ಗವಿಮಠ ಶ್ರೀಗಳ ಪದವಿ ಗೆಳೆಯರ ರಜತ ಸಂಭ್ರಮ, ಗುರುವಂದನಾ ಕಾರ್ಯಕ್ರಮ
ಕೊಪ್ಪಳ
ಗವಿಮಠದ 18 ನೇ ಪಿಠಾಧಿಪತಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಪದವಿ ಗೆಳೆಯರ ರಜತ ಸಂಭ್ರಮ ಹಾಗೂ ಗುರವಂದನಾ ಕಾರ್ಯಕ್ರಮ ಡಿ. 25 ರಂದು ಕೊಪ್ಪಳ ನಗರದ ಗವಿಮಠದ ಮಹಾವಿದ್ಯಾಲಯದ ಆವರಣದಲ್ಲಿ ಬೆಳಗ್ಗೆ 10.30 ಕ್ಕೆ ಹಮ್ಮಿಕೊಳ್ಳಲಾಗಿದೆ.
ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ 1997-98 ನೇ ಸಾಲಿನ (ಪದವಿ ಅಂತಿಮ ವರ್ಷದ) ಕಲಾ ಪದವಿ ವಿದ್ಯಾರ್ಥಿಗಳ ಸ್ನೇಹಕ್ಕೆ ಈಗ 25 ವರ್ಷಗಳ ಸ್ನೇಹ ಸಂಭ್ರಮ. ಈ ಹಿನ್ನೆಲೆಯಲ್ಲಿ ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ಸಾನಿಧ್ಯವನ್ನು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ವಹಿಸುವರು. ಅಧ್ಯಕ್ಷಕೆಯನ್ನು ಎಸ್.ಜಿ. ವಿ.ಟಿ. ಸದಸ್ಯರಾದ ಶ್ರೀ ವೀರೇಶ ದೇವರು ವಹಿಸವರು.
ಗುರುಗಳಾದ ಎಂ.ಎಂ. ಇಂಡಿ, ಎಲ್.ಎಫ್.ಪಾಟೀಲ್, ಅಲ್ಲಮಪ್ರಭು ಬೆಟ್ಟದೂರು, ಎಂ.ಎಂ. ಕಂಬಾಳಿಮಠ, ಪಾರ್ವತಿ ಪೂಜಾರ, ಜೆ.ಎಸ್. ಪಾಟೀಲ್, ಎಂ.ಎಸ್. ಪಾಟೀಲ್, ಬಿ.ಎಸ್.ಹಡಗಲಿ, ಪರೀಕ್ಷಿತರಾಜ, ಆಯ್.ಬಿ. ಅಂಗಡಿ, ಬಸವರಾಜ ಪೂಜಾರ, ವೀರೇಶ ಕಾತರಕಿ, ದಯಾನಂದ ಸಾಳುಂಕಿ, ಎಂ.ಆರ್. ಹವಳದ ಅವರು ಸೇರಿದಂತೆ ಇತರೆ ಸಿಬ್ಬಂದಿ ವರ್ಗವೂ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ.
ಗುರುಗಳ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ 1997-98 ನೇ ಸಾಲಿನ ಅಷ್ಟು ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಪ್ರಯತ್ನವಾಗಿದ್ದು,ಕೆಲವೊಬ್ಬರು ಸಂಪರ್ಕ ಸಾಧ್ಯವಾಗಿಲ್ಲ, ಕಾರಣ ಇದನ್ನೇ ಅಹ್ವಾನ ಎಂದು ಭಾವಿಸಿ ಆಗಮಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9845224273 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
Comments are closed.