ಆರ್ ಕೆಡಿಸಿಸಿ ಬ್ಯಾಂಕ್ ಉತ್ತಮ ಸಾಧನೆ : ವಿಶ್ವನಾಥ ಮಾಲಿಪಾಟೀಲ್ 

Get real time updates directly on you device, subscribe now.

ಕೊಪ್ಪಳ : ರಾಯಚೂರು – ಕೊಪ್ಪಳ ಜಿಲ್ಲಾ ಸಹಕಾರಿ ( RKDCC ) ಬ್ಯಾಂಕ್ ಕಳೆದ ಹತ್ತು ವರ್ಷಗಳಿಂದ ಉತ್ತಮ ಸಾಧನೆ ಮಾಡುತ್ತ ಈ ವರ್ಷ 6.49 ಕೋಟಿ ರೂ. ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷರಾದ ವಿಶ್ವನಾಥ ಮಾಲಿಪಾಟೀಲ್ ಹೇಳಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ, ಉದ್ದೇಶಿಸಿ  ಮಾತನಾಡಿದ ಅವರು ರಾಜ್ಯದ 21 ಸಹಕಾರಿ ಬ್ಯಾಂಕುಗಳಲ್ಲಿ ಉತ್ತಮ ಗುಣಮಟ್ಟದ ಬ್ಯಾಂಕ್ ಎಂದು ನಬಾರ್ಡ್ ಅಧಿಕಾರಿಗಳಿಂದ ಪ್ರಶಂಸೆ ಪಡೆದಿದೆ. ಕಲಬುರ್ಗಿ ವಿಭಾಗದದ ಸಹಕಾರಿ ಬ್ಯಾಂಕುಗಳಲ್ಲಿ ನಮ್ಮದು ಉನ್ನತ ಸಾಧನೆಯ ಬ್ಯಾಂಕ್ ಆಗಿದೆ.
1988-98 ರ ಅವಧಿಯಲ್ಲಿ ಮುಚ್ಚುವಂತ ಸ್ಥಿತಿಯಲ್ಲಿದ್ದ ಈ ಬ್ಯಾಂಕ್ ಈಗ 1494 ಕೋಟಿ ರೂಪಾಯಿ ದುಡಿಯುವ ಬಂಡವಾಳ ಹೊಂದಿದೆ. 1193 ಕೋಟಿ ರೂಪಾಯಿ ಠೇವಣಿ ಹೊಂದಿದ್ದು ವಸೂಲಾಗದ ಸಾಲ ಶೂನ್ಯಕ್ಕಿಂತ ( 0.73 %) ಕಡಿಮೆ ಇದೆ.  2013 ರಲ್ಲಿ 276 ಕೋಟಿ ಇದ್ದ ಬ್ಯಾಂಕ್ ಠೇವಣಿ 2023 ಕ್ಕೆ 1193 ಕೋಟಿಗೆ ಏರಿದ್ದು ಬ್ಯಾಂಕ್ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಶ್ರಮದಿಂದ. 663 ಕೋಟಿ ರೂಪಾಯಿ ಕೆಸಿಸಿ ಮಧ್ಯಮಾವಧಿ ಸಾಲ ನೀಡಿದೆ. 10 ವರ್ಷಗಳ ಅವಧಿಯಲ್ಲಿ 9 ಬಾರಿ ಬ್ಯಾಂಕ್ ವಹಿವಾಟಿನಲ್ಲಿ ಎ ಗ್ರೇಡ್ ಪಡೆದು ಸಾಧನೆ ಮಾಡಿದೆ.
ಕೊಪ್ಪಳ ಜಿಲ್ಲೆಯಾಗಿ 25 ವರ್ಷ ಕಳೆದರೂ RDCC ಬ್ಯಾಂಕಿನಿಂದ ಬೇರ್ಪಟ್ಟು KDCC ( ಕೊಪ್ಪಳ ಜಿಲ್ಲಾ ಸಹಕಾರಿ ಬ್ಯಾಂಕ್ ) ಬ್ಯಾಂಕ್ ಕೆಲ ಮಾನದಂಡಗಳ ಕಾರಣದಿಂದ ಸ್ಥಾಪನೆ ಆಗಿಲ್ಲ ಎಂದರು.
ಈ ಸಂದರ್ಭದಲ್ಲಿ ಬ್ಯಾಂಕ್ ಉಪಾಧ್ಯಕ್ಷರಾದ ಶಿವಶಂಕರಗೌಡ ಪಾಟೀಲ್, ನಿರ್ದೇಶಕರಾದ ಶೇಖರಗೌಡ ಮಾಲಿಪಾಟೀಲ್, ಶರಣಪ್ಪ ಹ್ಯಾಟಿ, ರಾಜೇಂದ್ರ ಶೆಟ್ಟರ್, ಶೇಖರಗೌಡ ಉಳ್ಳಾಗಡ್ಡಿ, ಶರಣಗೌಡ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!