ಕಾಂಗ್ರೆಸ್ ಪಕ್ಷದ ೧೩೮ನೇ ಸಂಸ್ಥಾಪನಾ ದಿನಾಚರಣೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಭಾಗಿ

Get real time updates directly on you device, subscribe now.

 

ಕೊಪ್ಪಳ: ೨೮ ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಾಂಗ್ರೆಸ್ ಪಕ್ಷದ ೧೩೮ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ರವರು ಪುಷ್ಪಚರ್ಣೆ ಮಾಡಿ ಬಳಿಕ ಮಾತನಾಡಿದ ಅವರು ಈ ದೇಶದ ಇತಿಹಾಸ ಕಂಡ ಪ್ರಮುಖ ರಾಜಕೀಯ ಪಕ್ಷ ಹಾಗೂ ಜನಪರತೆಯ ಆಧಾರದ ಮೇಲೆ ಎಲ್ಲ ವರ್ಗಗಳ ಏಳಿಗೆಗಾಗಿ ಶ್ರಮಿಸುತ್ತಾ ಸಮಾನ ಅವಕಾಶಗಳನ್ನು ಸೃಷ್ಟಿಸಿದ ಕಾಂಗ್ರೆಸ್ ಪಕ್ಷದ ೧೩೮ನೇ ಸಂಸ್ಥಾಪನಾ ದಿನಾಚರಣೆ ಇಂದು. ಸ್ವಾತಂತ್ರ್ಯದ ನಂತರದಲ್ಲಿ ಅತ್ಯಂತ ಆರೋಗ್ಯಪೂರ್ಣವಾಗಿ ದೇಶವನ್ನು ಮುನ್ನಡೆಸಿದ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು.
ದೇಶಕ್ಕೆ ಕಾಂಗ್ರೆಸ್ ಪಕ್ಷ ಅಪಾರ ಕೊಡುಗೆ ನೀಡಿದೆ. ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ರಾಜೀವಗಾಂಧಿ ಅವರವರೆಗೂ ದೇಶದ ಸಮಗ್ರ ವಿಕಾಸಕ್ಕಾಗಿ ಕಾಲಕ್ಕೆ ತಕ್ಕಂತೆ ಶ್ರಮಿಸಿದೆ
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹುತೇಕ ಕಾಂಗ್ರೆಸ್ಸಿಗರು ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ. ಆಯಾ ಕಾಲಕ್ಕೆ ತಕ್ಕ ಬೇಡಿಕೆಯಂತೆ ಹೋರಾಟಗಳನ್ನು ಮಾಡಿ ರಾಜಕೀಯ ಮತ್ತು ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಇದು ಕೆಲವೇ ಜನರ ಪಕ್ಷವಲ್ಲ. ಇದೊಂದು ದೇಶದ ಜನರೇ ನಡೆಸುತ್ತಿರುವ ಪಕ್ಷವಾಗಿದೆ.
೭೦ ವರ್ಷಗಳ ತನ್ನ ಅಧಿಕಾರದ ಅವಧಿಯಲ್ಲಿ ಜನ ಸಮುದಾಯಗಳ ಸಮಾನ ಏಳಿಗೆಗಾಗಿ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಕಾಯ್ದೆಗಳು ಮತ್ತು ಯೋಜನೆಗಳು ಅಪಾರವಾಗಿತ್ತು. ಇನ್ನು ೭೦ ವರ್ಷಗಳಲ್ಲಿ ಕಾಂಗ್ರೆಸ್ ಮಾಡಿದ ಕೆಲಸಗಳು ಬೆಟ್ಟದಷ್ಟು.
ಇಂದಿಗೂ ಕಾಂಗ್ರೆಸ್ ಸಮಾಜದಲ್ಲಿ ಹರಡುತ್ತಿರುವ ದ್ವೇಷವನ್ನು ವಿರೋಧಿಸಲು ಪ್ರಯತ್ನಿಸುತ್ತಿದೆ, ಸಮಾಜದಲ್ಲಿನ ದ್ವೇಷವನ್ನು ಕೊನೆಗಾಣಿಸಲು ನಾವು ಸಿದ್ಧರಿದ್ದೇವೆ. ದೇಶವು ಒಗ್ಗೂಡಿದಾಗ ಮಾತ್ರ ಅದು ಅಭಿವೃದ್ಧಿ ಹೊಂದುತ್ತದೆ, ಇಲ್ಲದಿದ್ದರೆ ಯಾವುದೇ ದೇಶವು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಕೃಷ್ಣ ಇಂಟ್ಟಗಿ ಕಾಟಾನ ಪಾಷ ಕೃಷ್ಣ ರೆಡ್ಡಿ ಗಲಬಿ ಹಿರಿಯ ಮುಖಂಡರಗಳು ಉಪಸ್ಥಿತರಿದ್ದುರು ಗಾಳೆಪ್ಪ ಪೂಜಾರ ಅಶೋಕ ಗೋರಂಟ್ಲಿ ಸೈಯದ್ ಜುಲ್ಲು ಖಾದರಿ, ಶಿವರೆಡ್ಡಿ ಬೂಮಕ್ಕನವರ, ಕಿಶೋರಿ ಬೂದನೂರು, ಜ್ಯೋತಿ ಗೊಂಡಬಾಳ, ಸವಿತಾ ಗೋರಂಟ್ಲಿ, ಸೌಭಾಗ್ಯ ರೇಣುಕಾ ಪೂಜಾರ, ಸಲೀಂ ಅಳವಂಡಿ, ಮುತ್ತುರಾಜ್ ಕುಷ್ಟಗಿ, ಗುರುರಾಜ್ ಹಲಗೇರಿ, ಚಾಂದ್ ಪಾಷ ಕಿಲ್ಲೇದಾರ, ಗಾಳೆಪ್ಪ ಪೂಜಾರ ಮಲ್ಲು ಪೂಜಾರ ಹಿರಿಯ ಮುಖಂಡರುಗಳು, ಕಾಂಗ್ರೆಸ್ ಪಕ್ಷದ ಕಾಯ?ಕತ?ರು, ಹಾಗೂ ಇನ್ನೀತರರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!