ಸಂಗೀತದ ಹಬ್ಬ ಈಗಲೂ ಚಾಲ್ತಿಯಲ್ಲಿದೆ : ಎ.ಎಮ್.ಮದರಿ

Get real time updates directly on you device, subscribe now.


ಕೊಪ್ಪಳ : ಮೊದಲು ಭಾಗ್ಯನಗರದಲ್ಲಿ ಎರಡು ಹಬ್ಬಗಳು ನಡೆಯುತ್ತಿದವು ಒಂದು ಸಾಹಿತ್ಯದ ಹಬ್ಬ, ಇನ್ನೊಂದು ಸಂಗೀತದ ಹಬ್ಬ , ಸಂಗೀತದ ಹಬ್ಬ ಈಗಲೂ ಚಾಲ್ತಿಯಲ್ಲಿದೆ ಅದಕ್ಕೆ ಮುಖ್ಯ ಕಾರಣ ರಾಮಚಂದ್ರಪ್ಪ ಉಪ್ಪಾರ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎ.ಎಮ್.ಮದರಿ ಹೇಳಿದರು.
ಅವರು ಭಾಗ್ಯನಗರದ ಶ್ರೀ ಗುರು ಪಂಚಾಕ್ಷರಿ ಸಂಗೀತ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಕೊಪ್ಪಳ / ಬೆಂಗಳೂರು ಹಾಗೂ ಕೇಂದ್ರ ಸಂಸ್ಕೃತಿ ಸಚಿವಾಲಯ ದೆಹಲಿ ಇವರ ಸಹಯೋಗದಲ್ಲಿ ಶ್ರೀಮತಿ ಗಂಗಮ್ಮ ಲಕ್ಷ್ಮಣಸಾ ಖೋಡೆ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಗುರು ಪಂಚಾಕ್ಷರಿ ಸಂಗೀತೋತ್ಸವ ವಿಶೇ? ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಾಗ್ಯನಗರದಲ್ಲಿ ಸಂಗೀತ ಜೀವಂತವಾಗಿರುವುದು ರಾಮಚಂದ್ರಪ್ಪ ಉಪ್ಪಾರರಿಂದ ಮಾತ್ರ, ಸುಮಾರು ೪೦ ವ?ದಿಂದ ಭಾಗ್ಯನಗರದಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಕೊಪ್ಪಳದ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಈ ಸಂಸ್ಥೆ ಸ್ಥಾಪನೆ ಆಗಿ ೨೨ ವ? ಆಗಿದೆ, ಕೊಪ್ಪಳದ ಮೊಟ್ಟ ಮೊದಲ ಸಂಗೀತಗಾರ ಹಾಗೂ ಭಾಗ್ಯನಗರದ ಮೊದಲ ಸಂಗೀತ ಸಂಸ್ಥೆ ಶ್ರೀ ಗುರು ಪಂಚಾಕ್ಷರಿ ಸಂಗೀತ ಸೇವಾ ಸಂಸ್ಥೆ, ಈ ಹಿಂದೆ ಕುದುರಿಮೋತಿ ಹೋರಾಟದ ಹಾಡುಗಳನ್ನು ಸಂಗೀತ ನಿರ್ದೇಶನ ಮಾಡಿದವರು ರಾಮಚಂದ್ರಪ್ಪ ಉಪ್ಪಾರ ಯಾರು ನಿರಂತರ ಪ್ರಯತ್ನ ಮಾಡುತ್ತಾರೆ ಅವರಿಗೆ ಮಾತ್ರ ಸಂಗೀತ ಒಲಿಯುತ್ತದೆ, ಮೊದಲ ಪ್ರಯತ್ನ ಮಾಡಬೇಕು, ಅದಕ್ಕೆ ಪ್ರಯತ್ನಂ ಸರ್ವ ಸಿದ್ದಿ ಸಾಧನೆ ಎಂದು ಹೇಳುತ್ತಾರೆ, ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತೆ, ಎಂದು ಹೇಳಿದರು.

ವಿಶೇ? ಸನ್ಮಾನಿತರು ಅಲ್ಲಮಪ್ರಭು ಬೆಟ್ಟದೂರು ಹಾಗೂ ಎಂ.ಎಮ್. ಮದರಿ ಯವರಿಗೆ ” ಸಾಹಿತ್ಯ ರತ್ನ ” ಪ್ರಶಸ್ತಿ ಮತ್ತು ದಾನಪ್ಪ ಜಿ ಕೆ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಚಂದ್ರಪ್ಪ ಉಪ್ಪಾರ ವಹಿಸಿದ್ದರು, ಉದ್ಘಾಟನೆಯನ್ನು ಎ.ಎಮ್ ಮದರಿ ನೆರವೇರಿಸಿದರು, ಮುಖ್ಯ ಅತಿಥಿಗಳಾಗಿ ಅಲ್ಲಮಪ್ರಭು ಬೆಟ್ಟದೂರು, ಹಿರಿಯ ಸಾಹಿತಿಗಳು ಕೊಪ್ಪಳ, ದಾನಪ್ಪ ಜಿ ಕೆ ಇಂಜಿನಿಯರ್ ಕೊಪ್ಪಳ, ಹೊನ್ನೂರುಸಾಬ್ ಭೈರಾಪುರ ಸದಸ್ಯರು ಪಟ್ಟಣ ಪಂಚಾಯಿತಿ ಭಾಗ್ಯನಗರ, ಹಾಗೂ ರಾಘವೇಂದ್ರ ಕೋಣಿ ಭಾಗ್ಯನಗರ, ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಪ್ರಾರ್ಥನಾ ಗೀತೆ, ಭಾಗವಹಿಸಿದ ಕಲಾವಿದರು, ಮಂಗಲವಾದ್ಯ ಹರೀಶ್ ಕುಮಾರ್ ತುಮಕೂರು, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಬದ್ರಿನಾಥ್ ನರಗುಂದ, ತಬಲಾ ಸೋಲೋ ರಿಜ್ವಾನ್ ಗಂಗಾವತಿ, ಸುಗಮ ಸಂಗೀತ ಕವಿತಾ ಗಂಗೂರ ಬಳ್ಳಾರಿ, ತತ್ವಪದ ವಸಂತಕುಮಾರ್.ಕೆ.ಬಳ್ಳಾರಿ , ದಾಸವಾಣಿ ಸುಬ್ರಹ್ಮಣ್ಯಶರ್ಮ ಕಾರಟಗಿ, ಜಾನಪದ ಗೀತೆ ಸ್ನೇಹ ಕೆ.ಎಮ್ ಗಂಗಾವತಿ, ಬಾನ್ಸುರಿ ವಾದನ ಪುಟ್ಟರಾಜ ಬಣ್ಣದ, ಸಮೂಹ ನೃತ್ಯ ಅಪರ್ಣಾ ಹೆಗಡೆ ಹಾಗೂ ತಂಡದಿಂದ ವಿಶೇ? ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ವಾದ್ಯವೃಂದದ ಕೀಬೋರ್ಡನಲ್ಲಿ ರಾಮಚಂದ್ರಪ್ಪ ಉಪ್ಪಾರ, ಕೊಳಲಿನಲ್ಲಿ ನಾಗರಾಜ ಶ್ಯಾವಿ, ತಬಲಾದಲ್ಲಿ ಮಾರುತಿ ದೊಡ್ಡಮನಿ ಗದಗ, ರಿದಂ ಪ್ಯಾಡನಲ್ಲಿ ನಂದೀಶ್ ಹೀರೆಮಠ ಬೆಂಗಳೂರು, ಗಿಟಾರನಲ್ಲಿ ತಿಪ್ಪೇಶ್ ಹೀರೆಮಠ ಬೆಂಗಳೂರು, ಡೊಲಕ್ ನಲ್ಲಿ ಮುನ್ನಾ ಚಿತ್ರದುರ್ಗ, ತಾಳವಾದ್ಯದಲ್ಲಿ ಕೃ? ಸೊರಟೂರ ಮೆರುಗು ನೀಡಿದರು.

Get real time updates directly on you device, subscribe now.

Comments are closed.

error: Content is protected !!