ಮುಸ್ಲಿಂ ಸಮಾಜದ ವಿರುದ್ದ ಪ್ರಭಾಕರ್ ಭಟ್ ಹೇಳಿಕೆಗೆ ಕಾಂಗ್ರೆಸ್ ವಕ್ತಾರೆ ಶೈಲಜಾ ಹಿರೇಮಠ ಖಂಡನೆ

Get real time updates directly on you device, subscribe now.


ಗಂಗಾವತಿ: ಮುಸ್ಲಿಂ ಸಮುದಾಯದ ವಿರುದ್ಧ ತೀವ್ರ ಅವಹೇಳಕಾರಿ ಹೇಳಿಕೆ ನೀಡಿರುವ ಆರ್‌ಎಸ್‌ಎಸ್ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್ ಅವರು ತಮ್ಮ ಸಂಕುಚಿತ ಮನೋಭಾವ ಪ್ರದರ್ಶಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರೆ ಶೈಲಜಾ ಹಿರೇಮಠ ಕಟುವಾಗಿ ಖಂಡಿಸಿದರು.
ಅವರು ನಗರದ ಪತ್ರಿಕಾಭವನದಲ್ಲಿ ಸೋಮವಾರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.
ಅಂಬೇಡ್ಕರ್ ಸಂವಿಧಾನದ ಪ್ರಕಾರ ಈ ದೇಶದಲ್ಲಿ ಪ್ರತಿಯೊಬ್ಬರು ಗೌರವಯುತವಾಗಿ ಬದುಕುವ ಹಕ್ಕು ಹೊಂದಿದ್ದಾರೆ ವಾಕ್ ಸ್ವಾತಂತ್ರ್ಯ ಮಿತಿ ಮೀರಬಾರದು, ಎಲ್ಲ ಸಮುದಾಯದ ಹೆಣ್ಣು ಮಕ್ಕಳಿಗೂ ಗೌರವ ನೀಡಬೇಕು. ಸನಾತನ ಧರ್ಮದ ಪ್ರತಿಪಾದಕರಂತೆ ವರ್ತಿಸುವ ಭಟ್ ಅವರು ಯತ್ರ ನಾರಿ ಪೂಜಿಂತೆ… ಎನ್ನುವ ವಾಣಿ ಮರೆತಂತಿದೆ. ಇದೇ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷದ ಪ್ರಮುಖರಾಗಲಿ. ಅಲ್ಪ ಸಂಖ್ಯಾತರಾಗಲಿ ನೀಡಿದ್ದರೆ ರಾಜ್ಯ ಹೊತ್ತಿ ಹುರಿತ್ತಿತ್ತು. ಹಿಂದು ಧರ್ಮವನ್ನು ಗುತ್ತಿಗೆ ಪಡೆದವರಂತೆ ಆಡುವ ಭಟ್ಟರು ಸಮಾಜದ ಮುಂದೆ ಬೆತ್ತಲಾಗಿದ್ದಾರೆ. ಅಲ್ಪ ಸಂಖ್ಯಾತರನ್ನು ಎಷ್ಟೊಂದು ದ್ವೇಷಿಸುತ್ತಾರೆ ಎನ್ನುವ ಮನೋಭಾವ ಈ ಹೇಳಿಕೆ ಮೂಲಕ ಹೊರ ಹಾಕಿದ್ದಾರೆ. ಈ ಕುರಿತು ಬಿಜೆಪಿಯ ಯಾವೊಬ್ಬ ನಾಯಕನು ತುಟಿ ಬಿಚ್ಚದಿರುವುದು ಖೇದಕರ ಎಂದರು.
ಬಿಜೆಪಿ ನಾಯಕರಾದ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಆರ್.ಅಶೋಕ, ರಾಜ್ಯಧ್ಯಕ್ಷ ವಿಜಯೇಂದ್ರ ಹಾಗು ಈಶ್ವರಪ್ಪ ಇತರರು ಖಂಡಿಸದಿರುವುದು ದ್ವೇಷ ರಾಜಕಾರಣಕ್ಕೆ ಪರೋಕ್ಷ ಪ್ರೋತ್ಸಾಹ ಬಿಜೆಪಿ ನೀಡುತ್ತಿದ್ದಾರೆ. ರಾಜ್ಯದಲ್ಲಿ, ದೇಶದಲ್ಲಿ ಅಲ್ಪಸಂಖ್ಯಾತರು ಭಯದಲ್ಲಿ ನರಳುತ್ತಿದ್ದಾರೆ, ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಎಸಗಿದ ಸಂಸದರನ್ನು ಅರೆಷ್ಟ್ ಮಾಡದೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಮಹಿಳೆಯರ ಬಗ್ಗೆ ಗೌರವವಿಲ್ಲ, ಅನೇಕರು ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿದ್ದಾರೆ. ಮಣಿಪುರ ಘಟನೆಯ ಬಗ್ಗೆ ಚಕಾರ ಎತ್ತದ ಪ್ರಧಾನಿಗಳು ಬೆಳಗಾವಿ ಘಟನೆಗೆ ಸತ್ಯ ಶೋಧನಾ ಸಮಿತಿ ಕಳುಹಿಸುತ್ತಾರೆ ಇದೆಂಥ ವಿಪರ್ಯಾಸ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಆರ್‌ಎಸ್‌ಎಸ್ ಹಾಗು ವಿಹೆಚ್‌ಪಿಯ ಪ್ರಮುಖರ ಹೆಣ್ಣು ಮಕ್ಕಳು ಮುಸ್ಲಿಂ ಸಮಾಜದವರನ್ನು ಮಧುವೆಯಾದರೆ ಲವ್ ಜಿಹಾದ್ ಅಲ್ವಾ, ಅಶೋಕ್ ಸಿಂಘಾಲ್, ಮುರಳಿ ಮನೋಹರ ಜೋಷಿ, ಅಡ್ವಾಣಿ ಸೇರಿ ಅನೇಕ ನಾಯಕರ ಮಕ್ಕಳು ಮುಸ್ಲಿಂ ಸಮಾಜದ ಗಂಡುಗಳನ್ನು ವರಿಸಿಲ್ವೆ ಇದ್ಯಾಕೆ ಲವ್ ಜಿಹಾದ್ ಅಗಲ್ಲಾ, ಬಡವರ ಮಕ್ಕಳು ಮಧುವೆ ಆದ್ರೆ ಮಾತ್ರ ಲವ್ ಜಿಹಾದ್ ಆಗುತ್ತಾ ಎಂದು ಶೈಲಜಾ ಪ್ರಶ್ನಿಸಿದರು. ದಲಿತರ ಮೇಲೆ ದೌರ್ಜನ್ಯ್ ಆದ್ರೆ ಚಕಾರ ಎತ್ತದ ಬಿಜೆಪಿಗರು ಹಿಂದು ನಾವೆಲ್ಲ ಒಂದು ಎನ್ನುತ್ತಾರೆ ಡೊಂಗಿ ಹಿಂದುತ್ವ ತತ್ವ ಹಾಗು ಶ್ರೀರಾಮನ ಹೆಸರಲ್ಲಿ ರಾಜಕಾರಣ ಮಾಡುವುದು ಬಿಡಬೇಕು, ಜಾತಿಗಳ ನಡುವೆ ಸಂಘರ್ಷ, ಧರ್ಮಗಳ ನಡುವೆ ಸಂಘರ್ಷ ಏರ್ಪಡಿಸುವುದರ ಮೂಲಕ ಜನರ ಭಾವನೆಗಳನ್ನು ಕೆರಳಿಸಿ ಓಟ್ ಪಡೆಯುವ ತಂತ್ರಗಾರಿಕೆ ನಿಲ್ಲಿಸಿ ಅಭಿವೃದ್ಧಿಯ ಹೆಸರಲ್ಲಿ ಮತ ಪಡೆಯಲಿ ಎಂದು ಅವರು ಕಿಡಿಕಾರಿದರು.

Get real time updates directly on you device, subscribe now.

Comments are closed.

error: Content is protected !!