ಗಂಗಾವತಿ ಐ.ಎಂ.ಎ ಶಾಖೆಗೆ ರಾಷ್ಟ್ರಮಟ್ಟದಲ್ಲಿ ಉತ್ತಮ ಶಾಖೆ ಪ್ರಶಸ್ತಿ

Get real time updates directly on you device, subscribe now.

ಗಂಗಾವತಿ: ಇತ್ತೀಚೆಗೆ ಕೇರಳದ ತಿರುವನಂತಪುರಂದಲ್ಲಿ ೯೮ನೇ ಐ.ಎಂ.ಎ ರಾಷ್ಟ್ರೀಯ ಸಮ್ಮೇಳನ ನಡೆಯಿತು. ಈ ಸಮ್ಮೇಳನದಲ್ಲಿ ಗಂಗಾವತಿ ಐ.ಎಂ.ಎ ಗೆ ಉತ್ತಮ ಶಾಖೆ ಪ್ರಶಸ್ತಿ ಪುರಸ್ಕಾರ ಲಭಿಸಿದೆ.

ಗಂಗಾವತಿ ಐ.ಎಂ.ಎ ಶಾಖೆಯು ೨೦೨೨-೨೩ನೇ ಸಾಲಿನಲ್ಲಿ ಸುಮಾರು ೧೦೫ ಕ್ಕಿಂತಲೂ ಹೆಚ್ಚು ಸಾಕಷ್ಟು ಸಾಮಾಜಿಕ ಕಳಕಳಿ ಕಾರ್ಯಕ್ರಮಗಳ ಜೊತೆಗೆ, ಸಾಮಾನ್ಯ ಹಾಗೂ ಬಡವರ್ಗದವರಿಗೆ ಅನುಕೂಲಕರವಾದ ಕಾರ್ಯಕ್ರಮಗಳನ್ನು, ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಿಕೊಂಡಿರುವುದರ ಪ್ರಯುಕ್ತ ಈ ಹಿಂದೆ ಬೀದರ್‌ನಲ್ಲಿ ನಡೆದ ಕರ್ನಾಟಕ ರಾಜ್ಯ ಸಮ್ಮೇಳನದಲ್ಲಿ ಗಂಗಾವತಿ ಶಾಖೆಗೆ ಉತ್ತಮ ಶಾಖೆ ಎಂದು ಅವಾರ್ಡ್ ಲಭಿಸಿದ್ದು, ಅದರಂತೆ ಈಗ ರಾಷ್ಟ್ರೀಯ ಸಮ್ಮೇಳನದಲ್ಲಿಯೂ ಕೂಡಾ ನಮ್ಮ ಗಂಗಾವತಿ ಐ.ಎಂ.ಎ ಶಾಖೆ ಗುರುತಿಸಿಕೊಂಡು ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದೆ. ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಗಂಗಾವತಿ ಐ.ಎಂ.ಎ ಶಾಖೆಯು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಪ್ರಶಂಸನೆಗೆ ಪಾತ್ರವಾಗಿದೆ.

ತಿರುವನಂತಪುರಂನಲ್ಲಿ ನಡೆದ ಐ.ಎಂ.ಎ ರಾಷ್ಟ್ರೀಯ ಸಮ್ಮೇಳನದಲ್ಲಿ ಐ.ಎಂ.ಎ ಅಧ್ಯಕ್ಷರಾದ ಡಾ|| ಕೆ.ಎನ್. ಮಧುಸೂಧನ್, ಕಾರ್ಯದರ್ಶಿಯಾದ ಡಾ|| ಮಹಾಂತೇಶ ಜಿ.ಪಿ., ಹಿರಿಯ ವೈದ್ಯರಾದ ಡಾ|| ಜಂಬುನಾಥಗೌಡ, ಡಾ|| ಅಕ್ಷತಾ ಪಟ್ಟಣಶೆಟ್ಟಿ ಹಾಗೂ ಐ.ಎಂ.ಎ ಮಹಿಳಾ ಘಟಕದ ಸದಸ್ಯರಾದ ಶ್ರೀಮತಿ ರಶ್ಮಿ ಮಧುಸೂಧನ್ ಭಾಗವಹಿಸಿ ಈ ಅವಾರ್ಡ್‌ನ್ನು ಸ್ವೀಕರಿಸಿದರು.

Get real time updates directly on you device, subscribe now.

Comments are closed.

error: Content is protected !!