ರಾಜಾಹುಸೇನ್ ಸೇರಿ ೩೧ ಜನರಿಗೆ ನಾಳೆ ರಾಜ್ಯ ಯುವ ಪ್ರಶಸ್ತಿ ಪ್ರದಾನ

Get real time updates directly on you device, subscribe now.

ಕೊಪ್ಪಳ: ಚಿಕ್ಕಮಗಳೂರ ಜಿಲ್ಲೆ ತರೀಕೆರೆಯಲ್ಲಿ ಡಿಸೆಂಬರ್ ೩೦ ರಂದು ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಹುಲಗಿ ಗ್ರಾಮದ ರಾಜಾಹುಸೇನ್ ಜವಳಿ ಸೇರಿ ೩೧ ಜನರಿಗೆ ೨೦೨೩-೨೪ ನೇ ಸಾಲಿನ ರಾಜ್ಯ ಯುವ ಪ್ರಶಸ್ತಿ ಪ್ರದಾನ ಮಾಡಲಾಗುವದು ಎಂದು ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಹುಲಗಿಯ ರಾಜಾಹುಸೇನ್ ಹುಸೇನ್ ಭಾಷಾ ಜವಳಿ ಅವರು ಹಲವು ವರ್ಷಗಳಿಂದ ಕ್ರೀಡೆ ಮತ್ತು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದು, ಹುಲಗಿ ಭಾಗದಲ್ಲಿ ಕ್ರೀಡಾ ಚಟುವಟಿಕೆಗಳ ಬೆಳವಣಿಗೆಗೆ ಕೆಲಸ ಮಾಡುತ್ತಿರುವದನ್ನು ಗುರುತಿಸಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಮತ್ತು ಚಿಕ್ಕಮಗಳೂರ ಜಿಲ್ಲಾ ಘಟಕ ಜಂಟಿಯಾಗಿ ನೀಡುವ ಪ್ರತಿಷ್ಠಿತ ರಾಜ್ಯ ಯುವ ಪ್ರಶಸ್ತಿ ಸಂದಿದೆ. ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯುವ ಪ್ರಶಸ್ತಿ ಕೊಡುವದನ್ನು ನಿಲ್ಲಿಸಿದಾಗಿನಿಂದ ಯುವ ಒಕ್ಕೂಟ ಅಂತಹ ಕೆಲಸ ಮಾಡುತ್ತಿದೆ, ಜಿಲ್ಲೆಯಿಂದ ಒಬ್ಬರಿಗೆ ಪ್ರಶಸ್ತಿ ಕೊಡುತ್ತಿದ್ದು ಈಗಲೂ ಸರಕಾರ ಪ್ರಶಸ್ತಿ ಕೊಡುವದನ್ನು ಆರಂಭಿಸುವಂತೆ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಡಾ. ಎಸ್. ಬಾಲಾಜಿ ನೇತೃತ್ವದಲ್ಲಿ ಒತ್ತಾಯಿಸುತ್ತಲೇ ಇದೆ.
ಚಿಕ್ಕಮಗಳೂರ ಜಿಲ್ಲೆ ತರೀಕೆರೆಯಲ್ಲಿ ಡಿಸೆಂಬರ್ ೩೦ ರಂದು ಡಾ. ಅಂಬೇಡ್ಕರ್ ಭವನದ ಬಯಲು ರಂಗಮಂದಿರದಲ್ಲಿ ಶಾಸಕ ಜಿ. ಹೆಚ್. ಶ್ರೀನಿವಾಸ್, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಡಾ. ಜಾವೇದ್ ಜಮಾದಾರ್, ಚಿಕ್ಕಮಗಳೂರು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಇಮ್ರಾನ್ ಅಹ್ಮದ್ ಬೇಗ್ ಸೇರಿ ಹಲವರು ಪ್ರಶಸ್ತಿ ಪ್ರದಾನ ಮಾಡುವರು.
ಪ್ರಶಸ್ತಿ ವಿಜೇತರು : ಕೊಪ್ಪಳ ಜಿಲ್ಲೆ ಹುಲಗಿಯ ರಾಜಾಹುಸೇನ್ ಹುಸೇನ್ ಭಾಷಾ ಜವಳಿ ಸಾರ್ತಿನ್ ಶೆಟ್ಟಿಗಾರ್ ಉಡುಪಿ, ಆನಂದ್ ಜಡಗೆನವರ ಬೀದರ್, ದೊಡ್ಡ ಸಿದ್ದ ನಾಯಕ ಚಾಮರಾಜನಗರ, ಸೂರ್ಯ ಎಸ್. ಕೋಲಾರ, ಉಮರ್ ಫಾರೂಕ್ ದಳವಾಯಿ ಗದಗ, ಸಾಗರ್ ಇಟೇಕರ್ ರಾಯಚೂರ, ಟಿ. ಎನ್. ಜಗದೀಶ್ ಚಿಕ್ಕಮಗಳೂರು, ಸುರೇಶ ಮಲ್ಲೇಶಪ್ಪಾ ತಳವಾರ ಕಲಬುರ್ಗಿ, ಅಬ್ದುಲ್ ಶಾಹಿದ್ ಮೈಸೂರು, ಸಂಗಪ್ಪ ಪೂಜಾರಿ ಬೆಳಗಾವಿ, ಸಂದೇಶ್ ಆರ್. ನಾಯಕ್ ಉತ್ತರ ಕನ್ನಡ, ಕುಮಾರಿ ಸರಸ್ವತಿ ಎನ್. ಬೆಂಗಳೂರು ಗ್ರಾ., ಪವನ್ ಯಾದವ್ ಚಿತ್ರದುರ್ಗ, ಜಿತಾಕ್ಷ ಜಿ. ದಕ್ಷಿಣ ಕನ್ನಡ, ಹರ್ಷಿತ್ ಸಿ ಪಿ. ಬೆಂಗಳೂರು ನಗರ, ರಘು ವಿ. ಮಂಡ್ಯ, ಕೌಸ್ತುಭ ಪಿ. ಕುಮಾರ್ ಶಿವಮೊಗ್ಗ, ಮಾಳಪ್ಪ ಯಾದಗಿರಿ, ವಿ. ಎಂ. ಪಾಟೀಲ್ ಬಾಗಲಕೋಟ, ಮಂಜುನಾಥ್ ಕೆ. ಬಳಗಲಿ ಧಾರವಾಡ, ಕುಮಾರಿ ಜ್ಞಾನಿಕ ಐವಿ ದಾವಣಗೇರೆ, ಗದಿಗಯ್ಯ ಗುರಯ್ಯ ಹಾವೇರಿ, ಕಾರ್ತಿಕ್ ಚಿಕ್ಕಬಳ್ಳಾಪುರ,
ಚಂದನ್ ವಿ. ಎನ್. ತುಮಕೂರು, ಅರುಣ್ ಕುಮಾರ್ ಪಿ ಎಂ. ಹಾಸನ, ಸುಜಯ್ ಟಿ ಪಿ. ಕೊಡಗು, ಧನುಷ್ ವಿಜಯನಗರ, ಅವಿನಾಶ್ ಎನ್. ಬಳ್ಳಾರಿ, ಸುನಿಲ್ ಎಂ ಕೆ. ರಾಮನಗರ, ಕೃಷ್ಣ ಚಂದಪ್ಪ ಕುಂಬಾರ ವಿಜಯಪುರ
ಸಾಂಘಿಕ ಪ್ರಶಸ್ತಿ : ಮಾತೃಭೂಮಿ ಯುವಕ ಸಂಘ ಲಗ್ಗೆರೆ ಬೆಂಗಳೂರು ಮತ್ತು ವೀರಾಂಜನೇಯ ಕಲಾ ಮಂಡಳಿ ಶಿವನಿ ಅಜ್ಜಂಪುರ ಚಿಕ್ಕಮಗಳೂರು ಜಿಲ್ಲೆಯವರಿಗೆ ಸಂದಿವೆ.

Get real time updates directly on you device, subscribe now.

Comments are closed.

error: Content is protected !!