ಗುರು ಹಚ್ಚಿದ ಅಂತರಂಗದ ದೀಪಕ್ಕೆ ಬೆಲೆ ಕಟ್ಟಲಾಗದು – ಗವಿಶ್ರೀ

Get real time updates directly on you device, subscribe now.

 ಕೊಪ್ಪಳ

 ಗುರುಗಳು ನಮ್ಮ ಅಂತರಂಗದಲ್ಲಿ ಹಚ್ವಿದ ದೀಪ ಸದಾ ಬೆಳಗುತ್ತದೆ. ಅವರಿಗೆ ನಾವು ಹಾಕುವ ಬಾಡುವ ಮಾಲೆ.‌ಹರಿಯುವ ಶಾಲು ಯಾವುದಕ್ಕೂ ಸಾಲದು, ಅದನ್ನು ಬೆಲೆಯೂ ಕಟ್ಟಲಾಗದು ಎಂದು ಗವಿಮಠದ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

 ತಮ್ಮದೇ ತರಗತಿಯ 1997-98 ನೆಯ ಸಾಲಿನ ಅಂತಿಮ ಬಿಎ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗು ಸ್ನೇಹಸಮ್ಮೀಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮೆಲ್ಲರಿಗೂ ಅಂತಃಕರಣಕ್ಕೆ ಜ್ಞಾನ ಕಲ್ಪಿಸಿದ ಗುರುಗಳು ಹಾಗು ಸ್ನೇಹಿತರಿಗೆ ಸನ್ಮಾನಿಸುತ್ತಿರುವ ಹೃದಯಸ್ಪರ್ಶಿ ಕಾರ್ಯಕ್ರಮ.‌ ಜಗತ್ತಿನಲ್ಲಿ ನಾವೆಲ್ಲರು ಹಲವರ ಋಣದಲ್ಲಿದ್ದೇವೆ. ಅದನ್ನು ತೀರಿಸಲಾಗುದು ಎಂದರು.

ತಂದೆ ಹಾಗು ತಾಯಿಗಳ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರು ನಮಗೆ ರಿಯಲ್ ಹಿರೋಗಳು. ನಮಗೆ‌ ಕಲಿಸಿದ ಗುರುಗಳು ನಮಗೆ ಅಂತರಂಗ ಪಾಠ ಮಾಡಿದ ಗುರುಗಳ ನಮಗೆ ಸಂಸ್ಕಾರ ಕಲಿಸಿದ್ದಾರೆ. ಗುರುಗಳು ಅಮೃತವನ್ನು ಕಲಿತು ನಮಗೆ ಬೇಕಾದಷ್ಟು ಜ್ಞಾನ ನೀಡಿದ್ದಾರೆ. ಅವರ ಮಾಡಿದ ಸೇವೆ ನಮಗೆ ಸ್ಮರಣೀಯವಾಗಿದೆ.

ಮನುಷ್ಯನಿಗೆ ಮೇಲೆರಲು ಉತ್ಸಾಹ ಎಂಬ ಗಾಳಿ ಬೇಕು. ಜೀವನದಲ್ಲಿ ಏರುಪೇರು ಇರುತ್ತದೆ. ಏನೇ ಬರಲಿ ಜೀವನ ಉತ್ಸಾಹ ಕಳೆದುಕೊಳ್ಳಬಾರದು. ಜೀವನದಲ್ಲಿ ಆರೋಗ್ಯ,  ನೆಮ್ಮದಿ ಇರಲಿ ಎಂದು ಹೇಳಿದರು.

ಬೆಳ್ಳಿ ಬೆತ್ತ ತಿರಸ್ಕಾರ –

ಸ್ನೇಹಿತರ ನೀಡಿದ ಬೆಳ್ಳಿ ಬೆತ್ತವನ್ನು ನಯವಾಗಿ ತಿರಸ್ಕರಿಸಿದ ಸ್ವಾಮಿಜಿಗಳು. ನಾನು ನಿಮ್ಮ ಸ್ನೇಹಕ್ಕೆ ಮೊದಲು ಆದ್ಯತೆ. ಗವಿಸಿದ್ದೇಶ ನನಗೆ ಎರಡು ಜತೆ ಬಟ್ಟೆ. ಎರಡು ಹೊತ್ತು ಊಟ ಕೊಟ್ಟಿದ್ದಾನೆ.ಅಷ್ಟು ನನ್ನ ಜೀವನಕ್ಕೆ ಸಾಕು ಎಂದರು.

ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕರಾದ ಎಲ್.ಎಫ್. ಪಾಟೀಲ್ ಅವರು ಮಾತನಾಡಿ, ಅಂತರಂಗ ಶುದ್ಧಿ ಮಾಡಿಕೊಳ್ಳಬೇಕು. ವಯಸ್ಸಾಯಿತು ಎನ್ನುವುದಕ್ಕಿಂತ ಅಂತರಂಗವನ್ನು ತೆರೆದುಕೊಳ್ಳುತ್ತಾ, ಜ್ಞಾನಮಾರ್ಗದಲ್ಲಿ ಜೀವನ ನಡೆಸಬೇಕು ಎಂದರು.

ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅವರು ಮಾತನಾಡಿ, ಗುರುಗಳ ಬಗ್ಗೆ ನಿಮ್ಮ ಪ್ರೀತಿ ಮತ್ತು ಕಾಳಿಜಿ ನಮ್ಮನ್ನು ಮತ್ತಷ್ಚು ಉಲ್ಲಾಸ ಭರಿತರನ್ನಾಗಿ ಮಾಡುತ್ತದೆ ಎಂದರು.

ಪ್ರಸಾದ ನಿಲಯದ ಒಂದು ದಿನದ ಖರ್ಚನ್ನು 1997-98 ನೇ ಸಾಲಿನ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳು ಪ್ರತಿ ವರ್ಷ ನೀಡುವ ವಾಗ್ದಾನ ಮಾಡಿದರು. ಪ್ರತಿ ವರ್ಷವೂ ಡಿ. 25 ರಂದು ಸೇರಿ,  ಪ್ರಸಾದ ನಿಲಯದ ವೆಚ್ಚವನ್ನು ಭರಿಸಲು ತೀರ್ಮಾನಿಸಲಾಯಿತು. ಇದಕ್ಕಾಗಿ ತಗಲುವ ವೆಚ್ಚವನ್ನು ಪ್ರತಿಯೊಬ್ಬರು ಶೇರ್ ಮಾಡಿಕೊಳ್ಳಲು ಸರ್ವರು ಸಮ್ಮತಿ ಸೂಚಿಸಿದರು.

 ಗುರುಗಳಾದ ಬಿ.ಎಸ್. ಹಡಗಲಿ, ಪರೀಕ್ಷಿತರಾಜ ದಯಾನಂದ ಸಾಳುಂಕಿ ಅವರು ಮಾತನಾಡಿದರು.

ಅಧ್ಯಕ್ಷತೆಯನ್ನು ವೀರೇಶ ದೇವರ ವಹಿಸಿಕೊಂಡಿದ್ದರು.

ಎಂ ಎಸ್ ಬಾಚಲಾಪುರ, ವೀರೇಶ ಕಾತರಕಿ, ಐ.ಬಿ. ಅಂಗಡಿ, ಎಂ ಆರ್ ಹವಳದ, ಕೆ ಸಿ ಮೇಟಿ, ಗವಿಸಿದ್ದಪ್ಪ ಕೊಪ್ಪಳ. ನಾಮದೇವಪ್ಪ ಉಂಕಿ, ಎಸ್ ಎಫ್ ಜಾಲಿಹಾಳ.‌ ಎಸ್ ಬಿ ಕೊತಬಾಳ. ವಿರುಪಾಕ್ಷಪ್ಪ ಗಡ್ಡದ ಇದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಸೋಮರಡ್ಡಿ ಅಳವಂಡಿ ಮಾಡಿದರು. ಗುರುಗಳ ಸನ್ಮಾನ ಕಾರ್ಯಕ್ರಮವನ್ನು ವೀಣಾ ಮತ್ತು ರಾಜು ಕಬಾಡಿ ಅವರು ನಡೆಸಿಕೊಟ್ಟರು. ಪ್ರಾರ್ಥನೆಯನ್ನು  ಸುಜಾತ ಕರಣಂರಿಂದ ಮಾಡಲಾಯಿತು.  ಝಾಕೀರ ಸ್ವಾಗತಿಸಿದರು. ಪ್ರಸ್ತಾವಿಕ ರಾಚಮ್ಮ ಮಾತನಾಡಿದರು. ಶ್ರೀಶೈಲ ಅಳವಂಡಿ ವಂದನಾರ್ಪಣೆ ಮಾಡಿದರು.

Get real time updates directly on you device, subscribe now.

Comments are closed.

error: Content is protected !!