ಸಿನಿಮೀಯ ರೀತಿಯಲ್ಲಿ ಬೈಕ್ ಕಳ್ಳನ ಬಂಧನ: ೮ ಬೈಕ್ ವಶಕ್ಕೆ
ಕೊಪ್ಪಳ : ಸಿನಿಮಿಯ ರೀತಿಯಲ್ಲಿ ಕಳ್ಳನನ್ನು ಬೈಕ್ ನಲ್ಲಿ ಚೇಸ್ ಮಾಡಿದ ಕೊಪ್ಪಳ ಪೋಲಿಸರು ಕೊನೆಗೂ ಕಳ್ಳನನ್ನು ಬಂಧಿಸಿ ೮ ಬೈಕ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಪ್ಪಳ ನಗರ ಪೊಲೀಸ್ ಠಾಣೆ ಪೋಲಿಸರು ಅಂತರ ಜಿಲ್ಲಾ ದ್ವಿ-ಚಕ್ರ ವಾಹನ ಕಳ್ಳನ ಬಂಧಸಿ 08 ದ್ವಿ-ಚಕ್ರ ವಾಹನ ವಶ ಪಡಿಸಿಕೊಂಡಿದ್ದಾರೆ
ಘಟನೆಯ ವಿವರ ಹೀಗಿದೆ:
ಅಪರಾಧ ವಿಭಾಗದ ಸಿಬ್ಬಂದಿಯವರು ಕಳ್ಳತನವಾದ ದ್ವಿ-ಚಕ್ರ ವಾಹನಗಳ ಕಳ್ಳರ ಶೋಧನೆಯಲ್ಲಿದ್ದಾಗ ಕೊಪ್ಪಳ ನಗರ ಪೊಲೀಸ್ ಠಾಣೆಯ ಅಪರಾಧ ಸಂ: 152/2023 ಕಲಂ: 379 ಐಪಿಸಿ ಪ್ರಕರಣದಲ್ಲಿ ಕಳ್ಳತನವಾದ ಹಿರೋ ಪ್ಯಾಷನ್ ಪ್ರೋ ನಂಬರ ಪ್ಲೇಟ್ ಇಲ್ಲದ ಮೋಟಾರ ಸೈಕಲ್ ಮೇಲೆ ಒಬ್ಬ ವ್ಯಕ್ತಿಯು ಕೊಪ್ಪಳ ನಗರದ ಜಿಲ್ಲಾ ಆಸ್ಪತ್ರೆಯಿಂದ ಕೊಪ್ಪಳ ನಗರದೊಳಗೆ ಹೊರಟಿದ್ದಾಗ ಅಪರಾಧ ವಿಭಾಗದ ಸಿಬ್ಬಂದಿಯವರನ್ನೊಳಗೊಂಡ ತಂಡದವರು ಸದರಿ ಆರೋಪಿತನಿಗೆ ನಿಲ್ಲುವಂತೆ ಕೈ ಸನ್ನೆ ಮಾಡಿದ್ದಾರೆ. ಅಪರಾಧ ವಿಭಾಗದ ತಂಡದವರನ್ನು ನೋಡಿ ಪೊಲೀಸ್‌ರು ಅಂತಾ ಗುರುತಿಸಿ ತನ್ನ ಮೋಟಾರ ಸೈಕಲ್‌ನ್ನು ಗಂಗಾವತಿ ರಸ್ತೆ ಕಡೆಗೆ ಚಲಾಯಿಸಿಕೊಂಡು ಹೊರಟಿದ್ದು ಆಗ ಅಪರಾಧ ವಿಭಾಗದ ತಂಡದವರು ಎರಡು ಮೋಟಾರ ಸೈಕಲ್‌ಗಳ ಮೇಲೆ ಅವನನ್ನು ಬೆನ್ನತ್ತಿದಾಗ ಮುಂದೆ ರೈಲ್ವೇ ಹಳಿ ಗೇಟ್ ಹಾಕಿದ್ದರಿಂದ ಸದರಿಯವನು ತನ್ನ ಮೋಟಾರ ಸೈಕಲ್‌ನ್ನು ಅಲ್ಲಿಯೇ ನಿಲ್ಲಿಸಿ ಓಡಿ ಹೋಗಲು ಪ್ರಯತ್ನಿಸುತ್ತಿರುವಾಗ ಅಪರಾಧ ವಿಭಾಗದ ತಂಡದವರು ಅವನನ್ನು ಅಲ್ಲಿಯೇ ಹಿಡಿದುಕೊಂಡು ಠಾಣೆಗೆ ತಂದು ಹಾಜರಪಡಿಸಿದ್ದಾರೆ. ಕೊಪ್ಪಳ ನಗರ ಪೊಲೀಸ್ ಠಾಣೆಯ ಅಪರಾಧ ಸಂ: 152/2022 ರಲ್ಲಿ ದ್ವಿ-ಚಕ್ರ ವಾಹನವನ್ನು ಸೇರಿದಂತೆ ರಾಮನಗರ ಜಿಲ್ಲೆಯ ಮಾಗಡಿ, ಬೆಂಗಳೂರು ನಗರದ ಕೆಂಗೆರಿಯ ಕುಂಬಗಡ್ಡಿ, ತುಮಕೂರ ಜಿಲ್ಲೆಯ ಹೆಟ್ಟೂರು, ಬೆಂಗಳೂರಿನ ವಿಜಯನಗರ ಏರಿಯಾದಲ್ಲಿ, ಕಾರಟಗಿ, ಗಂಗಾವತಿ, ರಾಯಚೂರ ಜಿಲ್ಲೆಯ ಗೋನಾಳ ಕಡೆಗಳಲ್ಲಿ ಒಟ್ಟು 07 ದ್ವಿ-ಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದು, ಅರೋಪಿತನಿಂದ ಒಟ್ಟು 08 ದ್ವಿ-ಚಕ್ರ ವಾಹನಗಳನ್ನು ವಾಹನಗಳನ್ನು ಜಪ್ತಿಪಡಿಸಿಕೊಂಡು ದಸ್ತಗಿರಿಯಾದ ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಹಾಜರಪಡಿಸಲಾಗಿದೆ.
ಈ ಪ್ರಕರಣ ಭೇದಿಸುವಲ್ಲಿ ಎಸ್ಪಿ ಶ್ರೀಮತಿ, ಯಶೋಧಾ ವಂಟಿಗೋಡ ಹಾಗೂ ಶರಣಬಸಪ್ಪ ಸುಬೇದಾರ ಡಿ.ಎಸ್.ಪಿ. ಮಾರ್ಗದರ್ಶನದಲ್ಲಿ ಕೊಪ್ಪಳ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಸಂತೋಷ ಡಿ. ಹಳ್ಳೂರ ಪಿ.ಐ. ಆಂಜನೇಯ ಡಿ.ಎಸ್. ಪಿ.ಐ ಶ್ರೀಮತಿ, ಉಮೇರಾಬಾನು ಪಿ.ಎಸ್.ಐ(ಕಾ&ಸು), . ಶರಣಪ್ಪ ಕಟ್ಟಿಮನಿ ಪಿ.ಎಸ್.ಐ(ತನಿಖೆ) ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ರಾಜಶೇಖರ ಹೆಚ.ಸಿ, ಖಾಜಾಸಾಬ ಹೆಚ.ಸಿ, ದೇವೇಂದ್ರಪ್ಪ ಪಿಸಿ, ಹನುಮೇಶ ಪಿಸಿ ತನಿಖಾ ವಿಭಾಗದವರಾದ ಸುಭಾಸ ಸಜ್ಜನ್ ಹೆಚ್.ಸಿ, ಕನಕಪ್ಪ ಹೆಚ.ಸಿ ಜೀಪ ಚಾಲಕರುಗಳಾದ ಬಸವರಾಜ ಮಣ್ಣೂರ ಎಪಿಸಿ ಮತ್ತು ಶಂಕರ ಎಪಿಸಿ ರವರು ಶ್ರಮಿಸಿದ್ದು ಕರ್ತವ್ಯಕ್ಕೆ ಮೆಚ್ಚಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳರವರು ಶ್ಲಾಘಿಸಿದ್ದಾರೆ.
Comments are closed.