ಸಂವಿಧಾನದ ಹಕ್ಕುಗಳಿಗೆ ಯಾವುದೇ ಚ್ಯುತಿ ಬರದಂತೆ ನಾವು ನಡೆದುಕೊಳ್ಳಬೇಕು: ವಿಜಯಕುಮಾರ ಮ. ಕನ್ನೂರ
ನಿಸರ್ಗದತ್ತವಾದ ಹಕ್ಕುಗಳ ಜೊತೆಗೆ ಪ್ರತಿಯೊಬ್ಬರು ಸಂತೃಪ್ತ ಜೀವನ ನಡೆಸಲು ಕೆಲವು ಹಕ್ಕುಗಳನ್ನು ಸಂವಿಧಾನದಲ್ಲಿ ನೀಡಲಾಗಿದ್ದು, ಕಾನೂನಿನ ಮೂಲಕ ಅವುಗಳಿಗೆ ಯಾವುದೇ ಚ್ಯುತಿ ಬರದಂತೆ ನಾವೆಲ್ಲರೂ ನಡೆದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಯಲಬುರ್ಗಾ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ವಿಜಯಕುಮಾರ ಮ. ಕನ್ನೂರ ರವರು ಹೇಳಿದರು.
ಡಿ.30 ರಂದು ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಅಭಿಯೋಜನಾ ಇಲಾಖೆ ಯಲಬುರ್ಗಾ ಇವರ ಸಂಯುಕ್ತಾಶ್ರಯದಲ್ಲಿ ಚಿಕ್ಕಮ್ಯಾಗೇರಿಯ ಸಮಾಜ ಕಲ್ಯಾಣ ಇಲಾಖೆಯ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಪ್ರತಿಯೊಬ್ಬರು ಸಂವಿಧಾನದ ಬಗ್ಗೆ, ಕಾನೂನು ಬಗ್ಗೆ ತಿಳುವಳಿಕೆ ಪಡೆದುಕೊಳ್ಳುವುದು ಅತ್ಯವಶ್ಯ. ಹಾಗೆಯೇ ಪ್ರಸ್ತುತ ದಿನಗಳಲ್ಲಿ ಸೈಬರ್‌ಕ್ರೆöÊಮ್ ಎನ್ನುವುದು ಬಹಳ ನಡೆಯುತ್ತಿದ್ದು, ಪ್ರತಿಯೊಬ್ಬರೂ ಯಾವುದೇ ವೈಯಕ್ತಿಕ ದಾಖಲೆಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವಾಗ ಎಚ್ಚರವಹಿಸಬೇಕು. ನಿಸರ್ಗದತ್ತವಾದ ಹಕ್ಕುಗಳ ಜೊತೆಗೆ ಪ್ರತಿಯೊಬ್ಬರು ಸಂತೃಪ್ತ ಜೀವನ ನಡೆಸಲು ಕೆಲವು ಹಕ್ಕುಗಳನ್ನು ಸಂವಿಧಾನದಲ್ಲಿ ನೀಡಲಾಗಿದ್ದು, ಕಾನೂನಿನ ಮೂಲಕ ಅವುಗಳಿಗೆ ಯಾವುದೇ ಚ್ಯುತಿ ಬರದಂತೆ ನಾವೆಲ್ಲರೂ ನಡೆದುಕೊಳ್ಳಬೇಕು ಎಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ಮಾನವ ಹಕ್ಕುಗಳು, ಮೂಲಭೂತ ಹಕ್ಕುಗಳು, ಮಕ್ಕಳ ಹಕ್ಕುಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಲಬುರ್ಗಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ. ಕೆ ಬಡಿಗೇರ ವಹಿಸಿದ್ದರು. ಯಲಬುರ್ಗಾ ಸಹಾಯಕ ಸರ್ಕಾರಿ ಅಭಿಯೋಜಕರಾದ ರವಿ ಹುಣಸಿಮರದ, ಅಪರ ಸಕಾರಿ ವಕೀಲರಾದ ಶಂಕರಗೌಡ ಎ.ಎಮ್, ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿ ನಿಂಗಪ್ಪ ಕೆ.ಟಿ, ಚಿಕ್ಕಮ್ಯಾಗೇರಿಯ ವಕೀಲರಾದ ಯು. ಎಸ್.ಮೆಣಸಗೇರಿ , ಎ.ಎಮ್. ಪಾಟೀಲ್ , ಚಿಕ್ಕಮ್ಯಾಗೇರಿಯ ಗ್ರಾಮ ಪಂಚಯತ ಅಧ್ಯಕ್ಷರಾದ ಶರಣಪ್ಪ ಕುರಿ, ಉಪಾಧ್ಯಕ್ಷರಾದ ಗಾಳೆಮ್ಮ ಮಾದರ, ಸದಸ್ಯರಾದ ಶರಣಯ್ಯ ಬಂಡಿಹಾಳ, ಶರಣಪ್ಪ ಕರಡದ, ಉಡಚಮ್ಮ ಉಪ್ಪಾರ, ಶಾಂತಮ್ಮ ಮುರಾರಿ, ಎಸ್.ಎನ್.ಎಸ್.ಡಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ವೇದಪಾಠ, ಎಚ್.ಪಿ.ಜೆ ಶಾಲೆಯ ಸಹಶಿಕ್ಷಕರಾದ ಮುಜಾವರ, ಸಮಾಜ ಕಲ್ಯಾಣ ಇಲಾಖೆಯ ರಾಚಣ್ಣ ಗದಗಿನ್, ವಾರ್ಡನ್ ಬಸವರಾಜ ಹಾಳಕೇರಿ, ಶರಣಪ್ಪ ಅಬ್ಬಿಗೇರಿ, ಕರಿಯಪ್ಪ, ರಾಮಚಂದ್ರ ಹಾಗೂ ಸಿಬ್ಬಂದಿ ವರ್ಗದವರು, ನಿಲಯದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Comments are closed.