ಸಂಸದರ ಅಮಾನತ್ತು ಪ್ರಜಾಪ್ರಭುತ್ವದ ಕಗ್ಗೊಲೆ-ರಾಘವೇಂದ್ರ ಹಿಟ್ನಾಳ
:
ಕೊಪ್ಪಳ : ಸಂಸತ್ ಭವನದಲ್ಲಿ ನಡೆದ ದುರ್ಘಟನೆ ಪ್ರದಾನಿ ನರೇಂದ್ರ ಮೋದಿ ಕೇಂದ್ರದ ಸಚಿವರಾದ ಅಮೀತ್ ಶಾರವರ ಆಡಳಿತದ ವೈಪಲ್ಯವನ್ನು ಎತ್ತಿ ತೋರಿಸುತ್ತಿದೆ. ಕೇಂದ್ರ ಸರಕಾರದ ಆಡಳಿತದ ವೈಪಲ್ಯ ಇದು ತೋರುತ್ತಿದೆ. ಈ ಘಟನೆ ಕೇಂದ್ರ ಸರಕಾರದ ದುರಾಡಳಿತದ ವ್ಯವಸ್ಥೆಯನ್ನು ಇಡೀ ದೇಶದ ಜನ ನೋಡಿದ್ದಾರೆ. ವಿರೋಧ ಪಕ್ಷವಾಗಿ ಅದನ್ನು ಖಂಡನೆ ಮಾಡಿದ ಸಂದರ್ಭದಲ್ಲಿ ಸಂಸದರನ್ನು ಅಮಾನತ್ ಮಾಡಿರುವುದು ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಕೇಂದ್ರ ಸರಕಾರದ ವಿರುದ್ದ ಹರಿಹಾಯ್ದರು. ಕೇಂದ್ರ ಸರಕಾರ ತೆಗೆದುಕೊಂಡಿರುವ ತೀರ್ಮಾನ ಇಡೀ ದೇಶಕ್ಕೆ ಕೊಟ್ಟ ಕೆಟ್ಟ ಸಂದೇಶ . ಮುಂದಿನ ಚುನಾವಣೆಯಲ್ಲಿ ದೇಶದ ಜನತೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
ಕೊಪ್ಪಳ : ವಿಶ್ವದಲ್ಲಿಯೇ ಅತೀ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ಭಾರತ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಸಂಸತ್ ಭವನಕ್ಕೆ ಭದ್ರತೆ ಕೊಡುವಲ್ಲಿ ವಿಫಲರಾಗಿದ್ದಾರೆ. ಈಡಿ, ಸಿಬಿಐ ಮೂಲಕ ಎಲ್ಲರನ್ನೂ ಹತ್ತಿಕ್ಕುವ ಕೆಲಸ ಮಾಡುತ್ತಿದ್ಧಾರೆ. ದೇಶದ ಜನ ಇದೆಲ್ಲವನ್ನೂ ಗಮನಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಆಕ್ರೋಶ ವ್ಯಕ್ತಪಡಿಸಿದರು.
Comments are closed.