವನ್ನು ಸ್ಥಾಪಿಸಿ ನಿಗದಿತ ಶುಲ್ಕ ಪಡೆದು ಸಮಯಕ್ಕೆ ಸರಿಯಾಗಿ ದಾಖಲೆಗಳನ್ನು ನೀಡುವಂತೆ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಸಂಘಟನೆಯಿಂದ ಉಗ್ರವಾದ ಹೋರಾಟವನ್ನ ಹಮ್ಮಿಕೊಳ್ಳಲಾಗುವುದು.

ಕಛೇರಿಯ ಮುಖ್ಯಸ್ಥರಾದ ಹಾಗೂ ಉಪನೊಂದಾಣಾಧಿಕಾರಿಗಳಾದ ಇವರು ಕಚೇರಿ ಸಮಯದಲ್ಲಿ ಸಾರ್ವಜನಿಕರ ಕೆಲಸ ಕಾರ್ಯಾಗಳನ್ನು ಮಾಡದೇ ಹೊರಗಡೆ ಹೊಗುವುದು ಮತ್ತು ಸಾಯಂಕಾಲ ಸಮಯಕ್ಕೆ ಬರುವುದು ಗಮನಿಸಲಾಗಿದೆ ಈ ರೀತಿಯಿಂದ ಕರ್ತವ್ಯ ನಿರ್ವಹಿಸುವುದರಿಂದ ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗುತ್ತಿದ್ದು ಇವರ ಮೇಲೆ ಸೂಕ್ತ ಕ್ರಮವಹಿಸಿಬೇಕು.ಒಂದು ವೇಳೆ ಯಾವುದೇ ಕ್ರಮಕ್ಕೆ ಮುಂದಾಗದೇ ಇದ್ದಲ್ಲಿ ಈ ಕುರಿತು ತಮ್ಮ ಕಾರ್ಯಲಯದ ಮುಂದೆ ಉಗ್ರವಾದ ಹೋರಾಟವನ್ನು ಮಾಡಲಾಗುವುದೆಂದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ನೇತೃತ್ವನ್ನು ಕರವೇ ಜನಸೇನೆ ಜಿಲ್ಲಾಧ್ಯಕ್ಷ ಬಸವರಡ್ಡಿ ಶಿವನಗೌಡ್ರ, ಪದಾಧಿಕಾರಿಗಳಾದ ಪರಶುರಾಮ, ಪ್ರಭುರಾಜ ಕರ್ಲಿ, ವಿನಯಕುಮಾರ ಅಡವಿಭಾವಿ, ನಾಗಲಿಂಗ ನಾಯಕ,ಸಿದ್ದು ಅಂಗಡಿ,ಶಿವಣ್ಣ, ಅನಂತಕುಮಾರ ಜಂತಕಲ್ಲ, ಕಾಸಿಂಸಾಬ ಕುಷ್ಟಗಿ ಮತ್ತೇತರರು ವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!